ತಾಪಮಾನ ಏರಿಕೆಗೆ ಹಿಮಾಲಯ ನೀರ್ಗಲ್ಲು ಕರಗುತ್ತಿದೆ

ಉತ್ತನೂರು ವೆಂಕಟೇಶ್

ಗಂಗಾ -ಸಿಂಧು ನದಿಗಳು ಸೇರಿದಂತೆ ವಿಶ್ವದ ಶೇ. ೧೦ರಷ್ಟು ಪ್ರಮುಖ ನದಿ ವ್ಯವಸ್ಥೆಗಳಿಗೆ ಪ್ರಮುಖ ನೀರಿನ ಮೂಲವಾಗಿರುವ, ಆ ಮೂಲಕ ಕೋಟ್ಯಾಂತರ ಜೀವ ಸಂಕುಲಕ್ಕೆ ಜೀವ ಜಲ ಒದಗಿಸುವ ಹಿಮಾಲಯದ ನೀರ್ಗಲ್ಲುಗಳು ತಾಪಮಾನ ಏರಿಕೆಗೆ ಸಿಕ್ಕಿ ಕ್ರಮೇಣ ಕರುಗುತ್ತಿವೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಕಠ್ಮಂಡು ಮೂಲದ ಅಂತರ ರಾಷ್ಟ್ರೀಯ ಪರ್ವತ ವಲಯದ ನೀರ್ಗಲ್ಲುಗಳ ಕುರಿತ ಕೇಂದ್ರ ತಯಾರಿಸಿರುವ ಈ ವರದಿಯಲ್ಲಿ ಸಂಶೋಧಕರು ಹವಾಮಾನ ನೀತಿ ನಿರೂಪಕರು, ಅನೇಕ ಸಂಘ ಸಂಸ್ಥೆಗಳು, ಲೇಖಕರು ಭಾಗಿಯಾಗಿದ್ದಾರೆ. ಹೀಗಾಗಿ ಈ ವರದಿ ಇಂದಿನ ಹಿಮಾಲಯದ ಹಿಮ ಸಾಗರಗಳ (ಗ್ಲೇಷಿಯಸ್) ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿದೆ.

10vichara1

ತಾಪಮಾನ ಏರಿಕೆಗೆ ಕಾರಣವಾಗಿರುವ ಇಂಗಾಲ ಆಮ್ಲ ಹೊರ ಸೂಸೂವಿಕೆಗೆ ಪ್ರಮಾಣದಲ್ಲಿ ಜಾಗತೀಕವಾಗಿ ಇಳಿಕೆಯಾಗದೇ ಉಂಟಾದ ತಾಪಮಾನ ಏರಿಕೆಯಿಂದ ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿವೆ.

2100 ರ ಒಳಗೆ ಹಿಮಾಲಯದ ಹಿಮ ಬಂಡೆಗಳು ಕರಗಿ ಹೋಗುತ್ತವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹಿಮ ಬಂಡೆಗಳು ಕರಗುವುದರಿಂದ ಆ ಭಾಗದ ಸರೋವರ, ಸಾಗರಗಳಲ್ಲಿ ಭಾರೀ ಪ್ರವಾಹದ ಜೊತೆಗೆ ಬಹುಪಾಲೀನ ಭೂ ಭಾಗವು ನೀರಿನಲ್ಲಿ ಮುಳುಗಿ ಹೋಗುತ್ತದೆ.

ಜೀವ ಸಂಕುಲಕ್ಕೆ ನಿರಂತರ ಆಸರೆಯಾಗಿರುವ ಹಿಮ ಬಂಡೆಗಳು ಕರಗಿ ಹೋದರೆ ನಂತರದಲ್ಲಿ ನೀರಿನ ಜಲ ಕ್ಷಾಮ ದಂತಹ ಭೀಕರ ಸ್ಥಿತಿಗೂ ಕಾರಣವಾಗುತ್ತದೆ.

ತಾಮಪಾನ ಏರಿಕೆಗೆ ಕಾರಣವಾಗಿರುವ ಇಂಗಲಾ ಆಮ್ಲ ಹೊರ ಸೂಸುವಿಕೆ ಹೀಗೆ ಮುಂದುವರೆದರೆ ಹಿಮಾಲಯದ ನೀರ್ಗಲ್ಲು ೨೧೦೦ ವೇಳೆಗೆ ಕರಗಿ ಹೋಗುತ್ತದೆ. ನಂತರದಲ್ಲಿ ಅಲ್ಲಿಯ ನೀರ್ಗಲ್ಲು ವಾತಾವರಣ ಸಂಪೂರ್ಣವಾಗಿ ಮಾಯವಾಗುತ್ತದೆ ಎಂಬುದು ವರದಿಯ ಮುಖ್ಯ ತಿರುಳು.

