ತೆಂಗಿನ ಸಮಗ್ರ ಪೀಡೆ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ತಿಪಟೂರು, ನ. ೮- ತೆಂಗಿಗೆ ಪೀಡಿಸುವ ಕೀಟಗಳು ಹಾಗೂ ಅವುಗಳ ಸಮಗ್ರ ನಿರ್ವಹಣೆಯ ಬಗ್ಗೆ, ಅದರಲ್ಲೂ ತೆಂಗಿಗೆ ಹೊಸದಾಗಿ ಕಾಣಿಸಿಕೊಂಡಿರುವ ಸುರುಳಿ ಬಿಳಿ ನೊಣದ ನಿರ್ವಹಣೆಯ ಬಗ್ಗೆ ಕೀಟಶಾಸ್ತ್ರ ತಜ್ಞರಾದ ಡಾ. ಚಂದ್ರಶೇಖರ್ ರೈತರಿಗೆ ತಿಳಿ ಹೇಳಿದರು.

ತಾಲ್ಲೂಕಿನ ಹುಲ್ಲುಕಟ್ಟೆ-ಕೊಪ್ಪ ಗ್ರಾಮದಲ್ಲಿ ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತೆಂಗಿನ ಸಮಗ್ರ ಪೀಡೆ ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೆಂಗಿಗೆ ಹೊಸದಾಗಿ ಕಾಣಿಸಿಕೊಂ‌ಡಿರುವ ಸುರುಳಿ ಬಿಳಿ ನೊಣವನ್ನು ಪರಭಕ್ಷಕ ಕೀಟಗಳನ್ನು ಬಿಡುಗಡೆ ಮಾಡುವ ಮುಖಾಂತರ ಹತೋಟಿ ಮಾಡಬಹುದು ಎಂದು
ತಿಳಿಸಿದರು.

ಕೊನೇಹಳ್ಳಿ ಸಸ್ಯ ಸಂರಕ್ಷಣೆಯ ವಿಜ್ಞಾನಿಯಾದ ಡಾ. ಶ್ರೀನಿವಾಸ್ ಮಾತನಾಡಿ, ತೆಂಗಿನ ರೋಗಗಳ ನಿರ್ವಹಣೆಯ ಬಗ್ಗೆ ತಿಳಿಸುವುದರ ಜತೆಗೆ ರೋಗಗಳನ್ನು ತಡೆಯಲು ಹಾಗೂ ಇಳುವರಿ ಹೆಚ್ಚಿಸಲು ಪೋಷಕಾಂಶಗಳ ನಿರ್ವಹಣೆ ಮಾಡುವಂತೆ ಹಾಗೂ ನವ ಭಾರತದ ನಿರ್ಮಾಣಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಜ್ಞೆಯನ್ನು ರೈತರಿಗೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಹುಲ್ಲುಕಟ್ಟೆ ಗ್ರಾಮದ ಗ್ರಾಮಸ್ಥರಾದ ರಾಜೇಶ್ವರಿ, ಕರ್ನಾಟಕ ಕೃಷಿ ಬೆಲೆ ಆಯೋಗದ ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ ಯೋಜನೆಯ ಸಂಶೋಧನಾ ಸಹಾಯಕಿಯಾದ ವೀಣಾ, ಕ್ಷೇತ್ರ ಸಹಾಯಕರಾದ ಕರಿಯಪ್ಪ, ಹುಲ್ಲುಕಟ್ಟೆ-ಕೊಪ್ಪಾದ ರೈತರು ಉಪಸ್ಥಿತರಿದ್ದರು.

Leave a Comment