ತಾಪಮಾನ ಜಾಗೃತಿಗೆ ಸಹಾಯ ಹಸ್ತ ಚಾಚಿದ ನಟಿ ಫ್ರೀದಾಪಿಂಟೊ

ಜಾಗತಿಕ ತಾಪಮಾನ ವಿಶ್ವದ ಪ್ರತಿಯೊಂದು ರಾಷ್ಟ್ರಕ್ಕೂ ಸವಾಲಾಗಿ ಪರಿಣಮಿಸಿದೆ. ಅರಣ್ಯ ನಾಶದಿಂದ ಪರಿಸರದ ಮೇಲೆ ಮಾನವ ನಡೆಸುತ್ತಿರುವ ದೌರ್ಜನ್ಯಿದಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಅಷ್ಟೇ ಅಲ್ಲ ದೇಶದ ಅತ್ಯಂತ ಸುಂದರ ಪ್ರದೇಶವಾದ ಹಿಮಾಲಯದಲ್ಲಿ ಅರಣ್ಯ ನಾಶದಿಂದ ಅದರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಈಗ ಜಾಗತಿಕ ತಾಪಮಾನ ವಿರುದ್ಧ  ಹೋರಾಟ ನಡೆಸಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಈಗ ಖ್ಯಾತ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಫ್ರೀಧಾ ಪಿಂಟೊ ಕೈಜೋಡಿಸಿರುವುದು ವಿಶೇಷ.

vaividya-freida-pinto1ಬೆಲೆ ಏರಿಕೆಯಂತೆಯೇ ತಾಪಮಾನವೂ ಹೆಚ್ಚಳವಾಗುತ್ತಿರುವುದು ವಿಜ್ಞಾನಿಗಳಿಗೂ ಸವಲಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆಸಿ ಪರಿಹಾರ ಹುಡುಕುತ್ತಿದ್ದರೂ ಅದಿನ್ನು ಸಾಧ್ಯವಾಗಿಲ್ಲ. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಹಸಿರು ಮನೆ ಪರಿಣಾಮ, ಓಜೆನ್ ಒಂದಾಗುವಿಕೆ, ಸೂರ್ಯನ ಅತಿ ನೇರಳೆಯ ಕಿರಣಗಳು, ಸೂರ್ಯನಿಂದ ಹೊರ ಸೂಸುವ ಅತಿಯಾದ ಅನಿಲಗಳು ತಾಪವನ್ನು ಹಿಂದುರಿಗಿಸದೆ  ಭೂಮಿ ಹೀರಿಕೊಳ್ಳುತ್ತಿದೆ ಇದರಿಂದ ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಆತಂಕ ತಂದೊಡ್ದಿದೆ.

ಈ ಅಂಶಗಳನ್ನು ಗಮನಿಸರುವ ನಟಿ ಫ್ರೀದಾ ಪಿಂಟೊ ’ವೈಲ್ಡ್ ಈಡೆನ್ಸ್ ಸೌಥ್ ಏಷ್ಯಾದ ಯೋಜನೆಯ ರಾಯಭಾರಿಯಾಗಿ ಸಾಕ್ಷ್ಯ ಚಿತ್ರಗಳ ಮೂರನೇ ಸರಣಿಯಲ್ಲಿ ಪರಿಸರ ಬದಲಾವಣೆಯ ಸಮಸ್ಯೆಗಳತ್ತ ಬೆಳಕು ಚೆಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸುರಕ್ಷಿತ ಹಾಗೂ ಸ್ವಚ್ಛ ಇಂಧನ ಶಕ್ತಿಯ ಉತ್ಪಾದಕ ರೋಸ್ಟಂ ಸ್ಟೇಟ್ ಅಣುಶಕ್ತಿ ಇಂಧನ ನಿಗಮ ಈ ಸಾಕ್ಚಯ ಚಿತ್ರವನ್ನು ನಿರ್ಮಾಣ ಮಾಡಿದೆ. ಭಾರತ ಮತ್ತು ನೆರೆಯ ಬಾಂಗ್ಲಾ ದೇಶದ ನೈಸರ್ಗಿಕ ಸಂಪತ್ತಿಗೆ ಆದ್ಯತೆ ನೀಡಿರುವ ಈ ಸಾಕ್ಷ್ಯಾಚಿತ್ರದಲ್ಲಿ ಪಶ್ಚಿಮಘಟ್ಟ, ತಮಿಳುನಾಡು ಮತ್ತು ಸುಂದರ ಬನ್‌ನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಜಾಗತಿಕ ತಾಪಮಾನದ ಹೆಚ್ಚಳದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯ ಬಗ್ಗೆ ಚಿತ್ರೀಕರಿಸಲಾಗಿದೆ.

