ತೆಹ್ರಿಕ್-ಉಲ್-ಮುಜಾಹಿದ್ದೀನ್‌ಭಯೋತ್ಪಾದಕ ಸಂಘಟನೆ

 

ನವದೆಲಿ. ಫೆ.6. ಜಮ್ಮು ಮತ್ತು ಕಾಶ್ಮೀರ ಮೂಲದ ತೆಹ್ರಿಕ್-ಉಲ್‌ಮುಜಾಹಿದ್ದೀನ್(ಟಿಯುಎಂ) ಒಂದು ಭಯೋತ್ಪಾದಕ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವಾಲಯ, ಟಿಯುಎಂ 1990ರಲ್ಲಿ ಸ್ವತಂತ್ರ ಕಾಶ್ಮೀರ ಎಂಬ ಪರಿಕಲ್ಪನೆಯಲ್ಲಿ ಜನ್ಮ ತಳೆದಿದ್ದು, ಭಯೋತ್ಪಾದಕ ಸಂಘಟನೆಯಂತೆ ವರ್ತಿಸುತ್ತಿತ್ತು ಎಂದಿದೆ.

ಟಿಯುಎಂ ಸಾಕಷ್ಟು ಭಯೋತ್ಪಾದಕ, ಗ್ರೆನೇಡ್‌, ಬಂದೂಕು ದಾಳಿಗಳನ್ನು ನಡೆಸಿದೆ. ಹಿಜ್‌ಬುಲ್‌ಮುಜಾಹಿದ್ದೀನ್‌ಮತ್ತು ಲಷ್ಕರ್‌ಇ-ತೋಯ್ಬಾದಂತ ಸಂಘಟನೆಗಳಿಗೆ ಆರ್ಥಿಕ ಹಾಗೂ ಇತರೆ ಬೆಂಬಲ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.

ಕಾಶ್ಮೀರದ ಯುವಕರಿಗೆ ಭಯೋತ್ಪಾದಕ ತರಬೇತಿ ನೀಡುವ ಕಾರ್ಯದಲ್ಲಿಯೂ ಸಂಘಟನೆ ನಿರತವಾಗಿತ್ತು. ಇದಕ್ಕಾಗಿ ವಿದೇಶಗಳಿಂದ ನಿಧಿ ಹರಿದುಬರುತ್ತಿತ್ತು. ಸಂಘಟನೆ ವಿರುದ್ಧ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಸಚಿವಾಲಯ ಹೇಳಿದೆ.

 

Leave a Comment