ತಾಯಂದಿರೆ ನಾಗರೀಕತೆಯ ನೈಜ ನಿರ್ಮಾಪಕರು-ಪ್ರಾ.ವಿಜಯಾ ಗುತ್ತಲ

ಧಾರವಾಡ ಫೆ.20- ತಾಯಿ ಜೀವಂತ ದೇವತೆ. ಕ್ಷಮೆಗೆ ಮತ್ತೊಂದು ಹೆಸರೇ ತಾಯಿ. ತಾಯಿಯಂದಿರೇ ನಾಗರೀಕತೆಯ ನೈಜ ನಿರ್ಮಾಪಕರುಎಂದು ನಿವೃತ್ತ ಪ್ರಾಧ್ಯಾಪಕಿಡಾ. ವಿಜಯಾಗುತ್ತಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀಮತಿ ಕುಸುಮ ವಿಠ್ಠಲರಾವ್‍ದೇಶಪಾಂಡೆ ಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ‘ಭಾರತೀಯ ಮತ್ತು ಪಾಶ್ಚಿಮಾತ್ಯ ತಾಯಿ: ಒಂದು ವಿಶ್ಲೇಷಣೆ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾಅವರು ಮಾತನಾಡುತ್ತಿದ್ದರು.
ದೇವರಿಗೆಎಲ್ಲಾಕಡೆಇರಲು ಸಾಧ್ಯವಾಗದ್ದಕ್ಕೆ ಅವನು ತಾಯಿಯನ್ನು ಸೃಷ್ಟಿಸಿದ ಒಬ್ಬಆದರ್ಶತಾಯಿಯು ನೂರುಜನ ಶಿಕ್ಷಕರಿಗಿಂತಲೂ ಶ್ರೇಷ್ಠಳು. ಜಗತ್ತಿನಲ್ಲಿಕೆಟ್ಟ ಮಕ್ಕಳಿರಬಹುದು, ಕೆಟ್ಟತಾಯಂದಿರುಇರಲು ಸಾಧ್ಯವೇಇಲ್ಲಾ. ತಾಯಿಯು ಮಕ್ಕಳ ಒಳ್ಳೆ ಭವಿಷ್ಯ ನಿರ್ಮಿಸುವ ಶಿಲ್ಪಿ.ತಾಯಿ ಭೂಮಿಗಿಂತಲೂ ದೊಡ್ಡವಳು.ಜನನಿ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಆರ್ಯೋಕ್ತಿ ಸತ್ಯವಾಗಿದೆ. ತಾಯಿಇಲ್ಲದಾ ಮನೆ ದೇವರಿಲ್ಲದಾಗುಡಿಎರಡೂಒಂದೇ. ತಾಯಿ ನಿಜ ಅರ್ಥದಲ್ಲಿ ಮಕ್ಕಳ ಪಾಲಿನ ಅಪರಂಜಿ.ತಾಯಿಯಋಣತೀರಿಸುವುದುಅಸಾಧ್ಯ ಎಂದರು.
ಹಿರಿಯ ಲೇಖಕಿ ಡಾ.ಮಂದಾಕಿನಿ ಪುರೋಹಿತಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರೀಕದಾರ್ಶನಿಕನಾದ ಪ್ಲೇಟೊನೂ ಸಹ ‘ತಾಯಿಗಿಂತ ಬಂಧುವಿಲ್ಲಾಉಪ್ಪಿಗಿಂತರುಚಿಯಿಲ್ಲ’ ಎಂಬ ಮಾತುಜಾಗತಿಕ ಸತ್ಯವಾಗಿದೆ.ತಾಯಿತ್ಯಾಗ, ಸಹನೆಯ ಪ್ರತಿರೂಪ. ಅವರ ಹೃದಯಕ್ಕೆ ಮಕ್ಕಳನ್ನು ಪ್ರೀತಿಸುವುದು ಮಾತ್ರಗೊತ್ತು. ಮಕ್ಕಳೇ ಅವಳಿಗೆ ಪ್ರಪಂಚ.ಅಂತಹ ಮಹಾಮಾತೆಯನ್ನು ನಾವು ನಿರ್ಲಕ್ಷಿಸಬಾರದು.14ನೇ ಶತಮಾನದ ಲಕ್ಷ್ಮೀಧರಮಾತ್ಯತನ್ನ ಲೋಕೋಪಯೋಗಿಕಾರ್ಯದಿಂದ ಇಂದಿಗೂ ಜನಮಾನಸದಲ್ಲಿ ಉಳಿಯಲು ಕಾರಣ ಅವನ ತಾಯಿ ಬಾಲ್ಯದಲ್ಲಿ ನೀಡಿದ ಸಂಸ್ಕಾರದಿಂದ ಮಾತ್ರಎಂದು ಹೇಳಿದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿಗೆಒಂದು ಮುಖವಾದರೆ ವ್ಯಕ್ತಿತ್ವಕ್ಕೆ ಹಲವು ಮುಖಗಳು.ಕುಸುಮ ತಾಯಿಯವರು ಬಹುಮುಖ ಪ್ರತಿಭಾ ಸಂಪನ್ನರು.ದತ್ತಿಉದ್ದೇಶಇಂತಹ ಬಹುಮುಖಿ ಮಹಿಳೆಯರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವದಾಗಿದೆಎಂದು ಹೇಳಿದರು.
ದತ್ತಿ ದಾನಿಗಳಾದ ಡಾ. ರಾಜನ್‍ದೇಶಪಾಂಡೆಯವರು ಮಾತನಾಡಿ, ತಾಯಿ ಕುಸುಮ ದೇಶಪಾಂಡೆಯವರ ಸರಳತೆ ಹಾಗೂ ಸಹೃದಯತೆಯ ಸಕಾರಮೂರ್ತಿಯಾಗಿದ್ದರು. ತಾಯಿ ನೀಡಿದ ಸಂಸ್ಕಾರದಿಂದತಂದೆಯ ಮಾರ್ಗದರ್ಶನದಿಂದ ವೈದ್ಯ ವೃತ್ತಿಯಲ್ಲಿಕಾರ್ಯಕ್ಷಮತೆ ಪ್ರಾಮಾಣಿಕತೆಯಿಂದ ನಾನು ಕಾರ್ಯನಿರ್ವಹಿಸಲು ಸಾಧ್ಯವಾಯಿತೆಂದು ಸ್ಮರಿಸಿದರು.
ಶ್ರೇಷ್ಠತೆಯ ತಾಯಿಗೌರವ ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಭಾರತಿಕಟ್ಟಿ ಮಾತನಾಡಿ, ಮಗುವಿನ ಭವಿಷ್ಯವುತಾಯಂದಿರಕರ್ತವ್ಯ ಅವಲಂಬಿಸಿದ್ದು, ನನ್ನ ಪ್ರಾಮಾಣಿಕಕರ್ತವ್ಯದಿಂದ ಮಗಳಾದ ಸಂಗೀತಾಕಟ್ಟಿಅಂತಾರಾಷ್ಟ್ರೀಯಖ್ಯಾತಿ ಗಳಿಸಲು ಸಾಧ್ಯವಾಯಿತು. ಕ.ವಿ.ವ. ಸಂಘವು ನನ್ನ ಮಗಳಾದ ಸಂಗೀತಾಕಟ್ಟಿಗೆ ನಾಲ್ಕನೇಯ ವರ್ಷದಲ್ಲಿ ವೇದಿಕೆ ಒದಗಿಸಿದ್ದು ಶ್ಲಾಘನೀಯಎಂದರು.

Leave a Comment