ದಚ್ಚು ಅಭಿಮಾನಿಗಳ ವಿರುದ್ಧ ಎಫ್‌ಐಆರ್

ಬೆಂಗಳೂರು, ಫೆ 18- ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಅತಿರೇಕದ ವರ್ತನೆ ತೋರಿದ ದಚ್ಚು ಅಭಿಮಾನಿಗಳ ಮೇಲೆ ಆರ್‌ಆರ್‌ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದ ವೇಳೆ ಸಾವಿರಾರು ಅಭಿಮಾನಿಗಳ ದಂಡು ಮನೆಯ ಮುಂದೆ ಜಮಾಯಿಸಿತ್ತು. ಆ ವೇಳೆ ಅಭಿಮಾನಿಗಳು ದರ್ಶನ್ ನೋಡುವ ಅತುರದಲ್ಲಿ ನೂಕ್ಕುನೂಗ್ಗಲು ಉಂಟು ಮಾಡಿ ಪೋಲಿಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಅಂದು ಕೆಲ ಅಭಿಮಾನಿಗಳು ತೋರಿದ ಅತಿರೇಕದ ವರ್ತನೆಯಿಂದಾಗಿ, ಅಕ್ಕ-ಪಕ್ಕದ ನಿವಾಸಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿ, ಪ್ರಕರಣ ದಾಖಲಿಸಿದ್ದಾರೆ. ಡಿ ಬಾಸ್ ಹುಟ್ಟು ಹಬ್ಬಕ್ಕೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ದಂಡು ರಾಜರಾಜೇಶ್ವರಿ ನಗರದಲ್ಲಿರುವ ದಚ್ಚು ನಿವಾಸದಲ್ಲಿ ಜಮಾಯಿಸಿತ್ತು. ಬರ್ತಡೇ ವಿಶ್ ಮಾಡಲು ಅಭಿಮಾನಿಗಳು ಬಂದಿದ್ದಾಗ ಕರ್ತವ್ಯ ನಿರತ ಪೋಲಿಸ್ ಮೇಲೆ ದಚ್ಚು ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ.

ಭದ್ರತೆ ನೀಡುತ್ತಿದ್ದ ವೇಳೆ ದಚ್ಚು ಅಭಿಮಾನಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಇದ್ದರಿಂದಾಗಿ ಪೇದೆ ದೇವರಾಜು ಕಣ್ಣಿಗೆ ಗಾಯಗಳಾಗಿದ್ದು, ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇದೀಗ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದಚ್ಚು ಅಭಿಮಾನಿಗಳು ಹಾಗೂ ಹುಟ್ಟುಹಬ್ಬದ ಆಯೋಜಕರ ವಿರುದ್ಧ ಸ್ಥಳೀಯರು ದೂರು ದಾಖಲಿಸಿದ್ದಾರೆ.

ಬಹಳ ಅರ್ಥಪೂರ್ಣವಾಗಿ ಮಾದರಿಯಾ ಹುಟ್ಟುಹಬ್ಬವನ್ನು ಡಿ ಬಾಸ್ ಆಚರಿಸಿಕೊಂಡರು. ಆದರಿ ಅಭಿಮಾನಿಗಳ ಮಾಡಿರುವ ಅತಿರೇಕದ ವರ್ತನೆಯಿಂದಾಗಿ ಹೀಗೆ ಬ್ಯಾಕ್ ಟೂ ಬ್ಯಾಕ್ Pಪ್ರಕರಣ ದಾಖಲಾಗುತ್ತಿರುವುದರಿಂದ ದರ್ಶನ್ ಮುಜುಗರಕ್ಕೊಳಗಾಗುವಂತಾಗಿದೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳನ್ನು ನಿರಾಸೆ ಮಾಡಬಾರದೆಂಬ ಸಲುವಾಗಿ ಅಂದು ದರ್ಶನ್ ಸ್ವತಃ ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಮಾಡಿದ್ದರು. ಆದರೂ ಅಭಿಮಾನಿಗಳ ಈ ವರ್ತನೆ ದರ್ಶನ್ ಬೇಸರ ತರಿಸಿದೆ ಎಂದರೆ ತಪ್ಪಾಗಲಾರದು.

Leave a Comment