ತಾ.ಪಂ. ಸಾಮಾನ್ಯ ಸಭೆ ಕೇಳಿದ್ದೇ ಕೇಳ್ಬೇಕು ಹೇಳಿದ್ದೇ ಹೇಳ್ತೀರಿ

ಬಳ್ಳಾರಿ, ಜೂ.12: ಬಾರದ ಶಾಸಕರು, ಮಾತನಾಡದ ಅಧ್ಯಕ್ಷೆ, ಎಲ್ಲವೂದಕ್ಕೆ ಆಗುತ್ತೆ ಮಾಡಿ ಬಗೆಹರಿಸಿ ಎಂದು ಸೂಚನೆ ನೀಡಿದ ಕಾರ್ಯನಿರ್ವಾಹಕ ಅಧಿಕಾರಿ, ಕೇಳಿದ್ದೇ ಕೇಳಿ, ಹೇಳಿದ್ದೇ ಹೇಳ್ತೀರಿ ಎಂದು ಬೇಸತ್ತ ಸದಸ್ಯರ ನೋವಿನ ನುಡಿಗಳು ಇದು ಇಂದು ನಡೆದ ತಾಲೂಕು ಪಂಚಾಯ್ತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಂಡ ದೃಶ್ಯ.

ತಾಲೂಕು ಪಂಚಾಯ್ತಿಯ 10ನೇ ಸಾಮಾನ್ಯ ಸಭೆ ನಗರದ ತಾಲೂಕು ಪಂಚಾಯ್ತಿ ಆವರಣದ ಸಭಾಂಗಣದಲ್ಲಿ ಅಧ್ಯಕ್ಷೆ ರಮೀಜ ಬೀ ಅಧ್ಯಕ್ಷತೆಯಲ್ಲಿ ನಡೆಯಿತು.
ಒಂದು ಗಂಟೆ ತಡವಾಗಿ ಆರಂಭಗೊಂಡ ಸಭೆಯಲ್ಲಿ ಎಂದಿನಂತೆ ತಮ್ಮ ಮೌನವನ್ನು ಅಧ್ಯಕ್ಷೆ ಮುರಿಯಲಿಲ್ಲ. ಉಪಾಧ್ಯಕ್ಷ ಮಲ್ಲಿಕಾರ್ಜುನ ಒಂದೆರೆಡು ವಿಷಯಗಳ ಪ್ರಾಸ್ತಾಪದಲ್ಲಿ ಮಧ್ಯ ಪ್ರವೇಶ ಮಾಡಿ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಎಂದರು. ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಏನು ಆಗುತ್ತಿಲ್ಲ ಎಂದು ಆರೋಪಿಸಿದರು.

ಬಾದನಹಟ್ಟಿ ಕ್ಷೇತ್ರದ ಸದಸ್ಯ ಗೋವಿಂದಪ್ಪ ಸಹ ನಾವು ಮಾತೋಡೋಕೆ ನೀವು ಹೇಳೋಕೆ ಅಷ್ಟೆ ಈ ಸಭೆ ಹೇಳಿದ ಕೆಲಸ ಮಾಡದಿದ್ರೆ ನಮಗೆ ಮಾರ್ಯಾದೆ ಇಲ್ಲ. ಮೊದಲು ನಾವು ಹೇಳಿದ ಕೆಲಸ ಮಾಡಿ ಎಂದು ಕೊಱ್ಲಗುಂದಿ ಕ್ಷೇತ್ರದ ಸದಸ್ಯ ತಿಮ್ಮಾರೆಡ್ಡಿ, ಆರಂಭದ ಸಭೆಯಿಂದ ಕೇಳ್ತಿ ಇದೀನಿ ಗುಡುದೂರು ಶಾಲೆಗೆ ಕಾಂಪೌಂಡ್ ನಿರ್ಮಾಣ ಆಗಿಲ್ಲ ಮತ್ತು ಸರ್ಕಾರ 3.68 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು. ಮಧ್ಯಪ್ರವೇಶ ಮಾಡಿದ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಒತ್ತುವರಿ ತೆರವು ನಂತರ ಆಗಲಿ ಮೊದಲು ಶಾಲೆಗೆ ಕಾಂಪೌಂಡ್ ನಿರ್ಮಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು

ರೂಪನ ಗುಡಿಯ ಆಸ್ಪತ್ರೆ ವೈದ್ಯರು ಇಡೀ ದಿನ ಇರಬೇಕು, ಇಲ್ಲಿನ 108 ವಾಹನವನ್ನು ಪಿ.ಡಿ.ಹಳ್ಳಿಗೆ ಸ್ಥಳಾಂತರ ಮಾಡಿರುವುದನ್ನು ಕೈಬಿಡಬೇಕು, ಜಾತ್ರೆ ಬಂದಿದೆ ರಸ್ತೆ ದುರಸ್ತಿ ಮಾಡಿ ಎಂದಾಗ ಪಿ.ಹೆಚ್.ಸಿ ಇರುವಂತೆ 108 ವಾಹನ ಇರಬೇಕು ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳಿ ನಾಳೆಯಿಂದ ರಸ್ತೆ ದುರಸ್ತಿಗೆ ಕ್ರಮ ಎಂಬ ಭರವಸೆ ಕೇಳಿ ಬಂತು.

ಬಾದನಹಟ್ಟಿ ಸದಸ್ಯ ಗ್ರಾಮದಲ್ಲಿ ಸರಿಯಾಗಿ ನೀರು ಬರದೆ ಅಕ್ರಮ ನಳಗಳು ಹೆಚ್ಚಿವೆ ಏನು ಕ್ರಮ ಜರುಗಿದೆ ಎಂದಾಗಿ ಪಿ.ಡಿ.ಓ ಮಂಜುನಾಥ 69 ಅಕ್ರಮ ಸಂಪರ್ಕಗಳನ್ನು ಗ್ರಾಮ ಸಭೆಯಲ್ಲಿ ಚರ್ಚಿಸಿ ಸಕ್ರಮ ಮಾಡಿದೆ. ಎಸ್.ಸಿ/ಎಸ್.ಟಿ ಕಾಲೋನಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುತ್ತಿದ್ದು ಬರುವ 15 ದಿನದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಿದೆಂದು ಸಭೆಗೆ ತಿಳಿಸಿದರು.

ಗ್ರಾಮದಲ್ಲಿ ಹಾದು ಹೋಗಿರುವ ಹೈ.ವೆ ವಿದ್ಯುತ್ ಲೈನ್ ನಿಂದ ಜನತೆಗೆ ತೊಂದರೆ ಆಗುತ್ತಿದ್ದು ಬದಲಾಯಿಸಬೇಕು ಎಂದು ಸದಸ್ಯ ಗೋವಿಂದಪ್ಪ ಕೇಳಿದಾಗ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ದಾಸಪ್ಪ ಜನರೇ ವಿದ್ಯುತ್ ಲೈನ್ ಕೆಳಗೆ ಮನೆ ಕಟ್ಟಿಕೊಂಡಿದ್ದಾರೆ. ಅವರದೇ ತಪ್ಪು ಬದಲಾಯಿಸಬೇಕೆಂದರೆ ಅದರ ವೆಚ್ಚ ಭರಿಸಬೇಕು ಎಂದು ಹೇಳಿದರು. ಮಳೆ ಗಳಿಗೆ 350 ವಿದ್ಯುತ್ ಕಂಬ ಉರುಳಿಸಿ ಅವನ್ನು ಎತ್ತಿ ನಿಲ್ಲಿಸಲು ಕಾರ್ಯ ನಡೆದಿದೆಂದರು.ಸದಸ್ಯರು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಬಹುತೇಕವೂ ಈ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳೇ ಆಗಿದ್ದವು.
 ಬರಬೇಕಿತ್ತು
ನೂತನವಾಗಿ ಆಯ್ಕೆಯಾದ ತಾಲೂಕು ವ್ಯಾಪ್ತಿಯ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸಭೆಗೆ ಬಂದು ಕ್ಷೇತ್ರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳ ಮೇಲೆ ಒತ್ತಡ ತರಬೇಕಿತ್ತು. ಆದರೆ ಅವರು ಬರಲಿಲ್ಲ.

Leave a Comment