ತಾರಾ ಮಂಡಲದಿಂದ ಹಾರಿಹೋಗೋ ತಾರೆಗಳು

ಅತಿ ವೇಗದಲ್ಲಿ ಚಲಿಸುವ ಕೆಲ ನಕ್ಷತ್ರಗಳು ತಮ್ಮ ಮಾತೃ ತಾರಾಮಂಡಲಗಳಿಂದ ಸಿಡಿದು ಬೇರೆ ತಾರಾಮಂಡಲಗಳಿಗೆ ಸೇರುತ್ತಿವೆ ಎಂದು ಇತ್ತೀಚಿಗೆ ಅಧ್ಯಯನ ವರದಿಯೊಂದು ಹೇಳಿದೆ.

ಬ್ರಹ್ಮಾಂಡದಲ್ಲಿ ಒಂದು ನೂರು ಕೋಟಿ ನಕ್ಷತ್ರ ಮಂಡ‌ಲಗಳಿವೆ. ಅವುಗಳಲ್ಲಿ ನಾವಿರುವ ಕ್ಷೀರಪಥವೂ ಸೇರಿದೆ. ಕ್ಷೀರಪಥದ ಸುತ್ತ ನೂರಾರು ಸಣ್ಣ ಸಣ್ಣ ತಾರಾ ಮಂಡಲಗಳು ಸುತ್ತುತ್ತಿದ್ದು, ಇವುಗಳಲ್ಲಿಯ ಅತಿವೇಗ ಪಡೆದುಕೊಂಡ ನಕ್ಷತ್ರಗಳು ಗುರುತ್ವಾಕರ್ಷಣೆಯನ್ನು ಮೀರಿ ಸಿಡಿದು ಹೋಗಿ ಕ್ಷೀರಪಥ ಸೇರುತ್ತಿವೆ ಎಂದು ಇತ್ತೀಚಿನ ಅಧ್ಯಯನ ವರದಿ ಹೇಳಿದೆ. ವಿವಿಧ ತಾರಾಮಂಡಲಗಳಲ್ಲಿ ಹೀಗೆ ಸಿಡಿದು ವೇಗ ಹೊಂದಿರುವ ನಕ್ಷತ್ರಗಳ ಸಂಖ್ಯೆ 10 ಸಾವಿರದಷ್ಟಿದೆ ಎಂದು ಅದ್ಯಯನ ವರದಿ ಹೇಳಿದೆ.

ನಾವು ಇರುವ ತಾರಾ ಮಂಡಲ ಕ್ಷೀಪಪಥದ ಸುತ್ತ ಸಾವಿರಾರು ಚಿಕ್ಕ ಚಿಕ್ಕ ತಾರಾಮಂಡಲಗಳು ಸುತ್ತುತ್ತಿವೆ. ವೇಗವಾಗಿ ಸುತ್ತುವ ಈ ತಾರಾ ಮಂಡಲಗಳಿಂದ ಕೆಲವು ಅತಿ ವೇಗದ ಚಾಲನೆ ಇರುವ ನಕ್ಷತ್ರಗಳು ಆ ತಾರಾಮಂಡಲಗಳ ಗುರುತ್ವಾಕರ್ಷಣೆಯನ್ನು ಮೀರಿ ಹಾರಿಹೋಗುತ್ತಿದ್ದು, ಕೆಲವೊಮ್ಮೆ ಕ್ಷೀಪಪಥವನ್ನು ಸೇರುತ್ತವೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ. ಈ ವರದಿ ರಾಯಲ್ ಅಸ್ಟನಾಮಿಕಲ್ ಸೊಸೈಟಿ ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಅತಿವೇಗದಲ್ಲಿ ಸಂಚರಿಸುವ ಈ ನಕ್ಷತ್ರಗಳನ್ನು ಹೈಪರ್ ವೆಲಾಸಿಟಿ ಸ್ಟಾರ್ ಎಂದು ಕರೆಯಲಾಗಿದ್ದು, ಇಂತಹ ಓಡುವ ನಕ್ಷತ್ರಗಳ ಚಿಕ್ಕ ಚಿಕ್ಕ (ಡ್ವಾರ್ಫ್) ತಾರಾಮಂಡಲಗಳಲ್ಲಿ ಹೆಚ್ಚಾಗಿ ನಡೆಯುತ್ತದೆ.

ಅಧ್ಯಯನ

ಈ ವೇಗವಾಗಿ ಚಲಿಸುವ ನಕ್ಷತ್ರಗಳ ಬಗ್ಗೆ ಶೋನ್ ಡಿಜಿಟಲ್ ಸ್ಕೈ ಸರ್ವೆ ಮತ್ತು ಕಂಪ್ಯೂಟರ್ ಸ್ಟಿಮುಲೇಷನ್ ಬಳಸಿ ಅಧ್ಯಯನ ನಡೆಸಲಾಗಿದ್ದು, ಈ ನಕ್ಷತ್ರಗಳಿಗೆ ಅತಿ ವೇಗಕ್ಕೆ ಕಾರಣ ತಾವಿರುವ ಮಾತೃ ತಾರಾಮಂಡಲಗಳು ಕ್ಷೀರಪಥವನ್ನು ಸುತ್ತುವ ವೇಗ ಹಾಗೂ ಈ ನಕ್ಷತ್ರಗಳು ಸಿಡಿದು ಹೋಗುವ ವೇಗ ಸೇರಿ ಸೆಕೆಂಡಿಗೆ 400 ಕಿ.ಮೀ. ಸಾಗುವ ವೇಗ ಇವಕ್ಕೆ ಬರುತ್ತದೆ.

ನಕ್ಷತ್ರಗಳು ವೇಗ ಪಡೆಯಲು ಹಲವು ಸಂದರ್ಭಗಳು ಕಾರಣವಾಗಿವೆ. ಕೆಲವು ಸಂದರ್ಭಗಳಲ್ಲಿ ಸಹ ನಕ್ಷತ್ರಗಳು ಸ್ಫೋಟಗೊಂಡಾಗ ಅದರ ಪ್ರಭಾವಕ್ಕೆ ಸಿಕ್ಕಿ ಇವಕ್ಕೆ ಹೆಚ್ಚಿನ ವೇಗ ಸಿಗುತ್ತದೆ. ಬ್ರಹ್ಮಾಂಡದಲ್ಲಿರುವ ವಿವಿಧ ತಾರಾಮಂಡಲಗಳಲ್ಲಿ ಇಂತಹ ಓಡುವ ನಕ್ಷತ್ರಗಳ ಸಂಖ್ಯೆ 10 ಸಾವಿರದಷ್ಟಿವೆ ಎಂದೂ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಉಗಮ

ಬಾಹ್ಯಾಕಾಶದಲ್ಲಿ ಹರಡಿಕೊಂಡಿರುವ ಅನಿಲಗಳ ಮತ್ತು ಧೂಳಿನಿಂದ ತುಂಬಿದ ಮೋಡಗಳ ಕಣಗಳಿಂದ ನಕ್ಷತ್ರಗಳು ರೂಪುಗೊಳ್ಳುತ್ತವೆ.

ಅಂತಹ ಅನಿಲ ಮೋಡಗಳು ಮತ್ತು ಅನಿಲಗಳು ತಮ್ಮದೇ ಆದ ಗುರುತ್ವಾಕರ್ಷಣೆಗೆ ಒಳಗಾಗಿ ಸಂಕುಚಿತಗೊಳ್ಳುತ್ತವೆ. ಹೀಗೆ ಸಂಕುಚಿತಗೊಳ್ಳುವುದರಿಂದ ಒತ್ತಡ ಹೆಚ್ಚಿ ಶಾಖ ಉತ್ಪಾದನೆಯಾಗುತ್ತದೆ. ಇದು ಮೋಡ ಮತ್ತಷ್ಟು ಸಂಕುಚಿತಗೊಳ್ಳಲು ಕಾರಣವಾಗುತ್ತದೆ.

ಹೀಗೆ ಸಂಕುಚಿತಗೊಂಡು ಅವುಗಳ ಮಧ್ಯ ಭಾಗದ ಉಷ್ಣಾಂಶ ಲಕ್ಷಾಂತರ ಡಿಗ್ರಿ ಸೆಂಟಿಗ್ರೇ‌ಡ್‌ಗೆ ಮುಟ್ಟುತ್ತವೆ. ಈ ಹಂತದಲ್ಲಿ ಇವು ನಿಗಿನಿಗಿ ಮಿಣುಕುತ್ತಿರುತ್ತವೆ.

– ಉತ್ತನೂರು ವೆಂಕಟೇಶ್.

 

Leave a Comment