ತಾಯಿ ಹಾಲು ಮಗುವಿಗೆ ರಾಮಬಾಣ ಇದ್ದಂತೆ

ಸಿರಾ, ಆ. ೪- ಮಗುವಿಗೆ ಧೈರ್ಯ ಹಾಗೂ ಬುದ್ದಿ ಚುರಕಿಗೆ ತಾಯಿ ಎದೆ ಹಾಲು ಅಮೃತ ಇದ್ದಂತೆ. ಅಪೌಷ್ಠಿಕತೆಯಿಂದ ಶಿಶು ಮರಣ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ಶಕ್ತಿ ತಾಯಿ ಹಾಲು ರಾಮಬಾಣವಿದ್ದಂತೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಧಿಕಾರಿ ಡಾ.ಕೇಶವರಾಜು ಹೇಳಿದರು.

ತಾಲ್ಲೂಕಿನ ದ್ವಾರನಕುಂಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಗರ್ಭೀಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಸಂಪ್ರದಾಯ ಉಳಿಸಿ ಬೆಳಸುವ ನಿಟ್ಟಿನಲ್ಲಿ ತವರು ಮನೆ ನೀಡುವಂತ ಸೀಮಂತ ಕಾರ್ಯಕ್ರಮ ಅಸ್ಪತ್ರೆ ಮಾಡುತ್ತಿರುವುದು ಮೆಚ್ಚುವಂತದ್ದು. ಮಡಿಲು ತುಂಬಿಸಿಕೊಂಡಂತ ಗರ್ಭಿಣಿಯರ ಮನೋಲ್ಲಾಸ ಹೆಚ್ಚಾಗಲಿದ್ದು ಇದರಿಂದ ಸ್ತನ್ಯದಲ್ಲಿ ಹಾಲಿನ ಪ್ರಮಾಣ ಹೆಚ್ಚಿಸುತ್ತದೆ. ತಾಯಿತನ ಎಂಬುದು ದೇವರು ಹೆಣ್ಣಿಗೆ ಬಳುವಳಿಯಾಗಿ ನೀಡಿದ ಭಾಗ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹುಲಿಕುಂಟೆ ಜಿ.ಪಂ. ಸದಸ್ಯ ಎಸ್. ರಾಮಕೃಷ್ಣ ಮಾತನಾಡಿ, ತಾಯಿಗಿಂತ ಐಶ್ವರ್ಯ ಮತ್ತೊಂದಿಲ್ಲ. ತಾಯಿ ಬೆಲೆ ಕಟ್ಟಲಾಗದ ಸಂಪತ್ತು. ಇಂತಹ ಭಾಗ್ಯವನ್ನು ಪಡೆದ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ ಈ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವಂತೆ ನೋಡಿಕೊಳ್ಳ ಬೇಕು ಎಂದರು.

ಗರ್ಭೀಣಿಯರಿಗೆ ಮಡಿಲು ತುಂಬಿಸಿ ಮಾತನಾಡಿದ ಖ್ಯಾತ ಪ್ರಸೂತಿ ತಜ್ಞೆ ಡಾ.ಮಾಲಿನಿ, ಗರ್ಭೀಣಿಯರು ಆರಂಭಿಕ ಹಂತದಲ್ಲಿ ತಪಾಸಣೆಗೆ ಒಳಪಡುವುದರಿಂದ ತಾಯಿ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಯ ಮಾಹಿತಿ ತಿಳಿಯಲಿದೆ. ಸರ್ಕಾರಿ ಅಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇದ್ದು, ಗರ್ಭೀಣಿಯರು ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸಬಾರದು. ತರಕಾರಿ ಸೇರಿದಂತೆ ಉತ್ತಮ ಆಹಾರ ಸೇವೆನೆ ಮಾಡಿದರೆ ಆರೋಗ್ಯವಂತ ಮಗು ಹುಟ್ಟಲಿದೆ. ತಾಯಿಯ ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ 6 ತಿಂಗಳುಗಳ ಕಾಲ ತಾಯಿ ಎದೆ ಹಾಲು ಮಗುವಿಗೆ ಕುಡಿಸಿದರೆ ಮಗು ಆರೋಗ್ಯವಾಗಿರಲಿದೆ ಎಂದರು.

ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಮಾತನಾಡಿ, ತಾಯಿ ತನವೇ ಒಂದು ಭಾಗ್ಯ. ಇಂತಹ ಗರ್ಭೀಣಿಯರ ಸಂತೋಷ ಇಮ್ಮಡಿಗೊಳಿಸಿ ಸಾಮೂಹಿಕ ಸೀಮಂತ ಮಾಡಿಸುತ್ತಿರುವ ಡಾ.ತಿಮ್ಮರಾಜು ಸೇವೆ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ವಸುಧಾ ತಿಪ್ಪೇಶ್‍ಗೌಡ, ಗ್ರಾ.ಪಂ. ಅಧ್ಯಕ್ಷರಾದ ಚಂದ್ರಪ್ಪ, ನರಸಿಂಹಯ್ಯ, ತಾ.ಪಂ. ಸದಸ್ಯ ಪಾಂಡುರಂಗಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ ಕೃಷ್ಣಮೂರ್ತಿ, ಸದಸ್ಯರಾದ ಮಮತ, ಭಾಗ್ಯಮ್ಮ, ವೈದ್ಯಾಧಿಕಾರಿ ಡಾ.ತಿಮ್ಮರಾಜು, ಮುಖ್ಯ ಶಿಕ್ಷಕ ಬೊಮ್ಮಯ್ಯ, ತಿಮ್ಮರಾಜು, ಕಿಶೋರ್ ಅಹಮದ್,ನಾಗರಾಜು, ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Comment