ತುಲಾ

ಈ ವರ್ಷಾರಂಭದಿಂದ(29.3.2017) ದಿನಾಂಕ: 12.9.2017ವರೆಗೆ 12ನೇ ಗುರು. ಅಶುಭ. 17.3.2018ರ ವರೆಗೆ ಜನ್ಮಗುರು ಇರುವನು. ನಿಮ್ಮ ಯೋಜನಾಬದ್ಧವಾದ ಕೆಲಸ ಕಾರ್ಯಗಳು ಸಫಲತೆ ಕಾಣದೆ ಮುಗ್ಗರಿಸುವವು. ಆರ್ಥಿಕ ಸಂಬಂಧಗಳು ನಿರಾಸೆಪಡಿಸುವವು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಇರುವುದಿಲ್ಲ. ನೌಕರಿಯಲ್ಲಿರುವವರಿಗೆ ಬಡ್ತಿಗಳಲ್ಲಿ ಸಾಧನೆಗಳು ಅರ್ಧಮಾತ್ರ ಫಲಿಸುವವು. ಸಾಲ ಸಂಬಂಧಗಳು ಮುಗಿಲು ಮುಟ್ಟುವವು. ಅವುಗಳಿಂದ ಮುಕ್ತವಾಗಲು ಭಾಗಶಃ ಆಸ್ತಿ ಮಾರುವ ಪ್ರಸಂಗ ಎದುರಾಗುವುದು. ಮಡದಿ- ಮಕ್ಕಳು ನಿಮ್ಮೊಂದಿಗೆ ಕೈಜೋಡಿಸಿ ದುಡಿಯಬೇಕಾಗುತ್ತದೆ. ರೈತರಿಗೆ ಹಿಂಗಾರು ಹಾಗೂ ಮುಂಗಾರು ಬೆಳೆಗಳು ಸಾಮಾನ್ಯ ರೀತಿಯಲ್ಲಿ ಬರುವವು. ಕೃಷಿಯಂತ್ರ ಖರೀದಿ. ಅಧಿಕಾರಿಗಳೊಂದಿಗೆ ನಯವಾಗಿ ವರ್ತಿಸಿರಿ. ಶನಿದೇವನು 20.6.2017ರ ವರೆಗೆ 3ನೇಯವನಾಗುವನು. ಅಕ್ಟೋಬರ್‌ವರೆಗೆ ಉತ್ತಮ ಆರೋಗ್ಯ, ಅಧಿಕ ಆದಾಯ ಕೊಡುವನು. ದೈಹಿಕ ಮಾನಸಿಕ ಆರೋಗ್ಯ ಆಶಾದಾಯಕವಾಗಿರುತ್ತದೆ. ಮಹತ್ವದ ಕೆಲಸಗಳು ಆತಂಕವಿಲ್ಲದೆ ಈಡೇರುವವು. ಮನೆಯಲ್ಲಿ ಮಂಗಲ ಕಾರ್ಯ ನಡೆಯಲಿದೆ. ಕೋರ್ಟ್ ಕಛೇರಿ ಕೆಲಸಗಳು ವಿಜಯವಾಗುವವು. ಗೃಹ ನಿರ್ಮಾಣ ಯೋಗ ಸನ್ನಿಹಿತ. ನೆರೆಹೊರೆಯವರಿಂದ ಮತ್ತು ಸಹೋದ್ಯೋಗಿಗಳಿಂದ ಅಲ್ಪ ತೊಂದರೆಯಾಗಲಿದೆ. ಬೆಲೆಬಾಳುವ ವಸ್ತುಗಳ ಖರೀದಿಗೆ ಓಡಾಡುತ್ತೀರಿ. ಮಗಳು ಅಥವಾ ಮಗನಿಗೆ ನೌಕರಿ ದೊರೆಯುವ ಯೋಗ ಕಂಡು ಬರುತ್ತದೆ.

ಆದಾಯ 14, ವ್ಯಯ 11