ತಾರಾ ಜೋಡಿಗೆ ಕಂಕಣ ೪೫ರ ಮಲೈಕಾ, ೩೫ರ ಅರ್ಜುನ್‌ಗೆ ಮದುವೆ

ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರೊಂದಿಗೆ ಸರಿ ಸಮಾರು ಹದಿನೇಳು ವರ್ಷಗಳ ಕಾಲ ಸಂಸಾರ ನಡೆಸಿದ್ದ ನಟಿ ಮಲೈಕಾ ಅರೋರಾ ಖಾನ್ ಕಳೆದ ವರ್ಷ ವಿವಾಹ ಬಂಧನ ಕಳಚಿಕೊಂಡಿದ್ದರು.

ಅದಕ್ಕೆ ಅಸಲಿ ಕಾರಣವನ್ನು ಅರ್ಬಾಜ್ ಖಾನ್ ಆಗಲಿ ಇಲ್ಲವೆ ಮಲೈಕಾ ಆಗಲಿ ಬಾಯಿ ಬಿಟ್ಟಿರಲಿಲ್ಲಆದರೆ ಇವರಿಬ್ಬರು ಬೇರೆ ಬೇರೆ ಆಗಲು ಯುವ ನಟ ಅರ್ಜುನ್ ಕಪೂರ ಜೊತೆ ಅಗತ್ಯಕ್ಕಿಂತ ಹೆಚ್ಚಾಗಿ ಮಲೈಕಾ ಸುತ್ತಾಟ ಅಲೆದಾಟ ಕಾರಣ ಎನ್ನುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಈ ನಡುವೆಯೇ ೪೫ರ ಹರೆಯದ ಮಲೈಕಾ ಅರೋರ ಮತ್ತು ೩೫ರ ವಯಸ್ಸಿನ ಅರ್ಜುನ್ ಕಪೂರ್ ಮುಂದಿನ ವರ್ಷ ಮದುವೆಯಾಗಲು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಲೀವ್ ಇನ್ ರಿಲೇಷನ್‌ನಲ್ಲಿರುವ ಈ ಜೋಡಿ ಅದಕ್ಕೆ ಮದುವೆಯ ಅಧಿಕೃತ ಮೊಹರು ಹೊತ್ತಲು ಮುಂದಾಗಿದೆ.
ಮಲೈಕಾ ಅರೋರಾ ಖಾನ್‌ಗೆ ಇದು ಎರಡನೇ ಮದುವೆ,ನಟ ಅರ್ಜುನ್ ಕಪೂರ್‌ಗೆ ಮೊದಲ ಮದುವೆ ಇದಾಗಲಿದೆ.ಅರ್ಜುನ್ ಕಪೂರ್ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪುತ್ರ.
ಪುತ್ರ ತನಗಿಂತ ಹತ್ತು ವರ್ಷದ ನಟಿಯ ಜೊತೆ ಆಫೇರ್ ಹೊಂದಿದ್ದಾನೆ.ಅದರಲ್ಲಿಯೂ ಮದುವೆಯಾಗಿ ಹದಿನೈದು ವರ್ಷದ ಮಗನಿದ್ದಾನೆ ಅಂತಹ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾನೆ ಮತ್ತು ಸುತ್ತಾಡುತ್ತಿದ್ದಾನೆ ಎನ್ನುವ ವಿಷಯ ತಿಳಿದು ಮಗನಿಗೆ ಇನ್ನಿಲ್ಲದ ಬುದ್ದಿವಾದ ಹೇಳಿದ್ದರೂ ಅದವಯದನ್ನು ಕೇಳುವ ಗೋಜಿಗೆ ಅರ್ಜುನ್ ಹೋಗಿಲ್ಲ.
ಹೀಗಾಗಿ ಮಗನನ್ನು ತನ್ನ ಪಾಡಿಗೆ ತಾನು ಬಿಟ್ಟಿದ್ದಾರೆ.ಹೀಗಾಗಿ ಅರ್ಜುನ್ ತನಗಿಂತ ಹತ್ತು ವರ್ಷವಯಸ್ಸಿನಲ್ಲಿ ದೊಡ್ಡ ನಟಿ ಮಲೈಕಾ ಅವರನ್ನು ಮದುವೆಯಾಗಲು ಮುಂದಾಗಿದ್ದಾರೆ.
ಮುಂದಿನ ವರ್ಷ ಮದುವೆಯಾಗಲು ನಿರ್ಧರಿಸಿದ್ದೇವೆ.ಇನ್ನೂ ದಿನಾಂಕ ನಿಗಧಿ ಮಾಡಿಲ್ಲ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿಯೇ ಮದುವೆಯಾಗುವುದಾಗಿ ಅರ್ಜುನ್ ಮತ್ತು ಮಲೈಕಾ ಹೇಳಿಕೊಂಡಿದ್ದಾರೆ.
ಹಾಗೆ ನೋಡಿದರೆ ನಟಿಯರು ತನಗಿಂತ ಕಿರಿಯ ವಯಸ್ಸಿನ ನಟರನ್ನು ಮದುವೆಯಾಗುವುದು ಬಾಲಿವುಡ್‌ನಲ್ಲಿ ಹೊಸದೇನು ಅಲ್ಲ.
ಅರ್ಜುನ್ ಕಾರಣ
ಮಲೈಕಾ ಅರೋರಾ ಜೊತೆಗೆ ಹದಿನೇಳು ವರ್ಷದ ಮದುವೆಯ ಬಂಧನ ಮುರಿದು ಬೀಳಲು ನಟ ಅರ್ಜುನ್ ಕಪೂರ್ ಕಾರಣ. ಆತ ತನ್ನ ಹೆಂಡತಿಯ ಜೊತೆ ಸುತ್ತಾಟ ಮಾಡುತ್ತಿದ್ದ ವಿಷಯ ಗೊತ್ತಿತ್ತು. ಅನೇಕ ಬಾರಿ ಪತ್ನಿಗೆ ಹೇಳಿದರೂ ಕೇಳಲಿಲ್ಲ. ಹೀಗಾಗಿ ಸಮ್ಮತಿಯ ಮೇರೆಗೆ ವಿಚ್ಚೇಧನ ಪಡೆದಿದದಾಗಿ ಅರ್ಬಾಜ್ ಖಾನ್ ಹೇಳಿಕೊಂಡಿದ್ದಾರೆ.

Leave a Comment