ತೈಲ ಕೊರತೆಯಾಗದು ಭಾರತಕ್ಕೆ ಇರಾನ್ ಭರವಸೆ

ನವದೆಹಲಿ, ಜು. ೧೨.- ಭಾರತಕ್ಕೆ ಇರಾನ್ ಮಾಡುತ್ತಿರುವ ತೈಲ ಸರಬರಾಜಿನಲ್ಲಿ ಯಾವುದೆ ಕೊರತೆಯಾಗದಂತೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಇರಾನ್ ಹೇಳಿದೆ. ಇರಾನ್ ನ ನಂಭಿಕಸ್ತ

ತೈಲ ಪಾಲುದಾರ ರಾಷ್ಟ್ರವಾದ ಭಾರತಕ್ಕೆ ತೈಲ ಸರಬರಾಜು ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಎಲ್ಲ ಸಾಧ್ಯತೆಯನ್ನು ಕೈಗೊಳ್ಳಲಾಗುತ್ತದೆ ಎಂದು ಇರಾನ್ ದೋತಾವಸ ಹೇಳಿದೆ. ನಿನ್ನೆಯಷ್ಠೆ
ಇರಾನ್ ಉಪ ರಾಯಭಾರಿ ಭಾರತಕ್ಕೆ ತೈಲ ಕುರಿತಂತೆ ನೀಡಿದ್ದ ಎಚ್ಚರಿಕೆ ಹಿನ್ನೆಲೆಯಲ್ಲಿ, ಇರಾನ್ ರಾಯಭಾರಿ ಕಚೇರಿಯ ಇಂದಿನ ಹೇಳಿಕೆ ಮಹತ್ವ ಪಡೆದಿದೆ.
ಭಾರತ ಸೌದಿ ಅರೇಬಿಯಾ ಸೇರಿದಂತೆ ಇತರೆ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುವ ಯತ್ನದಲ್ಲಿ ಈಗಿನ ಇರಾನ್ ತೈಲ ಆಮದು ಪ್ರಮಾಣವನ್ನು ಕಡಿತ ಮಾಡಿದರೆ , ಇರಾನ್
ಭಾರತಕ್ಕೆ ನೀಡಿರುವ ವಿಷೇಷ ಸವಲತ್ತು ಸ್ಥಾನವನ್ನು ಅದು ಕಳೆದುಕೊಳ್ಳುತ್ತದೆ ಎಂದು ಇರಾನ್ ಉಪ ರಾಯಭಾರಿ ಮಸೂದ್ ರೆಜ್ವಾನಿಯನ್ ರಹಾಗ್ತಿ ಭಾರತವನ್ನು ಎಚ್ಚರಿಸಿದ್ದರು.

Leave a Comment