ದಕ್ಷಿಣ ಕರ್ನಾಟಕದ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆ

ಬೆಂಗಳೂರು, ಫೆ 18- ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುವ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಇಂತಹ ವಾಹನಗಳಲ್ಲಿ ಬಳಸುವ ಎಲೆಕ್ಟ್ರಿಕ್ ಬ್ಯಾಟರಿಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ಲೋಹದ ಲಿಥಿಯಂ ನಿಕ್ಷೇಪಗಳು ಬೆಂಗಳೂರಿನಿಂದ ಸುಮಾರು ೧೦೦ ಕಿ.ಮೀ. ದೂರದಲ್ಲಿ ಗುರುತಿಸಲಾಗಿದೆ. ಪರಮಾಣು ಖನಿಜ ನಿರ್ದೇಶನಾಲಯದ ಸಂಶೋಧಕರು ದಕ್ಷಿಣ ಕರ್ನಾಟಕ ಜಿಲ್ಲೆಯ ಸಣ್ಣ ಪ್ರದೇಶದಲ್ಲಿ ೧೪,೧೦೦ ಟನ್ ಲಿಥಿಯಂ ನಿಕ್ಷೇಪವನ್ನು ಪತ್ತೆ ಹಚ್ಚಿದ್ದಾರೆ ಎಂದು ಕರೆಂಟ್ ಸೈನ್ಸ್ ನಿಯತಕಾಲಿಕೆ ಪ್ರಕಟಿಸಿರುವ ಪತ್ರದಲ್ಲಿ ವಿವರಿಸಲಾಗಿದೆ.
೩೦,೩೦೦ ಟನ್ ಕಚ್ಚಾ ಲೋಹದಲ್ಲಿ ೧೪,೧೦೦ ಟನ್ ಲಿಥಿಯಂ ಲೋಹ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನದಲ್ಲಿ ಸಾಕಷ್ಟು ತಜ್ಞತೆ ಹೊಂದಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಎನ್. ಮುನಿ ಚಂದ್ರಯ್ಯ ಹೇಳಿದ್ದಾರೆ. ” ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಲಿಥಿಯಂ ನಿಕ್ಷೇಪ ಅತ್ಯಂತ ಕಡಿಮೆಯಿದೆ. ಚಿಲಿಯಲ್ಲಿ ೮.೬ ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ ೨.೮ ಮಿಲಿಯನ್ ಟನ್ ಮತ್ತು ಅರ್ಜೆಂಟೀನಾದಲ್ಲಿ ೧.೭ ಮಿಲಿಯನ್ ಟನ್ ಲಿಥಿಯಂ ನಿಕ್ಷೇಪ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ಭಾರತ ಲಿಥಿಯಂ ಲೋಹವನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದೆ ಪತ್ರದಲ್ಲಿ ವಿವರಿಸಲಾಗಿದೆ.

Leave a Comment