ತೀವ್ರ ಗದ್ದಲ, ಕಲಾಪ ನಾಳೆಗೆ ಮುಂದೂಡಿಕೆ- ಬಿಜೆಪಿ ಅಹೋರಾತ್ರಿ ಧರಣಿ

 

ಬೆಂಗಳೂರು, ಜು ೧೮- ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿದ್ದು, ಅವರನ್ನು ಕರೆ ತರಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸದನದಲ್ಲಿ ಗದ್ದಲ ನಡೆಸಿದ ಹಿನ್ನಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಫೋಟೋ ಮತ್ತು ವಿಮಾನ ಪ್ರಯಾಣದ ಟಿಕೆಟ್ ಜೆರಾಕ್ಸ್ ಪ್ರತಿಗಳನ್ನು ಪ್ರದರ್ಶಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ.

ನಮ್ಮ ಶಾಸಕರನ್ನು ಅಪಹರಿಸಲಾಗಿದೆ ಎಂದು ಗದ್ದಲ ನಡೆಸಿದ್ದು, ಬಿಜೆಪಿ ಸದಸ್ಯರು ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕಲಾಪವನ್ನು ಮುಂದೂಡಲಾಗಿದೆ.
ಇದಕ್ಕೂ ಮುಂಚೆ ಬಿಎಸ್‌ವೈ ಮಾತನಾಡಿ ವಿಶ್ವಸಮತಯಾಚನೆಯಾಗುವವರೆಗೂ ನಾವು ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೇಳಿದರು.

Leave a Comment