ತಾರಾನಾಥ ಶಿಕ್ಷಣ ಸಂಸ್ಥೆ : ಶತಮಾನೋತ್ಸವ ಸಂಭ್ರಮ

ಸಾಕ್ಷರತೆಗಾಗಿ ಓಟ : ಅದ್ಧೂರಿ ಆರಂಭ
ರಾಯಚೂರು.ಜೂ.12- ಈ ಭಾಗದ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡಿದರೇ, ಇಲ್ಲಿಯ ವಿದ್ಯಾರ್ಥಿಗಳು ದೂರದ ಮಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಇಲ್ಲಿಯ ವಿದ್ಯಾರ್ಥಿಗಳು ಹೋಗದಂತೆ ತಡೆಯಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಅವರು ಹೇಳಿದರು.
ಅವರಿಂದು ಮುಂಜಾನೆ ಎಲ್‌ವಿಡಿ ಕಾಲೇಜಿನ ಆವರಣದಲ್ಲಿ ಪುರುಷರ 6.5 ಕಿ.ಮೀ. ದೂರದ ಮ್ಯಾರಥಾನ್ ಓಟ ಉದ್ಘಾಟಿಸಿ, ಮಾತನಾಡಿದರು. ಈ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ತಾರಾನಾಥ ಶಿಕ್ಷಣ ಸಂಸ್ಥೆಗೆ 100 ವರ್ಷ ಇತಿಹಾಸವಿದೆ. ಇಲ್ಲಿಯೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಜನೆ ಮಾಡುವಂತೆ ಸೂಕ್ತ ಮಾರ್ಗದರ್ಶನಕ್ಕಾಗಿ ಶಿಕ್ಷಣ ಸಂಸ್ಥೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೇ, ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ಶಿಕ್ಷಣ ಸಂಸ್ಥೆ ಗಮನ ಹರಿಸಬೇಕು. ಗುಣಮಟ್ಟದ ಶಿಕ್ಷಣ ಇಲ್ಲಿಯೂ ದೊರೆಯುತ್ತದೆ ಎನ್ನುವುದು ಪಾಲಕರು, ವಿದ್ಯಾರ್ಥಿಗಳಿಗೆ ಮನವರಿಕೆಯಾಗಬೇಕೆಂದರು.
ನಂತರ ವೇದಿಕೆಯ ಮೇಲೆ ಉಪಸ್ಥಿತರಿದ್ದ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ಇವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸನ್ಮಾನಿಸಿದರು.
@12bc = ಎಸ್ಎಸ್ಆರ್‌ಜಿ ಕಾಲೇಜಿನಲ್ಲಿ ಮಹಿಳೆಯರಿಗಾಗಿ ಮ್ಯಾರಥಾನ್
ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನಿಂದ 3.5 ಕಿ.ಮೀ. ದೂರದ ಮಹಿಳೆಯರ ಮ್ಯಾರಥಾನ್ ಓಟಕ್ಕೆ ಭಾರತೀಯ ವಾಯು ಪಡೆ ಮುಖ್ಯಸ್ಥರಾದ ಕು.ಅಶ್ವಿನಿ ಪಾಟೀಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಕ್ರೀಡಾ ಚಟುವಟಿಕೆ ಮಾನಸೀಕ, ದೈಹಿಕ ಉತ್ತಮ ಆರೋಗ್ಯಕ್ಕೆ ನೆರವಾಗಲಿದೆಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ, ಆರ್.ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸಪ್ಪ ತಿಪ್ಪಾರೆಡ್ಡಿ, ಅಂಬಾಪತಿ, ಪುರುಷೋತ್ತಮ, ಪವನ್ ಕುಮಾರ ಸುಖಾಣಿ, ಕೆ.ಶಾಂತಪ್ಪ, ಜಿ.ಸುರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment