ತಾಲಿಬಾನ್ ಅಟ್ಟಹಾಸ ೨೧ ಸೇನಾ ಸಿಬ್ಬಂದಿ ಬಲಿ

ಕಾಬೂಲ್, ಸೆ. ೧೦-ತಾಲಿಬಾನ್ ಭಯೋತ್ಪಾದಕರು ಗಡಿಭದ್ರತಾ ಪಡೆಗಳ ಮೇಲೆ ಹಠಾತ್ ದಾಳಿ ನಡೆಸಿ ೨೧ ಸೇನಾ ಸಿಬ್ಬಂದಿಯನ್ನು೮ ಕೊಂದು ಹಾಕಿದ್ದಾರೆ. ಆದರೆ ದಾಳಿಯಲ್ಲಿ ೧೩ ಮಂದಿ ಯೋಧರು ಹತರಾಗಿದ್ದಾರೆಂದು ಕುಂದೂಜ್ ಪ್ರಾಂತ್ಯದ ಮುಖ್ಯಸ್ಥ ಮೊಹ್ಮದ್ ಯೂಸೂಫ್ ತಿಳಿಸಿದ್ದಾರೆ.
ನಿನ್ನೆ ರಾತ್ರಿಯಿಂದ ಇಂದು ಬೆಳಗಿನ ಜಾವದವರೆಗೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಘಟನೆಯಲ್ಲಿ ೧೫ ಮಂದಿ ಯೋಧರು ಗಾಯಗೊಂಡಿದ್ದಾರೆ.
ಈ ಮಧ್ಯೆ ಜ್ವಜಾನ್ ಪ್ರಾಂತ್ಯದಲ್ಲಿ ತಾಲಿಬಾನ್ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ದಾಳಿಯಲ್ಲಿ ೮ ಮಂದಿ ಪೊಲೀಸರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಮೊಹ್ಮದ್ ಜ್ವಾಜಾನಿ ತಿಳಿಸದ್ದಾರೆ.
ಆದರೆ ಈ ಎರಡೂ ದಾಳಿಯ ಹೊಣೆಯನ್ನು ನಡೆಸಿದ್ದು ತಾನೇ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಒಪ್ಪಿಕೊಂಡಿದ್ದಾನೆ.

Leave a Comment