ಥ್ರಿಲ್ಲರ್ ಪಾನಿಪುರಿ

ಮೂವರು ಹುಡುಗರು ಹಾಗೂ ಮೂವರು ಹುಡುಗಿಯರ ನಡುವಿನ ಸ್ನೇಹ ಸಂಬಂಧದ ಕುರಿತಾದ ಕಥಾ ಹಂದರವಿರುವ ಪಾನಿಪುರಿಯಲ್ಲಿ ಸ್ನೇಹಕ್ಕಾಗಿ ಯಾವ ರೀತಿಯ ಸಂಕಷ್ಟ ಎದುರಿಸಬೇಕಾಗಿ ಬರುತ್ತದೆ ಎನ್ನುವುದನ್ನು ತೋರಿಸಲಾಗುತ್ತದೆ.

ಸಂಕಷ್ಟಕ್ಕೆ ಸಿಲುಕುವ ಸ್ನೇಹಿತರು ಯಾವ ರೀತಿ ಅದರಿಂದ ಹೊರಬರುತ್ತಾರೆ ಎನ್ನುವುದನ್ನು  ಥ್ರಿಲ್ಲರ್ ಅಂಶವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ದೇಶಕ ಕೆ.ಪಿ.ನವೀನ್ ಕುಮಾರ್ ಪಾನಿಪುರಿಯನ್ನು ತೆರೆಯ ಮೇಲೆ ನಿರೂಪಿಸಿದ್ದಾರೆ.

ಈ ಹಿಂದೆ ಜಿಂಕೆ ಮರಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಕೆ.ಪಿ.ನವೀನ್ ಕುಮಾರ್ ಅವರು ಕೆಲದಿನಗಳ ಬಿಡುವಿನ ನಂತರ ಪಾನಿಪುರಿಯನ್ನು ರೂಪಿಸಿದ್ದು ಯುವಕರನ್ನು ಕೇಂದ್ರೀಕರಿಸಿಕೊಂಡಿರುವ ಈ ಚಿತ್ರವೂ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎನ್ನುವುದು ಚಿತ್ರ ತಂಡದ ಅಭಿಪ್ರಾಯವಾಗಿದೆ.

ಪಾನಿಪುರಿಯು ಇದೇ ತಿಂಗಳ ೧೭ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಹಿನ್ನಲೆಯಲ್ಲಿ ಕಳೆದ ಸೋಮವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನವೀನ್ ಚಿತ್ರದ ಸಂಕಲನದ ವೇಳೆ ಚಿತ್ರ ನೋಡಿದಾಗ ಏಕೋ ತೃಪ್ತಿ ಆಗಲಿಲ್ಲ. ಹಾಗಾಗಿ ಮತ್ತಷ್ಟು ಉತ್ತಮಗೊಳಿಸಲು ಸುಮಾರು ೨೫% ರೀಶೂಟ್ ಮಾಡಿದೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡಲಿಲ್ಲ. ಬ್ಯಾಂಕ್ ದರೋಡೆಯ ಅಂಶವು ಚಿತ್ರದಲ್ಲಿರುವುದರಿಂದ ’ಎ’ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ಕಾಲೇಜ್ ಲೈಫ್ ವಿದ್ಯಾರ್ಥಿಗಳ ನಡುವಿನ ಸ್ನೇಹ, ವಿಶ್ವಾಸ ಈ ವಿಷಯಗಳ ಮೇಲೆ ಕಥೆ ಸಾಗುತ್ತದೆ.ಸ್ನೇಹಿತನಿಗೆ ಸಂಕಷ್ಟ ಎದುರಾದಾಗ ಉಳಿದ ಸ್ನೇಹಿತರೆಲ್ಲ ಎಂಥ ಸಾಹಸಕ್ಕೆ ಕೈಹಾಕುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ.

ಸಂಗೀತ ನಿರ್ದೇಶಕ ಸಂತೋಷ್ ಮಾತನಾಡಿ ಚಿತ್ರದಲ್ಲೇ ೫ ಹಾಡುಗಳಿದ್ದು ಎಲ್ಲ ಹಾಡುಗಳು ವಿಭಿನ್ನವಾಗಿ ಮೂಡಿ ಬಂದಿವೆ ಥ್ರಿಲ್ಲರ್ ಸಬ್ಜಕ್ಟ್ ಆಗಿರುವುದರಿಂದ ಪ್ರತಿ ೨೦ ನಿಮಿಷಗಳಿಗೊಮ್ಮೆ ಸಿನಿಮ್ ಛೇಂಜ್ ಓವರ್ ತೆಗದುಕೊಳ್ಳುತ್ತದೆ. ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ ಎಂದರೆ ಚಿತ್ರದ ನಿರ್ಮಾಪಕ ಸಿ.ಪುಟ್ಟರಾಜು ಮಾತನಾಡಿ ಮೊದಲ ಬಾರಿ ಸಿನಿಮಾ ನಿರ್ಮಾಣ ಮಾಡಿದ್ದೇವೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.ಚಿತ್ರದಲ್ಲಿ  ರೋಬೋ ಗಣೇಶ್ ಕೂಡ ಈ ಚಿತ್ರದಲ್ಲಿ ನೆಗೆಟೀವ್ ರೋಲ್ ಮಾಡಿದ್ದಾರೆ. ವೈಭವ್, ಸಂಜಯ್ ಹಾಗೂ ಜಗದೀಶ್ ನಾಯಕ ನಟರಾಗಿ ನಟಿಸಿದ್ದು ಕರ್ವ ಖ್ಯಾತಿಯ ಅನು, ದರ್ಶಿಕಾ ಹಾಗೂ ಅಕ್ಷಿತ ನಾಯಕಿಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Leave a Comment