ತೈಲ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮೋದಿ ಚರ್ಚೆ

ಹ್ಯೂಸ್ಟನ್, ಸೆ ೨೨- ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ವಿಶ್ವದ ಅಗ್ರಮಾನ್ಯ 17ನೇ ತೈಲ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ದುಂಡು ಮೇಜಿನ ಚರ್ಚೆ ನಡೆಸಿದರು. ಈ ಚರ್ಚೆಯ ಫಲಶೃತಿಗಾಗಿ ಭಾರತಕ್ಕೆ ತೈಲ ಕ್ಷೇತ್ರದಲ್ಲಿ ಹೂಡಿಕೆಯ ಮಹಾಪೂರವೇ ಹರಿದು ಬರುವ ಸಂಭವ ನಿಚ್ಚಳವಾಗಿದೆ.

ಶನಿವಾರ ರಾತ್ರಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಇಂದು ಬೆಳಿಗ್ಗೆ ವಿಶ್ವದ ಅಗ್ರಮಾನ್ಯ ತೈಲ ಕಂಪನಿಗಳ ಸಿಇಓಗಳೊಂದಿಗೆ ನಡೆಸಿದ ದುಂಡು ಮೇಜಿನ ಚರ್ಚೆ ಭಾರತಕ್ಕೆ ಅಗತ್ಯವಿರುವ ವಿದೇಶಿ ಹೂಡಿಕೆ ದೃಷ್ಟಿಯಿಂದ ಅತೀ ಮಹತ್ವದಾಗಿತ್ತು.

ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದ ಸಿಇಓಗಳು ಜಗತ್ತಿನ 150 ರಾಷ್ಟ್ರಗಳಲ್ಲಿ ತೈಲ ಉದ್ಯಮ ವಹಿವಾಟು ಜಾಲವನ್ನು ಹೊಂದಿರುವ 17 ಬೃಹತ್ ತೈಲ ಸಂಸ್ಥೆಗಳ ಪ್ರತಿನಿಧಿಗಳಾಗಿದ್ದಾರೆ. ಈ ಸಂಸ್ಥೆಗಳ ಒಟ್ಟು ವಹಿವಾಟು 1 ಲಕ್ಷ ಕೋಟಿ ಅಮೇರಿಕನ್ ಡಾಲಱ್ಸ್ ನಷ್ಟು ಬೃಹತ್ ವಹಿವಾಟು ಹೊಂದಿವೆ. ಹಾಗೇಯೇ ಭಾರತದಲ್ಲಿಯೂ ಈ ಸಂಸ್ಥೆಗಳ ತೈಲದ್ಯೋಮ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ತೈಲದ್ಯೋಮ ಕ್ಷೇತ್ರದಲ್ಲಿ ಹೂಡಿಕೆಗೆ ಭಾರತ ಪ್ರಶಸ್ತವಾದ ದೇಶವಾಗಿದೆ. ಹೂಡಿಕೆದಾರರ ಸ್ನೇಹಿ ವಾತಾವರಣ ಭಾರತದಲ್ಲಿದೆ. ಹೂಡಿಕೆ ಮೇಲಿನ ತೆರಿಗೆಯಿಂದ ಹಿಡಿದು, ವಹಿವಾಟು ವಿಸ್ತರಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು, ಮೂಲ ಸೌಕರ್ಯಗಳನ್ನು ಒದಗಿಸಲು ಪೂರಕವಾಗಿ ವಿದೇಶಿ ಹೂಡಿಕೆಯ ಮಾರ್ಗ ಸೂಚಿಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಪ್ರಧಾನಿ ಮೋದಿ ಚರ್ಚೆ ವೇಳೆ ಭಾಗವಹಿಸಿದ್ದ ಇಂಧನ ಸಂಸ್ಥೆಗಳ ಸಿಇಓಗಳಿಗೆ ಮನವರಿಗೆ ಮಾಡಿದ್ದಾರೆ.

ಮೋದಿ ಅವರ ಹೂಡಿಕೆ ಕರೆಗೆ ಭಾಗವಹಿಸಿದ್ದ ಎಲ್ಲಾ 17 ತೈಲದ್ಯೋಮ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೇ ವೇಳೆ ಕೇವಲ 36 ಗಂಟೆಗಳ ಚರ್ಚೆಯ ನಂತರ 146 ಲಕ್ಷ ಕೋಟಿ ಯಷ್ಟು ಬೃಹತ್ ತೆರಿಗೆ ಮೊತ್ತವನ್ನು ಕಡಿತಗೊಳಿಸಿರುವ ಭಾರತೀಯ ವಿತ್ತ ಸಚಿವಾಲಯದ ನಿರ್ಧಾರವನ್ನು ಭಾಗವಹಿಸಿದ್ದ ಸಿಇಓಗಳು ಸ್ವಾಗತಿಸಿದ್ದಾರೆ. “ಇದು ಅತ್ಯಂತ ದಿಟ್ಟಕ್ರಮ” ಎಂದೂ ಶ್ಲಾಘಿಸಿದ್ದಾರೆ. ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

Leave a Comment