ತಾರಾನಾಥ ಕಪ್ ಕ್ರಿಕೆಟ್ ಪಂದ್ಯಾವಳಿಗೆ  ಸೋಮಶೇಖರರೆಡ್ಡಿ ಚಾಲನೆ

ಬಳ್ಳಾರಿ, ಸೆ.8: ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಮೈದಾನದಲ್ಲಿ ಆಸ್ಪತ್ರೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಆಯುರ್ವೇದ ಕಾಲೇಜುಗಳ ಸಿಬ್ಬಂದಿಯ ತಾರಾನಾಥ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಇಂದು ನಗರ ಶಾಸಕ ಗಾಲಿಸೋಮಶೇಖರರೆಡ್ಡಿ ಬ್ಯಾಟ್ ಮಾಡುವ ಮೂಲಕ ನಾಕೌಟ್ ಹಂತದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಬೆಂಗಳೂರಿನ ಎರಡು, ಗದಗ, ಮೈಸೂರು, ಹುಬ್ಬಳ್ಳಿ ಆಯುಷ್ ನಿರ್ದೇಶನಾಲಯ ಮತ್ತು ಬಳ್ಳಾರಿ ಸೇರಿ 7 ತಂಡಗಳು ಭಾಗವಹಿಸಿವೆ.

ನಾಕೌಟ್ ಹಂತದ ಪಂದ್ಯಗಳು 10 ಓವರ್ ಗಳಾಗಿದ್ದು ಸೆಮಿ ಫೈನಲ್ ಮತ್ತು ಫೈನಲ್ 12 ಓವರ್ ಗಳಿಂದ ಕೂಡಿವೆ. ಕಪ್ ವಿನ್ನರ್ ಗೆ 10ಸಾವಿರ ರನ್ನರ್ ಗೆ 5 ಸಾವಿರ ನಗದು ಬಹುಮಾನವಿದೆ.

ಇಂದು ಬೆಳಿಗ್ಗೆ ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಮೂಲಕ ಕಪನ್ನು ನಗರದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಮಾತನಾಡಿದ ಶಾಸಕ ಸೋಮಶೇಖರರೆಡ್ಡಿ, ಬಳ್ಳಾರಿಯ ಆಯುರ್ವೇದ ಕಾಲೇಜು ರಾಜ್ಯದಲ್ಲಿಯೇ ಖ್ಯಾತಿ ಪಡೆದಿದೆ. ಬಳ್ಳಾರಿ ಅಂದರೆ ಅಷ್ಟೆ ರಾಜ್ಯದಲ್ಲಿ ಹೆಸರು ಮಾಡಿದ್ದು ಈ ಕಾಲೇಜಿನ ಅಭಿವೃದ್ಧಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕೈಗೊಂಡಿತ್ತು. ಅದಕ್ಕೆ ಕಾಲೇಜಿನ ಪ್ರಾಧ್ಯಾಪಕ ರಾಜಶೇಖರ್ ಗಾಣಿಗೇರ್ ಅವರ ಒತ್ತಡವೂ ಕಾರಣವಾಗಿತ್ತು. ಇನ್ನುಳಿದ ಅಭಿವೃದ್ಧಿಗೆ ಜಿಲ್ಲಾ ಖನಿಜ ಅಭಿವೃದ್ಧಿ ನಿಗಮದಿಂದ ಅನುದಾನ ನೀಡಲಿದೆಂದು ತಿಳಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೈಯದ್ ಅತ್ಹರ್ ಫಾತಿಮಾ, ಕ್ರೀಡಾಕೂಟದಲ್ಲಿ ಪಾಲ್ಗೊಂಡವರು ಪಂದ್ಯಾವಳಿಯ ಸಿಹಿ ನೆನಪುಗಳನ್ನು ತೆಗೆದುಕೊಂಡು ಹೋಗಬೇಕೆಂದು ಹಾರೈಸಿದರು.

ವೇದಿಕೆಯಲ್ಲಿ ಆಯುಷ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಬಸವರಾಜಯ್ಯ, ಡಾ.ಅಹಲ್ಯ, ಗದಗಿನ ಡಾ.ಎಂ.ಸಿ. ಪಾಟೀಲ್ ಹುಬ್ಬಳ್ಳಿಯ ಡಾ.ಸಣ್ಣಕಲ್ಲು, ಶಿವಮೊಗ್ಗದ ಡಾ.ದೊಡ್ಡಯ್ಯ, ಡಾ.ರಾಜಶೇಖರ್, ಡಾ.ಮಾಧವ ದಿಗ್ಗಾವಿ, ಮೊದಲಾದವರು ಇದ್ದರು.

Leave a Comment