ತುಂಗಭದ್ರ ಜಲಾಶಯಕ್ಕೆ ಸ್ವಾಮೀಜಿಗಳಿಂದ ಬಾಗಿನ

ಹೊಸಪೇಟೆ, ಆ.13: ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಠಾಧೀಶರ ಧರ್ಮ ಪರಿಷತ್ ನಾನಾ ಸ್ವಾಮೀಜಿಗಳು ಇಂದು ಸೋಮವಾರ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿದರು.

ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಶ್ರೀಉಜ್ಜಿನಿ ಶ್ರೀಗಳು, ಪ್ರಕೃತಿಯ ಪ್ರತಿಯೊಂದ ವಸ್ತುವೂ ಪೂಜನೀಯವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತಾಪಿ ವರ್ಗಕ್ಕೆ ಸೇರಿದಂತೆ ಎಲ್ಲ ವರ್ಗದ ಜನತೆ ಸುಖ ಸಮೃದ್ಧಿಹೊಂದಲಿ ಎಂದರು.

 ಹೂಳು:
ತುಂಗಭದ್ರ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹಿಸುವಷ್ಟು ಪ್ರಮಾಣದಲ್ಲಿ ಹೂಳು ತುಂಬಿದ ಹಿನ್ನೆಲೆಯಿಂದಾಗಿ ಜಲಾಶಯದಿಂದ ೬೦ ಕ್ಕೂ ಹೆಚ್ಚು ಟಿಎಂಸಿ ನೀರು ಹೊರ ಹೋಗಿದೆ, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗುತ್ತಿರುವುದಕ್ಕೆ ನಮಗೆ ನೋವಾಗಿದೆ, ಸರಕಾರ ಕೂಡಲೇ ಸಮಾನಾಂತರ ಜಲಾಶಯ ನಿರ್ಮಿಸಬೇಕಿದೆ ಎಂದರು.

ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕಿದೆ, ಈಗಾಗಲೇ ರೈತರು ಕೂಡ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರ ಸ್ಪಂದಿಸಬೇಕು.

ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಪತ್ರ ಚಳುವಳಿ ಮಾಡ್ತೇವೆ ಎಂದರು.

 ಕೇರಳ ಪ್ರವಾಹ:
ಕಳೆದ ಕೆಲ ದಿನಗಳಿಂದ ಕೇರಳ ರಾಜ್ಯದಲ್ಲಿ ಅತಿಯಾಗಿ ಮಳೆಯಾಗುತ್ತಿದ್ದು ಜನತೆ ಪ್ರವಾಹಕ್ಕೆ ತುತ್ತಾಗಿದ್ದಾರೆ. ಅಲ್ಲಿನ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ, ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತ್ಯೇಕತೆ
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟವರಿಗೆ ಏನಾಗಿದೆ ಎನ್ನೋದು ಗೊತ್ತಿದೆ. ಎಲ್ಲರೂ ಜಾತ್ಯಾತೀತರಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನ ಪದ್ಧತಿ ಜಾರಿಯಾಗಬೇಕು, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಕಲ್ಯಾಣ ಮಠದ ಶ್ರೀಕಲ್ಯಾಣ ಸ್ವಾಮೀಜಿ ಸೇರಿದಂತೆ ಮುಂತಾದ ಮಠಾಧೀಶರು ಇದ್ದರು. ರೈತ ಮುಖಂಡರಾದ ದರೂರು ಪುರುಷೋತ್ತಮ ಗೌಡ, ಶ್ರೀಧರ ಗೌಡ, ಮಸೀದಿಪುರ ಬಸವನಗೌಡ, ಗಂಗಾವತಿ ವೀರೇಶ್, ದರೂರು ರಂಜಾನ್ ಸಾಬ್, ಶಿವಯ್ಯ, ಪಂಪಾಪತಿ, ಸತ್ಯನಾರಾಯಣ ರಾವ್, ಜಂಬನಗೌಡ, ಭೀಮನಗೌಡ ವೀರನಗೌಡ ಮುಂತಾದವರು ಇದ್ದರು.

Leave a Comment