ದಂತ ವೈದ್ಯನ ಪ್ರಿಯತಮೆ ಆತ್ಮಹತ್ಯೆಗೆ ಶರಣು

ಬೆಂಗಳೂರು, ಫೆ. ೨೩- ದಂತವೈದ್ಯನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ರಾಜಾಜಿನಗರ ನಿವಾಸಿ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಅವರ ಪತ್ನಿ ಹರ್ಷಿತಾಳೆ ದಂತವೈದ್ಯ ರೇವಂತ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ನಿನ್ನೆ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಇದಕ್ಕೂ ಮೊದಲು ಪತಿ ಸುಧೀಂದ್ರ ವಿರುದ್ಧ ಆರೋಪಿಸಿ ಡೆತ್‌ನೋಟ್ ಸಹ ಬರೆದಿಟ್ಟಿದ್ದಾಳೆ. ಈ ಸಂಬಂಧ ಆರ್‌ಆರ್ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹರ್ಷಿತಾಳೊಂದಿಗೆ ದಂತವೈದ್ಯ ಡಾ. ರೇವಂತ್ ಅಕ್ರಮ ಸಂಬಂಧ ಹೊಂದಿದ್ದ. ಪ್ರಿಯತಮೆಗಾಗಿ ತನ್ನ ಪತ್ನಿ ಕವಿತಾಳಿಗೆ ಇಂಜೆಕ್ಷನ್ ನೀಡಿ ಕತ್ತು ಸೀಳಿ ಹತ್ಯೆ ಮಾಡಿ ಕಳ್ಳತನದ ಪ್ರಕರಣವೆಂದು ಬಿಂಬಿಸಲು ಪ್ರಯತ್ನ ನಡೆಸಿದ್ದ. ಆನಂತರ ಹೆಂಡತಿಯ ಹತ್ಯೆ ಮಾಡಿದ ದಂತವೈದ್ಯ ಡಾ. ರೇವಂತ್, ಬೆದರಿ ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ಹಳಿಗಳ ಪಕ್ಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ.
ರೈಲು ಹಳಿ ಬಳಿ ನಿಂತಿದ್ದ ವೈದ್ಯನ ಕಾರನ್ನು ನೋಡಿ ಪೊಲೀಸರು ರೇವಂತ್ ಎಂದು ಪತ್ತೆ ಹಚ್ಚಿದ್ದರು. ನಂತರ ಕಡೂರು ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ದಂತವೈದ್ಯನ ಆತ್ಮಹತ್ಯೆ ಹಾಗೂ ವೈದ್ಯನಿಂದಲೇ ಹತ್ಯೆಗೊಳಗಾದ ಆಕೆಯ ಪತ್ನಿ ಕವಿತಾಳ ಸಾವಿನಿಂದ ಬೆದರಿರುವ ವೈದ್ಯನ ಪ್ರಿಯತಮೆ, ಬೆಂಗಳೂರಿನ ರಾಜಾಜಿನಗರ ನಿವಾಸಿ ಹರ್ಷಿತಾ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.

Leave a Comment