ತುಳಸಿ ಆರೋಗ್ಯದ ಸಂಜೀವಿನಿ

ಸಾವಿರಾರು ವರ್ಷಗಳಿಂದಲೂ ತುಳಸಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಾ ಇದೆ. ಈಗಲೂ ಕೆಲವೊಂದು ಹಳ್ಳಿಗಳಲ್ಲಿ ಸಾಮಾನ್ಯ ಕೆಮ್ಮು, ಜ್ವರ ಮತ್ತು ಶೀತಕ್ಕೆ ತುಳಸಿ ರಸದ ಮನೆಮದ್ದಾಗಿ ಬಳಸುತ್ತಾರೆ.
ತುಳಸಿ ಪೂಜ್ಯನೀಯ ಮಾತ್ರವಲ್ಲ, ಇದರಲ್ಲಿ ಹಲವಾರು ಔಷಧಿಯ ಗುಣಗಳು ಇವೆ. ಬೆಳ್ಳಂಬೆಳಗ್ಗೆ ತುಳಸಿ ಎಲೆ ಜಗಿಯಿರಿ, ಆರೋಗ್ಯ ಪಡೆಯಿರಿ ಸಾವಿರಾರು ವರ್ಷಗಳಿಂದಲೂ ತುಳಸಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಾ ಇದೆ.
ತುಳಸಿಯು ಕೆಲವೊಂದು ಸಾಮಾನ್ಯ ರೋಗಗಳನ್ನು ಗುಣಪಡಿಸಬಲ್ಲದು ಎಂದು ಆಯುರ್ವೇದವು ಹೇಳುತ್ತದೆ.  ಸ್ವಾದದ ಜೊತೆ ಆರೋಗ್ಯದ ಭಾಗ್ಯ ತುಳಸಿಯು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದು ಕೂದಲು ಹಾಗೂ ಚರ್ಮದ ಸಮಸ್ಯೆಗಳಿಗೂ ಪರಿಣಾಮಕಾರಿಯಾಗಿದೆ.
ಕಿಡ್ನಿಯ ಕಲ್ಲುಗಳ ತೆಗೆಯಲು ತುಳಸಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್‌ಗಳು ಕಿಡ್ನಿಯನ್ನು ಬಲಗೊಳಿಸಿ ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುತ್ತದೆ. ತುಳಸಿ ರಸಕ್ಕೆ ಜೇನುತುಪ್ಪವನ್ನು ಹಾಕಿಕೊಂಡು ಪ್ರತಿದಿನ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ.
ತುಳಸಿಯಲ್ಲಿ ನಿರ್ವಿಷಕಾರಿ ಗುಣಗಳು ಇರುವುದರಿಂದ ದೇಹದಲ್ಲಿರುವ ಯುರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳಿಗೆ ದೇಹದಲ್ಲಿರುವ ಯುರಿಕ್ ಆಮ್ಲವೇ ಕಾರಣವಾಗಿದೆ. ಹೃದಯದ ರಕ್ಷಣೆಗೆ ಹೃದಯದ ರಕ್ಷಣೆಗೆ ತುಳಸಿ ಎಲೆಗಳಲ್ಲಿ ಇರುವಂತಹ ಯುಗೆನೊಲ್ ಎನ್ನುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಹೃದಯವನ್ನು ರಕ್ಷಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ನಿಮಗೆ ಹೃದಯದ ಸಮಸ್ಯೆಯಿದ್ದರೆ ಪ್ರತೀದಿನ ಖಾಲಿ ಹೊಟ್ಟೆಯಲ್ಲಿ ಕೆಲವು ತುಳಸಿ ಎಲೆಗಳನ್ನು ಸರಿಯಾಗಿ ಜಗಿದುಕೊಂಡು ತಿನ್ನಿ. ಕ್ಯಾನ್ಸರ್ ನಿಂದ ರಕ್ಷಣೆಗೆ ಕ್ಯಾನ್ಸರ್ ನಿಂದ ರಕ್ಷಣೆಗೆ ಕ್ಯಾನ್ಸರ್ ವಿರೋಧಿ ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ತುಳಸಿಯಲ್ಲಿ ಸಮೃದ್ಧವಾಗಿರುವ ಕಾರಣದಿಂದ ಕ್ಯಾನ್ಸರ್‌ನ್ನು ತುಳಸಿಯಿಂದ ನಿವಾರಣೆ ಮಾಡಬಹುದಾಗಿದೆ.
ತಂಬಾಕಿನಿಂದ ಬರುವಂತಹ ಬಾಯಿಯ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಇರುವಂತವರು ತುಳಸಿ ಎಲೆಗಳನ್ನು ನಿಯಮಿತವಾಗಿ ತಿಂದಾಗ ಹೆಚ್ಚಿನ ಪರಿಣಾಮ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ.
ತುಳಸಿ ಎಲೆಗಳಿಂದ ಹೊಟ್ಟೆಯುಬ್ಬರ, ಹೊಟ್ಟೆಯ ಅಲ್ಸರ್ ಮತ್ತು ಮಲಬದ್ಧತೆ ಇತ್ಯಾದಿಯನ್ನು ನಿವಾರಣೆ ಮಾಡಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಬಲಗೊಳಿಸಲಿದೆ. ಒಂದು ಚಮಚ ತುಳಸಿ ರಸಕ್ಕೆ ಜೇನುತುಪ್ಪ ಸೇರಿಸಿಕೊಂಡು ಪ್ರತೀದಿನ ಸೇವಿಸಿ.  ಒಂದು ವೇಳೆ ನಿಮ್ಮನ್ನು ಕೆಮ್ಮು ಬಾಧಿಸುತ್ತಿದ್ದು ಕಫವಿಲ್ಲದೇ ಗಂಟಲು ಒಣದಾಗಿದ್ದರೆ ತುಳಸಿ ಎಲೆಯನ್ನು ನೀರಿನೊಂದಿಗೆ ಸೇವಿಸಿದ ಬಳಿಕ ಉತ್ತಮ ಪರಿಣಾಮ ದೊರಕುತ್ತದೆ. ಜ್ವರಕ್ಕೂ ತುಳಸಿ ರಾಮಬಾಣವಾಗಿದೆ.

Leave a Comment