ಈ ಸಾಕ್ಷ್ಯಾಚಿತ್ರದ ಮೂಲಕ ನಮ್ಮ ದೇಶದ ನೈಸರ್ಗಿಕ ಸಂಪತ್ತು ಅಪರೂಪದ ವನ್ಯಜೀವಿಗಳು, ವಿಶಿಷ್ಟ ಪ್ರಾಣಿಗಳು ಹಾಗೂ ಅರಣ್ಯ ಪ್ರದೇಶಗಳ ನಡುವಣ ಸಂಪರ್ಕ ಸಾಧಿಸಬಹುದಾಗಿದೆ. ವಿಶಿಷ್ಟ, ವೈವಿಧ್ಯಮಯ ಜೀವಿಗಳನ್ನು ಪರಿಚಯಿಸಿರುವುದು ಸಾಕ್ಷ್ಯ ಚಿತ್ರದ ಹೈಲೈಟ್ಸ್. ಇದರ ಜತೆಗೆ ಪ್ರಕೃತಿಯ ಸೌಂದರ್ಯ ಉಳಿಸಲು ಅನುಸರಿಸಬೇಕಾದ ಮಾರ್ಗೊಪಾಯಗಳು, ತಾಪಮಾನದಿಂದ ಎದುರಾಗುವ ಆತಂಕಗಳ ಬಗ್ಗೆ ನಿಖರ ವಿವರಣೆಗಳನ್ನು  ಒದಗಿಸಲಾಗಿದೆ.

vaividya-freida-pinto3

ವೈಲ್ಡ್ ಈಡೆನ್ಸ್ ರಾಯಭಾರಿಯಾಗಿ ಮಾನವ, ವನ್ಯಜೀವಿ, ಜೀವ ವೈವಿಧ್ಯತೆ ಕುರಿತ ವಿಷಯಗಳನ್ನು  ತಿಳಿದುಕೊಂಡಿದ್ದೇನೆ. ಇಂಗಾಲ ಹೊರ ಸೂಸುತ್ತಿರುವುದರಿಂದ ಪರಿಸರದ ಮೇಲೆ ಅಪಾರ ಹಾನಿಯಾಗುತ್ತಿದೆ. ಸ್ವಚ್ಛ ಮತ್ತು ಹಸಿರು ಶಕ್ತಿಯ ಪರಿಹಾರ ಒದಗಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಫ್ರೀಧಾ ಪಿಂಟೊ. ಜಾಗತಿಕ ಮಟ್ಟದ ಪಾಲುದಾರರ ಜೊತೆಗೆ ವಿಶ್ವದ ಪರಿಸರದ ಸವಾಲುಗಳನ್ನು ಪರಿಹರಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ವಿಶ್ವಸಮುದಾಯಕ್ಕೆ ಸೂಕ್ತ ಹಾಗೂ ಸಮರ್ಪಕ ರೀತಿಯಲ್ಲಿ ಜಾಗೃತಿ ಮೂಡಿಸಲು ಮುಂದಾಗುವುದಾಗಿ ರೋಸ್ಟಂನ ಮತ್ತೊಬ್ಬ ಪ್ರತಿನಿಧಿ ವಡಿಮ್ ಟಿಟೊವ್ ಅನಿಸಿಕೆ ಹಂಚಿಕೊಂಡರು.

ಇಂಗಾಲ ಮತ್ತು ಇಂಧನ ಸ್ವಚ್ಛತೆ ಕಲ್ಪಿಸಿ ಜಾಗತಿಕ ತಾಪಮಾನ ದಲಾಗುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವುದೇ ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಈ ಸಾಕ್ಷ್ಯ ಚಿತ್ರವನ್ನು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಮೂಲಕ ಪ್ರಸಾರ ಮಾಡಲು ಮುಂದಾಗಿದೆ.ತಾಪಮಾನ ಏರಿಕೆಯನ್ನು ತಡೆಗಟ್ಟಲು ರೋಸ್ಟಂನಂತಹ ಸಂಸ್ಥೆಯೊಂದರಿಂ ಮಾತ್ರ ಸಾಧ್ಯವಾಗುವುದಿಲ್ಲ. ಇಡೀ ವಿಶ್ವವೇ ಮುಂದಾಗಬೇಕು. ಪರಿಸರದ ಬಗ್ಗೆ ಕಾಳಜಿವಹಿಸುವುದರ ಜತೆಗೆ ಪ್ಲಾಸ್ಟಿಕ್ ಳಕೆಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ.

Leave a Comment