ಹಿಮಾಲಯದ ನೀರ್ಗಲ್ಲುಗಳು ೭೦ ದಶಲಕ್ಷ ವರ್ಷಗಳ ಹಿಂದೆ ರೂಪಿತ ಗೊಂಡಿವೆ ಎಂದು ಅಂದಾಜಿಸಲಾಗಿದೆ. ವರ್ಷಪೂರ್ತಿ ಕೋಟ್ಯಾಂತರ ಜೀವ ರಾಶಿಗಳಿಗೆ ನೀರಿನ ನಿರಂತರ ಆಶ್ರಯವಾಗಿರುವ ಹಿಮಾಲಯದ ಹಿಮ ನದಿಗಳು ೧೯೭೦ ರಿಂದಲೂ ಕರಗುವಿಕೆಗೆ ಗುರಿಯಾಗಿವೆ. ಆ ಮೂಲಕ ಕ್ರಮೇಣ ಹಿಮಶ್ಚಾದಿತ ಪ್ರದೇಶಗಳು ತೆಳ್ಳಗಾಗುತ್ತ ಬರುತ್ತಿವೆ ಎಂದು ವರದಿಯಲ್ಲಿ ಅಂಕಿ ಸಂಖ್ಯೆಗಳ ಸಮೇತ ಉಲ್ಲೇಖಿಸಲಾಗಿದೆ.

ಹೀಗೆ ಕರಗುವಿಕೆಯಿಂದ ಹಿಮಾಲಯ ಭಾಗದ ಸರೋವರಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದು ಭಾರೀ ಪ್ರವಾಹಗಳಿಗೆ ಕಾರಣವಾಗುತ್ತದೆ. ಇದು ಬರೀ ಹಿಮಾಲಯದ ನೀರ್ಗಲ್ಲುಗಳಿಗೆ ಸೀಮಿತವಾಗಿಲ್ಲ. ಜಗತ್ತಿನ ಪ್ರಮುಖ ನೀರ್ಗಲ್ಲು ಪ್ರದೇಶಗಳ ಕಥೆಯೂ ಇದೆ ಯಾಗಿದೆ.

ವಿಶ್ವದ ನೀರ್ಗಲ್ಲು ಪ್ರದೇಶಗಳು ಕರಗುವಿಕೆಯಿಂದ ಆ ಭಾಗದ ಸರೋವರ, ಸಾಗರಗಳ ನೀರಿನ ಮಟ್ಟ ಘನನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಆ ಮೂಲಕ ಪ್ರವಾಹಗಳ ಜೊತೆಗೆ ಸಾಗರ ವಲಯದ ಭೂ ಭಾಗಗಳೇ ಸಾಗರದಲ್ಲಿ ಮುಳುಗಿ ಹೋಗುತ್ತದೆ.

ತಾಪಮಾನ ಏರಿಕೆಯಿಂದ ಮನು ಕುಲಕ್ಕೆ ಮಾರಕವಾಗುವ ಪರಿಣಾಮಗಳ ಗಂಭೀರತೆಯನ್ನು ವಿಶ್ವದ ಪರಿಸರ ತಜ್ಞರು, ವಿಜ್ಞಾನಿಗಳು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಎಚ್ಚರಿಕೆಯ ಹಿನ್ನಲೆಯಲ್ಲಿಯೇ ತಾಪಮಾನ ಏರಿಕೆ ತಡೆಯುವ ಕ್ರಮಗಳ ಕುರಿತಂತೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಅಂತಹ ಚರ್ಚೆಯ ಮುಖ್ಯ ಘಟ್ಟ ಎಂದರೆ ೨೦೧೫ ರಲ್ಲಿಯ ಪ್ಯಾರೀಸ್ ಹವಾಮಾನ ಒಪ್ಪಂದ ತಾಪಮಾನ ಏರಿಕೆ ತಡೆಯಲೂ ಅದರಿಂದ ಉಂಟಾಗುವ ವಿಪತ್ತಿನಿಂದ ಮನುಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ಯಾರೀಸ್ ಹವಾಮಾನ ಒಪ್ಪಂದ ಅತ್ಯಂತ ಪ್ರಮುಖ ಘಟ್ಟ ಎಂದು ಹೇಳಬಹುದು.

ಈ ಶತಮಾನದಲ್ಲಿ ಜಾಗತೀಕ ತಾಪಮಾನ ಏರಿಕೆಯನ್ನು ೨ ಡಿ.ಗ್ರಿ. ಸೆ.ಲಿಯಸ್ ಒಳಗೆ ಮೀತಿ ಗೊಳಿಸುವುದು ಒಪ್ಪಂದದ ಪ್ರಮುಖ ತೀರ್ಮಾನವಾಗಿದೆ. ತಾಪಮಾನ ಏರಿಕೆ ತಡೆಯುವಲ್ಲಿ ಎಲ್ಲಾ ದೇಶಗಳ ಜವಾಬ್ದಾರಿಯೂ ಇದೆ. ಆದರೆ ಅಂತಹ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಮತ್ತು ಪಾಲಿಸುವಲ್ಲಿ ಅಮೆರಿಕಾ, ಸೌದಿ ಅರೇಬಿಯಾ ದೇಶಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆಸಕ್ತಿ ತೊರದಿರುವುದೇ ಸದ್ಯದ ಜಾಗತೀಕ ಆತಂಕ.

Leave a Comment