ತಿರುಪತಿ ತಿಮ್ಮಪ್ಪನ ಆಸ್ತಿ ಪಾಸ್ತಿಗಳ ಬಗ್ಗೆ ಕೂಡಲೇ ಶ್ವೇತ ಪತ್ರ ಪ್ರಕಟಿಸಲು ಆದೇಶ

ತಿರುಪತಿ, ಮೇ 25- ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಮಂಡಳಿ ಅಧ್ಯಕ್ಷ ವೈ .ವಿ. ಸುಬ್ಬಾರೆಡ್ಡಿ ಗುರುವಾರ ಮಹತ್ವ ನಿರ್ಣಯ ಕೈಗೊಂಡಿದ್ದಾರೆ. ಟಿಟಿಡಿ ಆಸ್ತಿ-ಪಾಸ್ತಿಗಳ ಬಗ್ಗೆ ಕೂಡಲೇ ಶ್ವೇತ ಪತ್ರ ಪ್ರಕಟಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿಯ ಒಂದಿಂಚೂ ಭೂಮಿ ಯಾರಿಗೂ ಅತಿಕ್ರಮಿಸಲು ಅವಕಾಶವಾಗಬಾರದು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಈ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಮಾರಾಟ ಮಾಡಿದ ಆಸ್ತಿಗಳು, ಅತಿಕ್ರಮಣಕ್ಕೆ ಒಳಗಾದ ಭೂಮಿ ಹಾಗೂ ಆಸ್ತಿ ಪಾಸ್ತಿಗಳ ಸಮಗ್ರ ವಿವರಗಳನ್ನು ಶ್ವೇತಪತ್ರ ಒಳಗೊಂಡಿರಬೇಕು ಎಂದು ಸೂಚಿಸಿದ್ದಾರೆ.

ಜೊತೆಗೆ ಪ್ರಸ್ತುತ ಟಿಟಿಡಿ ಬಳಿ ಲಭ್ಯವಿರುವ ಆಸ್ತಿ , ಅಕ್ರಮಣಕ್ಕೆ ಗುರಿಯಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಮಾಹಿತಿ ಹೊಂದಿರಬೇಕು ಎಂದು ಸೂಚನೆ ನೀಡಿದ್ದಾರೆ.
ಅಷ್ಟು ಮಾತ್ರವಲ್ಲದೆ ೨೦೧೬ರಿಂದ ವಿವಿಧ ಆಡಳಿತ ಮಂಡಳಿ ಅವಧಿಯಲ್ಲಿ ಮಾರಾಟ ಮಾಡಿರುವ ದೇವರ ಆಸ್ತಿಗಳ ಸಂಬಂಧ ಸಮಗ್ರ ತನಿಖೆ ನಡಸಬೇಕೆಂದು ಟಿಟಿಡಿ ಅಧಿಕಾರಿಗಳಿಗೆ ಆದೇಶ ಜಾರಿ ಮಾಡಿದ್ದಾರೆ
ಟಿಟಿಡಿ ಆಡಳಿತ ಮಂಡಳಿ ಮಹತ್ವದ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಟಿಟಿಡಿಯ ಯಾವುದೇ ಭೂಮಿ ಮಾರಾಟ ಮಾಡಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಟಿಟಿಡಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಡಳಿತ ಮಂಡಳಿ ಸಭೆ ನಡೆಸಲಾಯಿತು.

Share

Leave a Comment