ತೈಲ ಬೆಲೆ ಏರಿಕೆ ಖಂಡಿಸಿದ ಜಯ ಕರ್ನಾಟಕ ಸಂಘಟನೆ

ಬಳ್ಳಾರಿ, ಸೆ.7: ದಿನೇ ದಿನೇ ಹೆಚ್ಚಳವಾಗುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ತೈಲ ಬೆಲೆ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಕೂಡಲೇ ತೈಲ ಬೆಲೆ ಕಡಿತಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ರಾಜ್ಯ ಪಾಲರಿಗೆ ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿದೆ.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಜಯರಾಮ್ ಚೌದರಿ ನೇತೃತ್ವದಲ್ಲಿ ಇಂದು ಸಂಘಟನೆಯ ಮುಖಂಡರುಗಳಾದ ಕೆ.ಹೆಚ್.ಎಂ.ಮಲ್ಲಿಕಾರ್ಜುನ ಸ್ವಾಮಿ, ಕೆ.ಯಱ್ರಿಸ್ವಾಮಿ, ಕೆ.ಶಿವಕುಮಾರ್, ಕೆ.ಜಂಗ್ಲಿ ಸಾಬ್, ಮಲ್ಲಯ್ಯ, ಎಂ.ರಾಧಾಕೃಷ್ಣ, ಸ್ವಾಮಿ, ಮಲ್ಲಿಕಾರ್ಜುನ, ಪ್ರಮೋದ್ ಕುಮಾರ್, ಮೊದಲಾದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಳ ಎಂದು ಒಂದು ತಿಂಗಳಲ್ಲಿ ಪ್ರತಿ ಲೀಟರ್ ತೈಲಕ್ಕೆ 10 ರೂ ಹೆಚ್ಚಳ ಮಾಡಿದೆ. ಇದರಿಂದ ಸಾಗಾಣಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳ ಜೊತೆ ಸಾರಿಗೆ ವೆಚ್ಚವು ದುಬಾರಿಯಾಗಲಿದೆ. ಅದಕ್ಕಾಗಿ ತೈಲ ಮಾರಾಟವನ್ನು ಜಿ.ಎಸ್.ಟಿ ವ್ಯಾಪ್ತಿಗೆ ತಂದು ತೈಲ ಬೆಲೆ ನಿಯಂತ್ರಣ ಮಾಡಬೇಕೆಂದು ಪ್ರತಿಭಟನೆ ಮೂಲಕ ಒತ್ತಾಯಿಸಿದರು.

 

Leave a Comment