ತೆಕ್ಕಲಕೋಟೆಯ ಮದ್ಯ ವ್ಯಸನಿ ಸಾವು

ಬಳ್ಳಾರಿ, ಏ.3: ಮದ್ಯ ವ್ಯಸನಿಯೋರ್ವ ಕೊರೊನಾ ಹಿನ್ನಲೆಯಲ್ಲಿ ಕುಡಿಯಲು ಮದ್ಯ ದೊರೆಯಲಿಲ್ಲವೆಂದು‌ ‌ ಖಿನ್ನತೆಯಿಂದ ಸಾವನ್ನಪ್ಪಿರುವ ಘಟನೆ ನಗರದಲ್ಲಿಂದು‌ ಬೆಳಕಿಗೆ ಬಂದಿದೆ.
ಮೂಲತಃ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶಶಿಧರ್. ಯುಗಾದಿ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ. ಲಾಕ್ ಡೌನ್ ಹಿನ್ನಲೆಯಲ್ಲಿ ತೆಕ್ಕಲಕೋಟೆಗೆ ತೆರಳದೆ ನಗರದಲ್ಲೇ ಉಳಿದುಕೊಂಡಿದ್ದ.

ದಿನ ನಿತ್ಯ ಮದ್ಯ ಸೇವನೆಯ ಚಟಕ್ಕೆ ಬಿದ್ದಿದ್ದ. ಆದರೆ ನಗರದಲ್ಲಿ ಮದ್ಯ ದೊರೆಯದೆ ನಿನ್ನೆ ಇಡೀ ನಗರ ಸುತ್ತಾಡಿದ್ದಾನೆ. ಎಲ್ಲೂ ಮದ್ಯ ಸಿಗದೆ ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಆತ ಸಾವನ್ನಪ್ಪಿದ್ದಾನೆ ಎಂದು ಆತನ ಸಂಬಂಧಿಕರು ಹೇಳಿದ್ದಾರೆ.
ನಿನ್ನೆಬರಾತ್ರಿಯೇ ಸಾವನ್ನಪ್ಪಿದ್ದು. ಮೃತದೇಹದ ಕೈಯನ್ನು ‌ನಾಯಿಗಳು ಕಚ್ಚಿತಿಂದಿದೆ. ಗಾಂಧಿನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment