ತಾಯಿಯ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್

ಮೈಸೂರು. ಸೆ.11: ಇಂದು ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದ್ದಾರೆ.
ಮೆಟ್ಟಿಲುಗಳ ಮೂಲಕ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಪವರ್ ಸ್ಟಾರ್ ಪುನೀತ್ ತಾಯಿ ಚಾಮುಂಡೇಶ್ವರಿಯ ದೇವಸ್ಥಾನಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ. ‘ಯುವರತ್ನ’ ಚಿತ್ರದ ಚಿತ್ರೀಕರಣಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೈಸೂರಿನಲ್ಲಿದ್ದು, ಬರಿಗಾಲಿನಲ್ಲೇ ಚಾಮುಂಡಿ ಬೆಟ್ಟ ಹತ್ತಿ ಗಮನ ಸೆಳೆದಿದ್ದಾರೆ. ಈ ಸಂದರ್ಭ ಕೆಲವು ಬೆಂಬಲಿಗರು ಅವರ ಜೊತೆಗಿದ್ದರು.

Leave a Comment