ತೋರಣಗಲ್ಲು ಜಿಂದಾಲ್ ನಲ್ಲಿ ದೇಶದ ಮೊದಲ ಅತ್ಯುನ್ನತ ಕ್ರೀಡಾ ತರಬೇತಿ

ಹೊಸಪೇಟೆ,ಸೆ.7-ತೋರಣಗಲ್ಲು ಜಿಂದಾಲ್ ನಲ್ಲಿ ದೇಶದ ಮೊದಲ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆಯಾದ ಇನ್ ಸ್ಪೈರ್ ಇನ್ಸ್ಟಿ ಆಫ್ ಸ್ಪೋರ್ಟ್ಸ್ ಆರಂಭಿಸಲಾಗಿದ್ದು ಈಗಾಗಲೇ 120ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳಿಗೆ ನಾನಾ ತರಬೇತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಸಿಇಒ ರಸ್ದೀ ವಾರ್ಲಿ ತಿಳಿಸಿದರು.

ಜಿಂದಾಲ್ ವಿಜಯನಗರದಲ್ಲಿ 42 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ವಿಜಯನಗರದ 42 ಎಕರೆ ವುಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು ಐದು ಪ್ರಮುಖ ಒಲಿಂಪಿಕ್ ಕ್ರೀಡೆಗಳಾದ ಬಾಕ್ಸಿಂಗ್, ಜೂಡೋ, ಕುಸ್ತಿ, ಅಥ್ಲೆಟಿಕ್ಸ್ ಹಾಗೂ ಈಜು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಏಕಕಾಲದಲ್ಲಿ 300 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸೌಲಭ್ಯಗಳಿವೆ. ವಸತಿಯೊಂದಿಗೆ ದೇಶಾದ್ಯಂತ ಇರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿ ವೇತನದ ಸಹಿತ ತರಬೇತಿ ಸೌಲಭ್ಯ ಕಲ್ಪಿಸಲಾಗಿದೆ. ವಿಶ್ವದರ್ಜೆಯ ಮೂಲಸೌಕರ್ಯ, ತರಬೇತಿ, ಕ್ರೀಡಾ, ವಿಜ್ಞಾನ ಬೆಂಬಲ ಹಾಗೂ ಮೂಲ ಶಿಕ್ಷಣ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಐಐಎಸ್ ಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಅಧಿಕೃತ ಕುಸ್ತಿ, ಬಾಕ್ಸಿಂಗ್ ತರಬೇತಿ ಸಂಸ್ಥೆಯ ಮಾನ್ಯತೆ ನೀಡಿದೆ. ಜೆಎಸ್ಡಬ್ಲ್ಯೂ ಸಮೂಹ ಸಂಸ್ಥೆ ಸಿಎಸ್ಆರ್ ನಿಧಿಯಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ ಎಂದರು. ಸಂಸ್ಥೆಯ ಅಧಿಕಾರಿಗಳಾದ ಅಮನ್ಶ್, ಅಕ್ಷಯ್, ಜೀತೇಂದ್ರ ವಶಿಷ್ಠ, ಸಪ್ನಿಲ್ಲ ಮಿಶ್ರ್, ರಂಜಿತ್, ಪವನ್ ರೆಡ್ಡಿ, ಶ್ರೀಕೃಷ್ಣ ಕುಲಕರ್ಣಿ, ಆನಂದ್ ಮುಂತಾದವರು ಇದ್ದರು.

Leave a Comment