ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ: ಡಿ.ರಮಣಿ ಸಲಹೆ

ಮೈಸೂರು. ಅ.18. ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ಖ್ಯಾತ ಕ್ರೀಡಾ ಪಟುವಾಗಲು ಸಾಧ್ಯ ಎಂದು ಅ.ರಾ. ಘುಟ್ ಬಾಲ್ ಕ್ರೀಡಾ ಪಟು ಹಾಗೂ ಬೆಂಗಳೂರಿನ ಎನ್.ಎಲ್.ಎಸ್. ಐ.ಯು.ನ ದೈಹಿಕ ಶಿಕ್ಷಣ ವಿಭಾಗದ ಮಾಜಿ ನಿರ್ದೇಶಕಿ ಡಿ.ಕೆ. ರಮಣಿ ಹೇಳಿದರು.
ಅವರು ಇಂದು ಬೆಳಿಗ್ಗೆ ಮಾನಸ ಗಂಗೋತ್ರಿಯಲ್ಲಿರುವ ಎಸ್.ಜೆ.ಸಿ.ಇ. ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಫುಟ್ ಬಾಲ್ ಪಂದ್ಯಾವಳಿಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕ್ರೀಡೆಯು ವಿದ್ಯಾರ್ಥಿಗಳ ಒಂದು ಅವಿಭಜ್ಯ ಅಂಗ. ಪಠ್ಯ-ಪುಸ್ತಕಗಳ ಅಧ್ಯಯನದೊಂದಿಗೆ ತಮಗೆ ಇಚ್ಚೆಯಿರುವ ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಗಳನ್ನು ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಯು ತಾನು ಓರ್ವ ಖ್ಯಾತ ಕ್ರೀಡಾಪಟುವಾಗಬೇಕಾದರೆ ಆ ಕ್ರೀಡೆಯನ್ನು ಸತತವಾಗಿ ಅಭ್ಯಾಸ ಮಾಡಬೇಕು. ಇದರೊಂದಿಗೆ ಕ್ರೀಡಾ ತರಬೇತುದಾರರ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆದುಕೊಳ್ಳುವುದು ಉತ್ತಮ ಎಂದರು.
ನಮ್ಮ ದೇಶವು ಫುಟ್ ಬಾಲ್ ಕ್ರೀಡೆಯಲ್ಲಿ ಅ.ರಾ. ಮಟ್ಟದಲ್ಲಿ ಹೆಚ್ಚಿನ ಖ್ಯಾತಿಗಳಿಸಲು ಉನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ, ಪರಿಸ್ಥಿತಿ ಹೀಗಿರುವಾಗ ನಮ್ಮ ದೇಶದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದು ಸಮಾಧಾನಕರ ಸಂಗತಿ ಎಂದು ಹೇಳಿದ ರಮಣಿಯವರು ಈ ದಿಸೆಯಲ್ಲಿ ಕೇಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರವು ಹೆಚ್ಚಿನ ಗಮನ ಹರಿಸಬೇಕಾಗಿದೆ. ಎಂದು ಹೇಳಿದ ರಮಣಿಯವರು ಇಂದಿನ ಪಂದ್ಯಾವಳಿಯಲ್ಲಿ ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧರಾಗುವುದರ ಮೂಲಕ ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಿರಿ ಎಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾ ಪಟುಗಳಿಗೆ ಕರೆ ನೀಡಿದರಲ್ಲಿದೆ ನಿಮ್ಮ ಭವಿಷ್ಯವು ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಕೆ.ಎಸ್.ಎಲ್. ಯು ನ ಅಧ್ಯಕ್ಷ ಕೃಷ್ಣೇಗೌಡ, ಜೆ.ಸಿ.ಇ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|| ರೇವಣ್ಣ, ಜೆ.ಎಸ್.ಎಸ್. ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುರೇಶ್ ಕುಮಾರ್ ಪಾಲ್ಗೊಂಡಿದ್ದರು.
ಇಂದಿನ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿ.ಪಿ. ವ್ಯಾಪ್ತಿಗೊಳಪಡುವ 16 ತಂಡಗಳು ಪಾಲ್ಗೊಂಡಿದ್ದವು.

Leave a Comment