ತಾರಾನಾಥ ಶಿಕ್ಷಣ ಸಂಸ್ಥೆ ಶತಮಾನೋತ್ಸವ

ಎಲ್ಲಾ ಬಹುಮಾನ ಹೊರ ಜಿಲ್ಲೆಯ ಸ್ಪರ್ಧಾರ್ತಿಗಳಿಗೆ
ರಾಯಚೂರು.ಜೂ.12- ತಾರಾನಾಥ ಶಿಕ್ಷಣ ಸಂಸ್ಥೆ, ಹಮ್‌ದರ್ದ್ ಶಾಲೆಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಆಯೋಜಿಸಿದ್ದ ಪ್ರತ್ಯೇಕ ಮ್ಯಾರಥಾನ್ ಓಟದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ದಾವಣೆಗೆರೆ ಕ್ರೀಡಾಪಟು ಎಲ್ಲಾ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.
ಎಲ್‌ವಿಡಿ ಕಾಲೇಜಿನಿಂದ ಪುರುಷರಿಗಾಗಿ ಮ್ಯಾರಥಾನ್ 6.5 ಕಿ.ಮೀ. ಓಟ ಆಯೋಜಿಸಲಾಗಿತ್ತು. ಈ ಓಟದಲ್ಲಿ ಸಂದೀಪ್ ತಂದೆ ರವಿಕುಮಾರ ಮಂಗಳೂರು ಇವರು ಪ್ರಥಮ ಸ್ಥಾನ ಗಳಿಸುವ ಮೂಲಕ ಪ್ರಥಮ ಬಹುಮಾನ 25 ಸಾವಿರ ರೂ. ನಗದು ತಮ್ಮದಾಗಿಸಿಕೊಂಡಿದ್ದಾರೆ. ದ್ವಿತೀಯ ಬಹುಮಾನ ದ್ವಿತೀಯ ಸ್ಥಾನದಲ್ಲಿ ಶಿವಾನಂದ ಬೆಳಗಾವಿ ಇವರು ಓಡುವ ಮೂಲಕ 15 ಸಾವಿರ ರೂ. ಬಹುಮಾನದ ಮೊತ್ತವನ್ನು ಬಾಚಿಕೊಂಡಿದ್ದಾರೆ. ಉಡುಪಿ ಮೂಲದ ಅನಿಲ್ ಕುಮಾರ ತಂದೆ ಚಂದ್ರ ಪ್ರಚಾರ ಇವರು ಮೂರನೇ ಸ್ಥಾನದ 10 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಮಹಿಳೆಯರಿಗಾಗಿ ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನಿಂದ ನಡೆದ ಮ್ಯಾರಥಾನ್ ಓಟದಲ್ಲಿ ಬೆಂಗಳೂರು ಮೂಲದ ಮಲ್ಲೇಶ್ವರಿ ರಾಠೋಡ್ ಅವರು 3.5 ಕಿ.ಮೀ. ದೂರ ಕ್ರಮಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪ್ರಥಮ ಸ್ಥಾನದ 15 ಸಾವಿರ ಮೊತ್ತದ ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ಅಕ್ಷತಾ ಇವರು ಎರಡನೇ ಸ್ಥಾನ ಪಡೆಯುವ ಮೂಲಕ 10 ಸಾವಿರ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಉಷಾ ಆರ್. ಅವರು ಮೂರನೇ ಸ್ಥಾನ ಪಡೆಯುವ ಮೂಲಕ 7500 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರು ಮತ್ತು ಮಹಿಳೆಯರ ಮ್ಯಾರಥಾನ್ ಓಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಕ್ರೀಡಾಪಟು ಆಗಮಿಸಿದ್ದರು. ಅಲ್ಲದೇ, ಹಳೆ ವಿದ್ಯಾರ್ಥಿಗಳು, ತಾರಾನಾಥ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು. ಅತ್ಯಂತ ಉತ್ಸಾಹದೊಂದಿಗೆ ಜನರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು.
ತಾರಾನಾಥ ಶಿಕ್ಷಣ ಸಂಸ್ಥೆಯಿಂದ ಎಲ್ಲಾ ಕ್ರೀಡಾ ಸ್ಪರ್ಧಾರ್ತಿಗಳಿಗೆ ಟಿ ಶರ್ಟ್ ನೀಡಲಾಗಿತ್ತು. ದಾರಿಯುದ್ಧಕ್ಕೂ ಸಂಚಾರಿ ಪೊಲೀಸರು ಮ್ಯಾರಥಾನ್‌ಗೆ ಪೂರಕವಾಗಿ ಸಂಚಾರದ ವ್ಯವಸ್ಥೆ ನಿಯಂತ್ರಿಸಿದರು. ತಾರಾನಾಥ ಶಿಕ್ಷಣ ಸಂಸ್ಥೆಯ ಮ್ಯಾರಥಾನ್ ಈ ಓಟ ಸಾಕ್ಷರತೆಗಾಗಿ ಎನ್ನುವ ಆಶಯದೊಂದಿಗೆ ನಡೆದಿರುವುದು ಅತ್ಯಂತ ಸಾರ್ಥಕವಾಗಿತ್ತು. ಸಾಕ್ಷರತೆಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯೆಂದು ಗುರುತಿಸಿಕೊಂಡಿದ್ದ ರಾಯಚೂರು ಜಿಲ್ಲೆಯಲ್ಲಿ 1920 ರಲ್ಲಿ ಹಮ್‌ದರ್ದ್ ಶಾಲೆ ಸ್ಥಾಪಿಸುವ ಮೂಲಕ ತಾರಾನಾಥ ಅವರು ಈ ಭಾಗದಲ್ಲಿ ಶಿಕ್ಷಣಕ್ಕೆ ಶೈಕ್ಷಣಿಕ ಚಟುವಟಿಕೆಗಳಿಗೂ ಶ್ರೀಕಾರ ಹಾಕಿದ್ದರು.
ಈ ಒಂದು ಆಂದೋಲನಕ್ಕೆ ಒಂದು ಶತಮಾನದ ಸಂದರ್ಭದಲ್ಲಿಯೂ ತಾರಾನಾಥ ಶಿಕ್ಷಣ ಸಂಸ್ಥೆ ತನ್ನ ಆಶಯ ಮುಂದಿಟ್ಟುಕೊಂಡು ಈ ಮ್ಯಾರಥಾನ್ ಆಯೋಜಿಸಿರುವುದು ವಿಶೇಷವಾಗಿತ್ತು.

Leave a Comment