ತಾಳೂರು ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಸಾಂಕೇತಿಕ ಬಂದ್

ಬಳ್ಳಾರಿ, ಆ.10: ನಗರದ ಪಾರ್ವತಿ ನಗರದ ಮುಖ್ಯ ರಸ್ತೆಯಿಂದ ತಾಳೂರು ರಸ್ತೆಯ ಕನಿಷ್ಠ 5 ಕಿ.ಮಿ. ನಷ್ಟಾದರೂ ರಸ್ತೆ ಅಗಲೀಕರಿಸಿ ಎಂದು ತಾಳೂರು ರಸ್ತೆಯಲ್ಲಿ ಇಂದು ಅಖಿಲ ಭಾರತ ಜನಗಣ ಒಕ್ಕೂಟದ ಸಂಸ್ಥಾಪಕ ಎನ್.ಗಂಗೀರೆಡ್ಡಿ ಸಾರ್ವಜನಿಕರೊಂದಿಗೆ ಸಾಂಕೇತಿಕ ರಸ್ತೆ ತಡೆ ನಡೆಸಿದರು.

ನಿತ್ಯ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ನಿತ್ಯ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರಾದ ಬಂಡೆಪ್ಪ, ಗುರುಮಾಂತೇಶ, ಗುರುರಾಜ, ಸುಬ್ಬಾರೆಡ್ಡಿ, ಬಂಡೇಸ್ವಾಮಿ ಇತರರು ಇದ್ದರು.

Leave a Comment