ತಾಲ್ಲೂಕು ಆಡಳಿತದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ : ಸಾರ್ವಜನಿಕರು ದೂರು

ತಿ. ನರಸೀಪುರ. ಅ.23 : ಸಾರ್ವಜನಿಕ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುವಲ್ಲಿ ತಾಲ್ಲೂಕು ಕಂದಾಯ ಇಲಾಖೆ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂತು.
ತಾಲ್ಲೂಕಿನಲ್ಲಿ ಪಹಣಿ, ತಿದ್ದುಪಡಿ, ಖಾತೆ, ಒತ್ತುವರಿ ತೆರವು, ಸರ್ಕಾರದ ಸಹಾಯಧನ, ವಿವಿಧ ಸವಲತ್ತುಗಳಿಗಾಗಿ ಸಾರ್ವಜನಿಕರು ರೈತರು ನಿರಂತರವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಆದರೂ ಸೂಕ್ತ ಮಾಹಿತಿ ನೀಡದೇ ಅಲೆದಾಡಿಸಲಾಗುತ್ತಿದೆ. ಪ್ರತಿನಿತ್ಯ ಕೂಲಿ ಕಾರ್ಮಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಬರುತ್ತಿದ್ದಾರೆ. ಕೆಲಸ ಮಾತ್ರ ಆಗುತ್ತಿಲ್ಲ. ಇದರೆ ಜತೆಗೆ ಸರ್ವೆ ಸ್ಕೆಚ್, ಜಮೀನು ಅಳತೆಗೆ ಶುಲ್ಕ ಪಾವತಿಸಿ ಕಾಯುತ್ತಿದ್ದರೂ ಸಹ ನಿಗದಿತ ವೇಳೆಯಲ್ಲಿ ಜನರ ಕೆಲಸ ಆಗದೇ ಪರಿತಪಿಸುವಂತಾಗಿದೆ ಎಂಬುದು ಕಂದಾಯ ಇಲಾಖೆಯ ವಿರುದ್ಧ ಕೇಳಿ ಬಂದ ಆರೋಪ
ನಾಢಕಚೇರಿಗಳಲ್ಲಿ ಕೆಲಸ ಮಾಡುವ ಅಪರೇಟರ್‍ಗಳು ಮಾಡುವ ತಪ್ಪಿನಿಂದ ಕೂಡ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಸಮರ್ಪಕವಾಗಿ ಕೆಲಸ ಮಾಡಬೇಕೆಂಬ ಸೂಚನೆ ನೀಡಬೇಕಿದೆ. ಜತೆಗೆ ಬೆಳಗ್ಗಿನಿಂದ ಸಾಲು ನಿಂತು ಮಧ್ಯಾಹ್ನದ ವೇಳೆಗೆ ಸರ್ವರ್ ಬಿಜಿ ಎಂಬ ನೆಪದಿಂದ ಜನರಿಗೆ ತೊಂದರೆಯಾಗುತ್ತದೆ.
ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಕೆಲಸವನ್ನು ಮಾಡಬಾರದು.ಈಗಾಗಲೇ ಅಧಿಕಾರಗಳಿಗೆ ಈಸಂಬಂದ ನಿರ್ದೇಶನ ನೀಡಲಾಗಿದೆ ಹಾಗಾಗಿಯು ಅಧಿಕಾರಿಗಳು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಆಡಳಿತದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು ನೀಡುದ್ದು ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್ಸ್‍ಸ್ಪೆಕ್ಟರ್ ಜಯರತ್ನ ತಹಶೀಲ್ದಾರ್ ನಾಗಪ್ರಶಾಂತ್‍ರವರನ್ನು ಬೇಟಿ ಮಾಡಿ ಮಾಹಿತಿ ಪಡೆದರು.
ಲೋಕಾಯುಕ್ತ ಇನ್ಸ್‍ಪೆಸ್ಟರ್ ಜಯರತ್ನ ಮಾತನಾಡಿ, ತಾಲ್ಲೂಕಿಗೆ ಪ್ರತಿ ತಿಂಗಳು ನಾವು ಭೇಟಿ ನೀಡುತ್ತೇವೆ ತಾವುಗಳು ದಾಖಲೆ ಸಮೇತ ಸಂಬಂದ ಪಟ್ಟ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದರೆ ಕಾನುನೂನಡಿ ಕ್ರಮ ಕೈಗೊಳ್ಳುತೇವೆ. ವಿನಾ ಕಾರಣ ರೈತರನ್ನು ಕಚೇರಿಗೆ ಅಲೆಸಬೇಡಿ. ನಿಮ್ಮ ಇಲಾಖೆ ಸಿಬ್ಬಂದಿಗಳಿಗೆ ತುರ್ತಾಗಿ ಕೆಲಸ ಮಾಡಿಕೊಡುವಂತೆ ಸೂಚಿಸಬೇಕೆಂದು ತಹಶೀಲ್ದಾರಿಗೆ ತಿಳಿಸಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲಾರು ದೂರುಗಳು ಕೇಳಿಬರುತ್ತಿವೆ. ಅದಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು.
ಈ ವೇಳೆ ಲೋಕಾಯುಕ್ತ ಇಲಾಖೆಯ ಪವನ್, ಪ್ರದೀಪ್, ವೀಣಾ ತಹಶೀಲ್ದಾರ್ ಪಿ. ಎನ್. ನಾಗಪ್ರಶಾಂತ್, ಶಿರೆಸ್ತೇದಾರ್ ಪ್ರಭುರಾಜ್ ಆರೈ ದೇವಣ್ಣ ರೈತರಾದ ಮಲ್ಲಪ್ಪ, ಮಹೇಶ್ ಮಹದೇವಸ್ವಾಮಿ, ಮತ್ತಿತರರು ಇದ್ದರು

Leave a Comment