ತ್ರಿವಳಿ ಕೊಲೆ : ಐವರ ಬಂಧನ

 

ಕಲಬುರಗಿ,ಜೂ.14-ಜಿಲ್ಲೆಯ ಸೇಡಂ ತಾಲ್ಲೂಕಿನ ಮೆದಕ ಗ್ರಾಮದಲ್ಲಿ ಬುಧವಾರ ಹೊಲದ ಹಂಚಿಕೆ ಹಾಗೂ ಹಳೆಯ ಸಾಲ ಮರಳಿ ನೀಡುವ ವಿಷಯದಲ್ಲಿ  ನಡೆದ ಮಲ್ಕಪ್ಪ ಮತ್ತು ಮಕ್ಕಳಾದ ಶಂಕ್ರೆಪ್ಪ ಮತ್ತು ಚನ್ನಪ್ಪ ಅವರ ಕೊಲೆ ಪ್ರಕರಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಶಪ್ಪ ತಂದೆ ಚಿನ್ನಯ್ಯಾ (55), ರಾಮಲು ತಂದೆ ಚಿನ್ನಯ್ಯಾ ಅವರನ್ನು ತೆಲಂಗಾಣ ರಾಜ್ಯದ ವಿಠಲಾಪೂರದಲ್ಲಿ, ಪದ್ಮಮ್ಮ ಗಂಡ ಆಶಪ್ಪ, ಲಾಲಮ್ಮ ಗಂಡ ಶರಣಪ್ಪ, ಪವಿತ್ರಾ ತಂದೆ ರಾಮಲು ಅವರನ್ನು ಕಾನಾಗಡ್ಡ ಗ್ರಾಮದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಗಳೆಯ ಮೇಳಿ, ಕೊಡಲಿ, ಒಂದು ಬಡಿಗೆ ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಣಮಂತ ತಂದೆ ಆಶಪ್ಪ, ಸೀನಪ್ಪ ತಂದೆ ರಾಮಲು ಹಾಗೂ ಶರಣಪ್ಪ ತಂದೆ ಚನ್ನಪ್ಪ ಎಂಬುವವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ.

@12bc = ಹಿನ್ನೆಲೆ

ಸೇಡಂ ತಾಲ್ಲೂಕಿನ ಮೇದಕ ಗ್ರಾಮದಲ್ಲಿ ಹೊಲದ ಹಂಚಿಕೆ ಮತ್ತು ಹಳೆಯ ಸಾಲ 50 ಸಾವಿರ ರೂಪಾಯಿ ಮರಳಿ ನೀಡುವ ವಿಷಯದಲ್ಲಿ ಗ್ರಾಮದ ಮಲ್ಕಪ್ಪ ತಂದೆ ಚಿನ್ನಯಾ ಹಾಗೂ ಆತನ ಇತರ ಐವರು ಸಹೋದರರ ನಡುವೆ ತಕರಾರು ಇತ್ತು. ಇದೇ ವಿಷಯಕ್ಕೆ ಗ್ರಾಮದಲ್ಲಿ ಪಂಚಾಯತಿ ನಡೆದಿತ್ತು. ಮಲ್ಕಪ್ಪನಿಗೆ ಅವನ ಅಣ್ಣ ತಮ್ಮಂದಿರು ಜಮೀನು ಪೋಡಿ ಖರ್ಚಿಗಾಗಿ ಬೇಕಾಗುವ ಹಣ ಮತ್ತು ಹಳೆಯ ಬಾಕಿ 50 ಸಾವಿರ ರೂಪಾಯಿ ಕೊಡಬೇಕು ಎಂದು ಪಂಚಾಯತಿಯಲ್ಲಿ ತೀರ್ಮಾನವಾಗಿತ್ತು. ಅದರಂತೆ ಮಲ್ಕಪ್ಪ ತನ್ನ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ ಮಾಡಲು ತನಗೆ ಕೊಡಬೇಕಾದ ಹಳೆಯ ಬಾಕಿ 50 ಸಾವಿರ ರೂಪಾಯಿ ಮತ್ತು ಪೋಡಿ ಮಾಡಿ ಕೊಡಲು ಬೇಕಾಗುವ ಹಣ ಕೊಡುವಂತೆ ಕೇಳಿದ್ದ. ಅದಕ್ಕೆ ಆತನ ಸಹೋದರರು ನಾವು ಯಾವುದೇ ದುಡ್ಡು ಕೊಡುವುದಿಲ್ಲ. ನೀನು ಜಮೀನು ಹೇಗೆ ಹಂಚಿಕೆ ಮಾಡುವುದಿಲ್ಲ ಎಂದು ತಕರಾರು ತೆಗೆದಿದ್ದರಿಂದ ವೈಮನಸ್ಸು ಉಂಟಾಗಿತ್ತು.

ಜೂ.12 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮಲ್ಕಪ್ಪ ಮತ್ತು ಆತನ ಮಕ್ಕಳಾದ ಶಂಕ್ರೆಪ್ಪ ಮತ್ತು ಚನ್ನಪ್ಪ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಲ್ಕಪ್ಪನ ಅಣ್ಣತಮ್ಮಂದಿರು ಹಾಗೂ ಅವರ ಕುಟುಂಬದವರಾದ ಹಣಮಂತ, ಆಶಪ್ಪ, ರಾಮಲು, ಸೀನಪ್ಪ, ಶರಣಪ್ಪ, ಪದ್ಮಮ್ಮ, ಲಾಲಮ್ಮ ಮತ್ತು ಪವಿತ್ರಾ ಸೇರಿಕೊಂಡು ಮಲ್ಕಪ್ಪ ಮತ್ತು ಆತನ ಮಕ್ಕಳಾದ ಶಂಕ್ರೆಪ್ಪ ಮತ್ತು ಚನ್ನಪ್ಪ ಅವರನ್ನು ಕೊಡಲಿ, ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದರು.

ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಪತ್ತೆಗೆ ಚಿಂಚೋಳಿ ಎ.ಎಸ್.ಪಿ ಮಾರ್ಗದರ್ಶದಲ್ಲಿ, ಮುಧೋಳ ಪೊಲೀಸ್ ಠಾಣೆ ಪಿಎಸ್ಐ ತಮ್ಮರಾಯ ಪಾಟೀಲ ನೇತೃತ್ವದಲ್ಲಿ ಪ್ರೊ.ಪಿಎಸ್ಐ ಸಂಗಮೇಶ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮಡಿವಾಳ, ಮಂಜುನಾಥ, ದೊಡ್ಡಬಸವ, ಚಂದ್ರಕಾಂತ, ಶಾಂತವೀರ, ರಾಜಕುಮಾರ ತಳವಾರ, ಪ್ರೇಮಕುಮಾರ, ವೀರಾರೆಡ್ಡಿ, ಭಗವಂತ, ಇಂಧುಮತಿ ಮತ್ತು ಈರಮ್ಮ ಅವರನ್ನೊಳಗೊಂಡ ತಂಡ ರಚಿಸಿದ್ದರು. ಈ ತಂಡ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಿದೆ.

 

Leave a Comment