ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.

ಕುರುಗೋಡು, ಸೆ.4: ಬಾದನಹಟ್ಟಿ, ಯರ್ರಂಗಳಿಗಿ, ಕೊಳಗಲ್ಲು ಮಾರ್ಗದಿಂದ ಬೆಳಿಗ್ಗೆ ಸಮಯಲ್ಲಿ ಬಳ್ಳಾರಿಗೆ ಹೋಗಲು ಕೇವಲ ಒಂದೇ ಬಸ್ಸು ಇದ್ದು, ಅದು ಕೂಡಾ ಕುರುಗೋಡಿನಿಂದ ಬಳ್ಳಾರಿಗೆ ಹೋಗುವ ವಿದ್ಯಾರ್ಥಿಗಳು ತುಂಬಿರುತ್ತಾರೆ. ಆದ್ದರಿಂದ ಬೆಳಿಗ್ಗೆ ಸಮಯದಲ್ಲಿ ಈ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತುಂಬಾ ತೊಂದರೆಯಾಗಿದೆ.

ಮಧ್ಯಾಹ್ನ ಸಮಯದಲ್ಲಿ ವಾಪಸ್ ಮನೆಗಳಿಗೆ ಹೋಗಲು ಕೂಡಾ ಬಸ್ಸುಗಳ ಕೊರತೆಯಿದ್ದು, ಅದರಲ್ಲೂ ಬಾದನಹಟ್ಟಿ ಗ್ರಾಮದ ವಿದ್ಯಾರ್ಥಿಗಳ ಪಾಸ್ ನಡೆಯುವುದಿಲ್ಲವೆಂದು ವಿದ್ಯಾರ್ಥಿಗಳನ್ನು ಸಂಕಷ್ಟ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ಡಿಪೋ ಆರಂಭವಾಗಿದ್ದರೂ ಕೂಡಾ ಈ ಭಾಗದಲ್ಲಿ ಇದುವರೆಗೆ ಬಸ್ಸುಗಳ ಸಮಸ್ಯೆ ಬಗೆಹರಿದಿಲ್ಲ, ಆದ್ದರಿಂದ ತಕ್ಷಣದಿಂದಲೇ ನಮ್ಮ ಸಮಸ್ಯೆಯನ್ನು ಬಗೆಹರಿಯಬೇಕು ಎಂದು ಕುರುಗೋಡು ಘಟಕ ವ್ಯವಸ್ಥಾಪಕರಾದ ರಬ್ಬಾನಿ ಅವರಿಗೆ ಮನವಿ ಪತ್ರ ಕೊಟ್ಟರು.

ಮನವಿಯನ್ನು ಸ್ವೀಕರಿಸಿದ ಕುರುಗೋಡು ಘಟಕ ವ್ಯವಸ್ಥಾಪಕರು ತಕ್ಷಣವೇ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ನಾಳೆಯಿಂದಲೇ ಈ ಮಾರ್ಗದಲ್ಲಿ ಬಸ್ಸುಗಳು ವ್ಯವಸ್ಥೆ ಮಾಡುವುದಾಗಿ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ, ಸಾರ್ವಜನಿಕ ಎದುರಿಗೆ ಭರವಸೆ ನೀಡಿದರು.

ಜಿ.ಮಾರುತಿ, ಡಿ.ಓಬಳೇಶ, ಕೆ. ಕರಿಬಸಪ್ಪ, ಕೆ. ಹೇಮಾದ್ರಿ, ಹೆಚ್.ಕೃಷ್ಣ, ಎಸ್.ನವೀನ್, ಮಲ್ಲಿಕಾರ್ಜುನ, ರಾಜಪ್ಪ, ಅಶ್ವಥ್ ಕುಮಾರ್, ಸಂದೀಪ್, ಗಿರಿ, ಬಸವರಾಜ, ರಾಜಶೇಖರ ಹರೀಶ್ ಕುಮಾರ್ ಇನ್ನೂ ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದ್ದರು.

Leave a Comment