ತೆಲಂಗಾಣ: ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಾರಂಭ

ಹೈದರಾಬಾದ್, ಜ 22 – ರಾಜ್ಯದ 120 ಪುರಸಭೆ ಮತ್ತು 9 ಮಹಾನಗರ ಪಾಲಿಕೆಗಳಿಗೆ ಬುಧವಾರ ಬೆಳಿಗ್ಗೆ ಮತದಾನ ಪ್ರಾರಂಭವಾಗಿದೆ.
7,961 ಮತದಾನ ಕೇಂದ್ರಗಳಲ್ಲಿ ಪ್ರಾರಂಭವಾಗಿರುವ ಮತದಾನವು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಸುಮಾರು 50 ಲಕ್ಷ ಮತದಾರರು ಟಿಆರ್ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಪುರಸಭೆಗಳು ಮತ್ತು ಪಾಲಿಕೆಗೆಳ ಒಟ್ಟು 2,971 ವಾರ್ಡ್‌ಗಳಲ್ಲಿ, 83 ವಾರ್ಡ್‌ಗಳಿಗೆ ಚುನಾವಣೆ ನಡೆಯದೆ ಸರ್ವಾನುಮತದಿಂದ ಆಯ್ಕೆಯಾಗಿದೆ. ಉಳಿದಂತೆ 12,926 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ರಾಜ್ಯ ಚುನಾವಣಾ ಆಯುಕ್ತ ವಿ. ನಾಗಿ ರೆಡ್ಡಿ, ಚುನಾವಣೆಯನ್ನು ಶಾಂತವಾಗಿ ನಡೆಸಲು 55,ಸಾವಿರ ಸಿಬ್ಬಂದಿಯೊಂದಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Leave a Comment