ತುಂಟಾಟದ ಟ್ಯೂಬ್ ಲೈಟ್…

  • ಚಿಕ್ಕನೆಟಕುಂಟೆ ಜಿ.ರಮೇಶ್

ಹೆಸರೇ ಹೇಳುವಂತೆ ಇದು ಟ್ಯೂಬ್‌ಲೈಟ್.ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಟ್ಯೂಬ್‌ಲೈಟ್ ಕಡೆಗೂ ಅಡೆತಡೆಗಳನ್ನು ದಾಟಿ ಬಿಡುಗಡೆಯ ಹಂತಕ್ಕೆ ಬಂದಿದೆ.

dsc_0150ಒಂದಷ್ಟು ಹಳೆಯ ಮುಖಗಳೊಂದಿಗೆ ಹೊಸಮುಖಗಳೇ ಸೇರಿಕೊಂಡು ’ಟ್ಯೂಬ್‌ಲೈಟ್ ಚಿತ್ರವನ್ನು ನಟಿಸಿ,ನಿರ್ಮಿಸಿ, ನಿರ್ದೇಶಿಸಿದ್ದಾರೆ.ಚಿತ್ರಕ್ಕೆ ಗುರುನಂದನ್ ಮತ್ತು ಅನುಶ್ರೀ ನಾಯಕ ನಾಯಕಿಯರು.ಉಳಿದಂತೆ ನಾಲ್ವರು ಹುಡುಗರ ತುಂಟಾಟವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.ನಿರ್ದೇಶಕ ವೇಣುಗೋಪಾಲ್. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ.

ಹವಾಮಾನ ವೈಪರೀತ್ಯದ ಪರಿಣಾಮವಾಗಿ ಲಡಾಕ್‌ನಲ್ಲಿ ಚಿತ್ರೀಕರಣ ಮಾಡುವ ಸಲುವಾಗಿ ಎರೆಡೆರಡು ಬಾರಿ ಅಲ್ಲಿಗೆ ಹೋಗಿ ಬಂದಿದ್ದಾರೆ.ನಾಲ್ಕು ಹುಡುಗರ ಜೊತೆಗೆ ನಿರ್ದೇಶಕರಾದ ವಿ.ಮನೋಹರ್ ಮತ್ತು ಗುರುಪ್ರಸಾದ್ ಕಾಣಿಸಿಕೊಂಡಿದ್ದಾರೆ.ಇನ್ನುಳಿದಂತೆ ಅಜಯ್ ರಾಜ್,ಆರ್ಯನ್ ಮತ್ತು ರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹಳ ದಿನಗಳ ನಂತರ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು.ಈ ವೇಳೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವಿತ್ತು.ನಟಿ ರೂಪಿಕಾ, ನಿರ್ದೇಶಕರಾದ ಆದರ್ಶ್ ಈಶ್ವರಪ್ಪ,ಚೇತನ್ ಮುಂಡಾಡಿ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಶುಭಕೋರಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ವೇಣುಗೋಪಾಲ್,ನಾಲ್ಕು ವರ್ಷದ ಪ್ರಯತ್ನ.ಸಿನೆಮಾ ಅಂದುಕೊಂಡಷ್ಟು ಸುಲಭ ಅಲ್ಲ ಅನ್ನುವುದು ಚಿತ್ರದ ನಿರ್ಮಾಣದ ಹಂತದಲ್ಲಿ ತಿಳಿಯಿತು.ಇಡೀ ತಂಡ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.

dsc_0134ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರ್ದೇಶಕ ಗುರುಪ್ರಸಾದ್, ಮೀಟೂ ಸಾಕಾಗಿ ಹೋಗಿದೆ. ಮೊದಲ ಬಾರಿಗೆ ಮಠ ಚಿತ್ರ ನಿರ್ದೇಶನ ಮಾಡಿದ್ದರಿಂದ ಮಠ ನಿರ್ದೇಶಕ ಅನ್ನುತ್ತಾರೆ. ವೇಣುಗೋಪಾಲ್‌ದು ಮೊದಲ ನಿರ್ದೇಶನ ಆತನನ್ನು ಟ್ಯೂಬ್‌ಲೈಟ್ ನಿರ್ದೇಶಕ ಅನ್ನುತ್ತಾರೆ ಎಂದರು.

ಮೊದಲು ಚಿತ್ರದಲ್ಲಿ ನಟಿಸುವಂತೆ ಕೇಳಿದ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಮೇಲಾಗಿ ಚಿತ್ರಕ್ಕಾಗಿ ನೀಡಿದ ಸಂಭಾವನೆ ಇನ್ನೂ ದೊಡ್ಡದಿತ್ತು ಹಾಗಾಗಿ ಚಿತ್ರದಲ್ಲಿ ನಟಿಸಲಿ ಒಪ್ಪಿಕೊಂಡೆ ಎಂದರು.

ಚಿತ್ರದಲ್ಲಿ ನನ್ನ ಸನ್ನಿವೇಶ ಇದೆಯೇ ಎಂದು ಮಾತಿಗಿಳಿದ ಸಂಗೀತ ನಿರ್ದೇಶಕ ವಿ.ಮನೋಹರ್,ನನ್ನದು ಟೀ ಮಾರುವ ವ್ಯಕ್ತಿಯ ಪಾತ್ರ.ಕೆ.ಆರ್ ಪುರಂ ಬಳಿ ಚಿತ್ರೀಕರಣ ಮಾಡುವ ಸಮಯದಲ್ಲಿ ಸಮಾಧಿಯ ಮೇಲೆ ಕುಳಿತು ಎಲ್ಲರೂ ಊಟ ಮಾಡಿದ್ದೇವೆ ಎಂದು ಹೇಳಿಕೊಂಡರು.

ನಟ ಗುರುನಂದನ್. ಚಿತ್ರದಲ್ಲಿ ನಾಲ್ಕು ಮಂದಿ ಹುಡುಗರಿದ್ದಾರೆ.ಲಡಾಕ್‌ಗೆ ಬೈಕ್‌ನಲ್ಲಿ ಹೋಗುವ ಕಥೆ ಎಂದಾಗಲೇ ಇಷ್ಟವಾಯಿತು ಎಂದರೆ ಇನ್ನುಳಿದ ಕಲಾವಿದರಾದ ಅಜಯ್ ರಾಜ್,ಆರ್ಯನ್ ಮತ್ತು ರಾಜ್ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.ಮನೋಹರ್ ಜೋಷಿ ಕ್ಯಾಮರ ಮತ್ತು ಉಮೇಶ್ ಚಕ್ರವರ್ತಿ ಸಂಗೀತವಿದೆ.

ಅಂದಹಾಗೆ ವೆಂಕಟ್‌ಗೌಡ ಚಿತ್ರದ ವಿತರಣೆಯ ಜವಬ್ದಾರಿ ಹೊತ್ತಿದ್ದು, ಚಿತ್ರ ನೋಡಿ ಖುಷಿ ಆಯಿತು. ಈ ಕಾರಣದಿಂದಲೇ ಚಿತ್ರ ವಿತರಣೆ ತೆಗೆದುಕೊಂಡಿದ್ದೇನೆ. ಸೂಕ್ತ ಸಮಯ ನೋಡಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡರು.

Leave a Comment