ತಿರುನಲ್ವೇಲಿ ಜಿಲ್ಲೆಯಲ್ಲಿ ಡಿವೈಎಫ್ಐ ಕಾರ್ಯಕರ್ತನ ಬರ್ಬರ ಹತ್ಯೆ

ತಿರುನಲ್ವೇಲಿ, ಜೂ 13 – ಜಿಲ್ಲೆಯ ತಚನಲ್ಲೂರ್ ಸಮೀಪದ ಕರೈಯಿರುಪು ಪ್ರದೇಶದಲ್ಲಿ ಕಳೆದ ರಾತ್ರಿ ಡೆಮಾಕ್ರಟಿಕ್ ಯೂತ್ ಫ್ರಂಟ್ ಆಫ್ ಇಂಡಿಯಾ (ಡಿವೈಎಫ್ಐ)ನ ತಿರುನಲ್ವೇಲಿ ಜಿಲ್ಲಾ ಖಜಾಂತಿಯನ್ನು ಅಪರಿಚಿತರ  ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ.

ಗಂಗೈಕೊಂಡನ್ ಕೈಗಾರಿಕಾ ಪ್ರದೇಶದ ಟೈರ್ ತಯಾರಿಕಾ ಘಟಕದಲ್ಲಿ ಕೆಲಸದಲ್ಲಿದ್ದ  ಪರಿಶಿಷ್ಟ ಜಾತಿ ಸೇರಿದ ಅಶೋಕ್ (23) ಎಂಬಾತ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪರಿಚಿತರ ಗುಂಪು ಅಡ್ಡಹಾಕಿದೆ. ಬೇರೊಂದು ಜಾತಿಗೆ ಸೇರಿದ ದಾಳಿಕೋರ ಗುಂಪು ಆತನನ್ನು ಕುಡಗೋಲುಗಳಿಂದ ಕೊಚ್ಚಿ ಸ್ಥಳದಲ್ಲೇ ಹತ್ಯೆ ಮಾಡಿದೆ. ಬಳಿಕ ಹತ್ತಿರದ  ರೈಲು ಹಳಿಯ ಮೇಲೆ ಮೃತದೇಹವನ್ನು ಎಸೆದು ಗುಂಪು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಕೊಲೆಪಾತಕರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಮೃತನ ಸಂಬಂಧಿಗಳು ತಚನಲ್ಲೂರು ಬಳಿ ಭಾರಿ ಸಂಚಾರ ದಟ್ಟಣೆಯ ತಿರುನಲ್ವೇಲಿ-ಮಧುರೈ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವುದಕ್ಕೆ ಪ್ರತಿಭಟನಾಕಾರರು ತಡೆದಿದ್ದಾರೆ.

 ಉದ್ವಿಗ್ನತೆ ತೀವ್ರವಾಗುತ್ತಿದ್ದವಂತೆ ತಿರುನಲ್ವೇಲಿ ನಗರ ಪೋಲಿಸ್ ಆಯುಕ್ತ ಎನ್. ಭಾಸ್ಕರನ್ ಅವರು ಹಿರಿಯ  ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

ವರದಿಗಾಗಿ ತೆರಳಿದ್ದ ವಿವಿಧ ಟಿ.ವಿ. ವಾಹಿನಿಗಳ ಕ್ಯಾಮೆರಾಮೆನ್ ಗಳು  ಮತ್ತು ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳನ್ನು ಪ್ರತಿಭಟನಾಕಾರರು ನಿಂದಿಸಿದ್ದಾರೆ.

 ಕೆಲವು ತಾಸಿನ ನಂತರ, ಪ್ರತಿಭನಾಕಾರರು ರಸ್ತೆ ತಡೆ ಹಿಂತೆಗೆದುಕೊಂಡ ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.

 ಎರಡು ವಾರಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಬೇರೊಂದು ಜಾತಿಗೆ ಸೇರಿದ ಕೆಲವು ಯುವಕರು ಮೃತನ ತಾಯಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

  ಇದೇ ಶತೃತ್ವ ಡಿವೈಎಫ್‍ಐ ಕಾರ್ಯಕರ್ತನ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Leave a Comment