ತೆಲಂಗಾಣದಲ್ಲಿ ಹಿಂಸಾಚಾರ : ವಾಹನಗಳು, ಮನೆಗಳು ಬೆಂಕಿಗಾಹುತಿ, ಇಂಟರ್ ನೆಟ್ ಸ್ಥಗಿತ

ಆದಿಲಾಬಾದ್.ಜ.14. ನೆರೆಯ ರಾಜ್ಯ ತೆಲಂಗಾಣದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ತಲೆದೋರಿದ್ದು, ಹತ್ತಾರು ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರೊಂದಿಗೆ ನಾಲ್ಕು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಯಾಗಿ ಇಂಟರ್ ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ಆದಿಲಾಬಾದ್ ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ನಡೆದ ಕೋಮುಗಲಭೆ ಉಂಟಾಗಿದ್ದು, ಪರಿಸ್ಥಿತಿ ಕೈಮೀರಿದ್ದು, ಘರ್ಷಣೆಯಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ 19 ಜನರಿಗೆ ಗಾಯಗೊಂಡಿದ್ದಾರೆ. ಉದ್ರಿಕ್ತರ ಗುಂಪು 13 ಮನೆಗಳು ಹಾಗೂ 26 ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಅದಿಲಾಬಾದ್ ನ ಕೆಲವೆಡೆ ಹಿಂಸಾಚಾರ ಮುಂದುವರೆದಿದ್ದು, ನಿನ್ನೆಯಿಂದ ನಾಳೆಯವರೆಗೆ ನಿಷೇಧಾಜ್ಞೆ ಹೇರಲಾಗಿದೆ.
ಕಳೆದ ಭಾನುವಾರ ರಾತ್ರಿ ಅದಿಲಾಬಾದ್ ನ ಭಾಯಿನ್ಸಾ ಪ್ರದೇಶದಲ್ಲಿ ಕೆಲವು ಯುವಕರು ಬೈಕ್ ಸೈಲೆನ್ಸರ್ ತೆಗೆದು ಶಬ್ದ ಮಾಡುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆರಂಭವಾದ ಗಲಾಟೆ ಘರ್ಷಣೆಗೆ ತಿರುಗಿ ಅಪರಿಚಿತ ವ್ಯಕ್ತಿಗಳಿಂದ ಕಲ್ಲು ತೂರಾಟ ನಡೆಯಿತು.ಬಳಿಕ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಉದ್ರಿಕ್ತರನ್ನು ಚದುರಿಸಿದ್ದರು. ಹಿಂಸಾಚಾರ ಪರಿಸ್ಥಿತಿ ನಿನ್ನೆಯೂ ಮುಂದುವರೆದಿತ್ತು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 60 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ…

Leave a Comment