ತಿರುಪತಿಗೆ ೧.೧ ಕೋಟಿ ದೇಣಿಗೆ ನೀಡಿದ ಮುಕೇಶ್ ಅಂಬಾನಿ

ತಿರುಪತಿ,ಸೆ.೪- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕಂಪನಿ ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಸೋಮವಾರ ದೊಡ್ಡ ಮೊತ್ತದ ದೇಣಿಗೆ ನೀಡಿದೆ. ಮುಕೇಶ್ ಅಂಬಾನಿ ಸ್ವಾಮ್ಯದ ಆರ್‌ಐಎಲ್ ಕಂಪನಿ ಆರ್‌ಐಎಲ್ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ೧.೧ ಕೋಟಿ ರೂಪಾಯಿ ಕೊಡುಗೆ ನೀಡಿದೆ.

ಕಂಪನಿಯ ಅಧಿಕಾರಿಯೊಬ್ಬರು ದೇವಸ್ಥಾನದ ಆಡಳಿತ ಮಂಡಳಿಗೆ ೧.೧ ಕೋಟಿ ರೂಪಾಯಿ ಮೌಲ್ಯದ ಡಿಮಾಂಡ್ ಡ್ರಾಫ್ಟ್ (ಡಿಡಿ) ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ದೇವಸ್ಥಾನವು ಪ್ರಾಣದಾನ ಹೆಸರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿದ್ದು, ಮಾರಣಾಂತಿಕ ಕಾಯಿಲೆಯಿಂದ ಬಳಲುವವರಿಗೆ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.

ಆರ್‌ಐಎಲ್ ಕಂಪನಿ ನೀಡಿರುವ ೧.೧ ಕೋಟಿ ಹಣವನ್ನು ಟ್ರಸ್ಟ್ ಈ ಆಸ್ಪತ್ರೆಗೆ ಬಳಸಲಿದೆ ಎನ್ನಲಾಗಿದೆ.

Leave a Comment