ತಿರುಪತಿಯಲ್ಲಿ ಡಿಜಿಪಿಗಳ ಸಮನ್ವಯ ಸಭೆ

 

ತಿರುಪತಿ.ಫೆ.5- ಸಾರ್ವತ್ರಿಕ ಚುನಾವಣೆಗೆ ಇನ್ನೆರಡೇ ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಮಂಗಳವಾರ ಪೊಲೀಸ್‍ವರಿಷ್ಠಾಧಿಕಾರಿಗಳ ಸಭೆ ನಡೆಸಲಾಯಿತು.

 

ಏಪ್ರಿಲ್/ಮೇ ಯಲ್ಲಿ ಲೋಕಸಭಾ ಚುನಾವಣೆ ನಡೆಯಲ್ಲಿದ್ದು, ಸೂಕ್ತ ಸಮನ್ವಯದಡಿ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಪೊಲೀಸ್ ಮಹಾನಿರ್ದೇಶಕರು ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರು,  ಆಂಧ್ರಪ್ರದೇಶದ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ , ಛತ್ತೀಸ್‍ಗಡ, ಒಡಿಶಾ ಮತ್ತು ತೆಲಂಗಾಣದ ಅಧಿಕಾರಿಗಳು ಹಾಜರಿದ್ದರು.

 

ತೆಲಂಗಾಣ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ತ್ರಿವೇದಿ, ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಮೊದಲಾದವರು ಉಪಸ್ಥಿತರಿದ್ದರು.  ಎಡಪಂಥೀಯ ತೀವ್ರಗಾಮಿತ್ವದ ಮೇಲಿನ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ಗಡಿಯಲ್ಲಿ ಚೆಕ್‍ಪೋಸ್ಟ್ ಸ್ಥಾಪನೆ ಸೇರಿದಂತೆ ಹಲವು ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು.

 

Leave a Comment