ತಾಪಂ ನೂತನ ಉಪಾಧ್ಯಕ್ಷರಾಗಿ ಲಲಿತಾ ಈಶ್ವರ್ ಆಯ್ಕೆ

ಮಂಗಳೂರು, ಜು. ೧೭- ಪುತ್ತೂರು ತಾಲೂಕು ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಬಿಜೆಪಿಯ ಲಲಿತಾ ಈಶ್ವರ್ ಅವಿರೋಧ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷೆಯಾಗಿದ್ದ ರಾಜೇಶ್ವರಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ತಾಪಂ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಚುನಾವಣೆಯಲ್ಲಿ ಲಲಿತಾ ಈಶ್ವರ್ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಲಾಯಿತು. ತಾಪಂಗೆ ೨೦೧೬ರಲ್ಲಿ ಚುನಾವಣೆ ನಡೆದಿದ್ದು, ಒಟ್ಟು ೨೪ ಸ್ಥಾನಗಳ ಪೈಕಿ ೧೬ ಸ್ಥಾನಗಳು ಬಿಜೆಪಿ ಗೆದ್ದುಕೊಂಡಿತ್ತು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಅವಧಿ ೫ ವರ್ಷವಾಗಿದ್ದರೂ ಪಕ್ಷದೊಳಗಿನ ಆಂತರಿಕ ನಿರ್ಧಾರದ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಭವಾನಿ ಚಿದಾನಂದ ಅಧ್ಯಕ್ಷರಾಗಿ ರಾಜೇಶ್ವರಿ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಎರಡೂವರೆ ವರ್ಷದ ನಂತರ ಅಧ್ಯಕ್ಷೆ ಭವಾನಿ ಚಿದಾನಂದ ಅವರು ರಾಜೀನಾಮೆ ನೀಡಿದ್ದು, ಅಧ್ಯಕ್ಷರಾಗಿ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷೆಯಾಗಿದ್ದ ರಾಜೇಶ್ವರಿ ಡಿಸೆಂಬರ್ ತಿಂಗಳಲ್ಲಿಯೇ ರಾಜೀನಾಮೆ ನೀಡಿದ್ದರೂ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ವಿಳಂಬಗೊಂಡಿತ್ತು. ಇದೀಗ ಲಲಿತಾ ಈಶ್ವರ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ , ಬಿಜೆಪಿ ತಾಪಂ ಸದಸ್ಯರಾದ ಭವಾನಿ ಚಿದಾನಂದ್, ರಾಜೇಶ್ವರಿ, ತೇಜಸ್ವಿನಿ ಗೌಡ ಕಟ್ಟಪುಣಿ, ತಾರಾ ತಿಮ್ಮಪ್ಪ ಪೂಜಾರಿ, ಪಿ.ವೈ. ಕುಸುಮಾ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮುಕುಂದ ಗೌಡ, ಸಾಜ ರಾಧಾಕೃಷ್ಣ ಆಳ್ವಾ, ಶಿವರಂಜನ್, ಮೀನಾಕ್ಷಿ ಮಂಜುನಾಥ್, ಜಯಂತಿ ಆರ್. ಗೌಡ, ದಿವ್ಯಾ ಪುರುಷೋತ್ತಮ ