ದಕ್ಷಿಣ ಭಾರತ ಶೈಲಿಯಲ್ಲಿ ಸಲಿಂಗಗಳ ವಿವಾಹ

ಸಂದೀಪ್ ಕೇವಲ ಮದುವೆಯ ಅನಿಸಿಕೆ ಮಾತ್ರ ಹಂಚಿಕೊಂಡಿಲ್ಲ. ಕಾರ್ತಿಕ್‌ನನ್ನು ಭೇಟಿ ಮಾಡಿದ್ದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಸೆಪ್ಟೆಂಬರ್ ೨೦೧೨ ರಲ್ಲಿ ಕಾರ್ತಿಕ್ ಡೇಟಿಂಗ್ ವೆಬ್ ಸೈಟ್‌ನಲ್ಲಿ ನೋಡಿ ನನಗೆ ಸಂದೇಶ ಕಳುಹಿಸಲು ನಿರ್ಧರಿಸಿದ. ಅವನು ಸಂದೇಶ ಕಳುಹಿಸುತ್ತಿದ್ದಂತೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡಿದೆ. ಆನ್‌ಲೈನ್ ಮೂಲಕ ನಡೆಸಿದ ಈ ಸಂದೇಶ ವಿನಿಮಯ ಬಹುಕಾಲದವರೆಗೆ ಮುಂದುವರೆಯಿತು. ಆ ವರ್ಷ ನವೆಂಬರ್ ತಿಂಗಳಿನಲ್ಲಿ ಮೊದಲ ಡೇಟಿಂಗ್‌ಗೆ ತೆರಳಿದೆವು. ಆ ಅನುಭವ ಹೇಗಿತ್ತು ಎಂದರೆ ಈ ಹಿಂದೆ ಈಗಾಗಲೇ ನಾವಿಬ್ಬರು ಪರಿಚಿತವಾಗಿದ್ದೆವು ಎಂದು ಅನ್ನಿಸಿತು.

ಅಮೆರಿಕದ  ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಭಾರತದಲ್ಲಿ ನಡೆದ ಸಲಿಂಗ ಕಾಮದ ಮದುವೆ ರೋಮಾಂಚನಕ್ಕೆ ಕಾರಣವಾಯಿತು. ಅದುವೆ ಸಂದೀಪ್ ಮತ್ತು ಕಾರ್ತಿಕ್ ವಿವಾಹ ದಕ್ಷಿಣ ಭಾರತದ ಶೈಲಿಯಲ್ಲಿ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ವಿಶಿಷ್ಟವಾಗಿ ನಡೆಯಿತು.

marriage6ಹೀಗೆ ಹಲವು ತಿಂಗಳುಗಳ ಕಾಲ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾ ಹೋದೆವು. ಮೇ ೨೦೧೩ರಲ್ಲಿ ನಾವಿಬ್ಬರು ಭಾರತೀಯ ಶೈಲಿಯಲ್ಲಿ ಎರಡೂ ಕುಟುಂಬಗಳಿಗೆ ಪರಸ್ಪರ ಪರಿಚಯ ಮಾಡಿಕೊಳ್ಳಲು ಮುಂದಾದೆವು. ಆದರೆ ಮೊದಲು ಎರಡು ಕುಟುಂಬಗಳಿಗೂ ಪರಿಚಯ ಮಾಡಿಕೊಳ್ಳಲು ಸ್ವಲ್ಪ ಹೆದರಿಕೆಯಾಯಿತು. ಒಂದು ದಿನ ನನ್ನ ತಂದೆ-ತಾಯಿಗೆ ಫೋನ್ ಮೂಲಕ ಆಶ್ಚರ್ಯಕರ ರೀತಿಯಲ್ಲಿ ಅತ್ಯಂತ ಸಂತೋಷವಾಗಿ ವಿಚಾರ ತಿಳಿಸಿದೆ.

ಫೆಬ್ರವರಿ ೨೦೧೪ ರಲ್ಲಿ ಬಿಸಿ ಗಾಳಿ ಬಲೂನಿನ ಮೇಲೆ ನಾಪಾದಲ್ಲಿ ರೈಡ್ ಮಾಡುತ್ತಿದ್ದ ವೇಳೆ ಕಾರ್ತಿಕ್ ನಾನು ನಿನ್ನ ಇಷ್ಟ ಪಡುತ್ತೇನೆ ಎಂದು ನಿವೇದಿಸಿದ. ಆ ನಂತರ ಮಾರ್ಚ್ ತಿಂಗಳಿನಲ್ಲಿ ಮತ್ತೆ ಪ್ರೇಮ ನಿವೇದನೆ ಮಾಡಿಕೊಳ್ಳಲು ತೀರ್ಮಾನಿಸಿದ.

marriage4ಅಲ್ಲಿಂದ ವಿವಾಹದ ಮಾತುಕತೆಗಳು ಸರಿಯಾದ ದಿಕ್ಕಿನಲ್ಲಿ ಸಾಗಿತು. ಧಾರ್ಮಿಕದ ಬಗ್ಗೆ ಹೆಚ್ಚು ನಂಬಿಕೆ ಇರುವ ತನ್ನ ತಂದೆ-ತಾಯಿಗಳು ಸಾಂಪ್ರದಾಯಿಕ ಪೂಜೆ, ಮಂತ್ರಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನನ್ನ ತಾಯಿ ಕೂಡ ಮಲಯಾಳಿ ಸಂಸ್ಕೃತಿಯ ರೀತಿಯಲ್ಲಿ ಮದುವೆ ಶಾಸ್ತ್ರ ನಡೆಸಲು ಉತ್ಸುಕರಾಗಿದ್ದರು.ಇದಕ್ಕಾಗಿ ನವಿಲು ವಿನ್ಯಾಸವಿರುವ ಸೀರೆಗಳನ್ನು ಭಾರತದಿಂದಲೇ ಖರೀದಿಸಲಾಯಿತು. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿವಾಹ ಮಹೋತ್ಸವ ನೆರವೇರಿಸಲು ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿರುವ ಎಲ್ಲ ಸಂಬಂಧಿಕರು ಒಟ್ಟಾಗಿ ಸೇರಿ ಅದ್ದೂರಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಸಪ್ತ ಪದಿಯ ಮೊದಲ ಹೆಜ್ಜೆಯನ್ನು ಕಡೆಗೂ ಅಂತಿಮ ಗೊಳಿಸಲಾಯಿತು. ಎಲ್ಲರೂ ಸಂತೋಷದಿಂದ, ನಗುವಿನಿಂದಲೇ ಜಾಗತಿಕ ಮಟ್ಟದಲ್ಲಿ ಆಗಮಿಸಿದ್ದ ಸ್ನೇಹಿತರು ಕುಟುಂಬ ಸದಸ್ಯರು ಮದುವೆ ಮಂಟಪ ಹುಡುಕುವ ಕಾರ್ಯದಲ್ಲಿ ತಲ್ಲೀನರಾದರು. ಹೇಳಿ ಕೇಳಿ ಇದು ಸಲಿಂಗಿಗಳ ವಿವಾಹವಾಗಿದ್ದು ಒಂದು ರೀತಿಯ ವಿಭಿನ್ನ ವಿವಾಹವಾಗಿತ್ತು. ಆದರೆ ಮದುವೆಯ ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಇರಲಿಲ್ಲ. ಇದು ಹೇಗಿತ್ತು ಎಂದರೆ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತು ಹೇಗೆ ಬದಲಾಗುತ್ತದೆ ಎಂಬುದಕ್ಕೆ ಈ ಮದುವೆ ಸಾಕ್ಷಿಯಾಯಿತು.

marriage7ಪ್ರತಿಯೊಂದು ಕ್ಷಣವನ್ನು ಅತ್ಯಂತ ಸಂತೋಷದಿಂದ ಅನುಭವಿಸುವಂತೆ ಏಕೈಕ ಸಲಹೆ ಮೂಡಿ ಬಂದಿತು. ಇದೇ ಮೊದಲ ಬಾರಿಗೆ ಒಬ್ಬೊರಿಗೊಬ್ಬರ ಕೈಯನ್ನು ಹಿಡಿದುಕೊಂಡು ಸಪ್ತಪದಿ ತುಳಿದೆವು. ಹಾಗೆ ನೋಡಿದರೆ ಇದು ಸಣ್ಣ ವಸ್ತುವೆಂದು ಅಂದುಕೊಂಡರೂ ಇದನ್ನು ದೊಡ್ಡ ರೀತಿಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.

ಹೀಗೆ    ವಿವಾಹ ಮಹೋತ್ಸವದ  ಎಲ್ಲ ಶಾಸ್ತ್ರಗಳು ಮುಗಿಯಿತು. ಸಂದೀಪ್ ಮತ್ತು ಕಾರ್ತಿಕ್ ತನ್ನ ವಿವಾಹದ ಅನುಭವವನ್ನು ಹಂಚಿಕೊಂಡರು. ಇವೆಲ್ಲವೂ ಶಾಸ್ತ್ರೋಕ್ತವಾಗಿ ಮುಗಿದ ನಂತರ ಸಂಬಂಧಿಕರು ಹಿತೈಷಿಗಳು ಶುಭವಾಗಲಿ ಎಂದು ಹಾರೈಸಿದರು. ಸಲಿಂಗಿ ವಿವಾಹಗಳಿಗೆ ವಿರೋಧ ವ್ಯಕ್ತಪಡಿಸುವಂತಹ ಈ ದಿನಗಳಲ್ಲಿ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿ ನವ ಜೋಡಿಗೆ ಆಶೀರ್ವದಿಸಿದರು.

Leave a Comment