ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ

ಬಳ್ಳಾರಿ, ಆ10 : ನಗರದ ವೀರಶೈವ ವಿದ್ಯಾವರ್ಧಕ ಸಂಘದ ಸ್ಯತಂತ್ರ ಪದವಿ ಪೂರ್ವ ಕಾಲೇಜಿನ ನಲ್ಲಿಂದು 2018 -19 ನೇ ಸಾಲಿನ ತಾಲೂಕು ಮಟ್ಟದ ಪಿ.ಯು.ಸಿ ವಿದ್ಯಾರ್ಥಿಗಳ ಷಟಲ್ ಬ್ಯಾಡ್‍ಮಿಂಟನ್ ಪಂದ್ಯಾವಳಿಗಳನ್ನು ಕಾಲೇಜಿನ ಅಧ್ಯಕ್ಷರಾದ ಡಾ.ಸೋಮಶೇಖರ್ ಎಫ್. ಗಡ್ಡಿ ಉದ್ಟಾಟಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯ ವೆಂಕಟೇಶ್‍ಗೌಡ ಮತ್ತು ಕಾಲೇಜಿನ ಪ್ರಾಚಾರ್ಯ ನಾಗೇಶ್‍ಬಾಬು ಮತ್ತು ಆಂಗ್ಲಭಾಷ್ ಉಪನ್ಯಾಸಕ ಯು. ಬಸವರಾಜ , ಕು. ಭಾವನಾ ಮತ್ತಿತರರಿದ್ದರು.

ಪಂದ್ಯಾವಳಿಯ ನೇತೃತ್ವವನ್ನು ದೈಹಿಕ ಶಿಕ್ಷಕ ವಿಜಯ ಮಹಾಂತೇಶ್ ಅವರ ಸಂಗಡಿಗರು ವಹಿಸಿದ್ದರು. ಈ ಪಂದ್ಯಾವಳಿಯಲ್ಲಿ 25ಕ್ಕೂ ಅಧಿಕ ತಂಡಗಳು ಭಾಗವಹಿಸಿವೆ.

Leave a Comment