ತುರುವೇಕೆರೆ ಮಾದರಿ ಕ್ಷೇತ್ರ: ಮಸಾಲೆ ಜಯರಾಂ ಆಶಯ

ತುರುವೇಕೆರೆ, ಫೆ. ೮- ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ಉತ್ತಮ ರಸ್ತೆ, ಚರಂಡಿ ನಿರ್ಮಾಣ ಮಾಡಿ ಕ್ಷೇತ್ರವನ್ನು ಮಾದರಿ ತಾಲ್ಲೂಕನ್ನಾಗಿ ಮಾಡುವ ಏಕೈಕ ಗುರಿ ಹೊಂದಲಾಗಿದೆ ಎಂದು ಶಾಸಕ ಮಸಾಲೆ ಜಯರಾಮ್ ತಿಳಿಸಿದರು.

ತಾಲ್ಲೂಕಿನ ಮಾಯಸಂದ್ರದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಮಂಜೂರಾದ ಸುಮಾರು 3 ಕೋಟಿ ರೂ. ವೆಚ್ಚದ ಶಾದಿ ಮಹಲ್ ಮತ್ತು ಜೈನರ ಬೀದಿಯ ಸಿ.ಸಿ. ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಕಳಪೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಎನ್.ಆರ್. ಜಯರಾಮ್, ತಾ.ಪಂ. ಸದಸ್ಯ ಮಂಜುನಾಥ್, ರಂಗಸ್ವಾಮಿ, ನೂರ್‌ಅಸ್ಮಾ, ಜೈನ ಸಮಾಜದ ಬಾಬು, ವಿಶ್ವನಾಥ್, ಮದನ್, ಕುಮಾರ್, ಸಾಧಿಕ್, ಶಾದಿಲ್, ಗುತ್ತಿಗೆದಾರ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Comment