ತಾಯಿ, ಮಗಳ ಮೇಲೆ ಅತ್ಯಾಚಾರ, ದೇವಮಾನವನ ಸೆರೆ

ನವದೆಹಲಿ, ಸೆ. ೧೪- ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸ್ವಘೋಷಿತ ದೇವಮಾನವ ಆಶು ಮಹಾರಾಜ ಎಂಬುವನನ್ನು ದೆಹಲಿ ಪೊಲೀಸರು ದೆಹಲಿಯಲ್ಲಿರುವ ಅವನ ಆಶ್ರಮದಲ್ಲಿ ಬಂಧಿಸಿದ್ದಾರೆ.

ಆಶು ಮಹಾರಾಜನ ಪೂರ್ವಾಶ್ರಮದ ಹೆಸರು ಆಸೀಫ್ ಖಾನ್ ಎಂದಾಗಿದ್ದು, ಅವನ ಮಗ ಸಮರ್ ಖಾನ್ ಎಂಬುವನನ್ನು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ರಾಜೀವ್ ರಂಜನ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತರನ್ನು ಹಲವಾರು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ.

2008 ರಿಂದ 2013ರವರೆಗೆ ಆಶು ಮಹರಾಜ, ಅವನ ಗೆಳೆಯರು ಮತ್ತು ಮಗ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವನು ನನ್ನ ಮಗಳನ್ನು ಕರೆತರುವಂತೆ ಪುಸಲಾಯಿಸಿ ಅವಳ ಮೇಲೂ ಅತ್ಯಾಚಾರ ಎಸಗಿದ ಎಂದು ಮಹಿಳೆ, ಪೊಲೀಸರಿಗೆ ದೂರಿತ್ತಿದ್ದಾಳೆ.

Leave a Comment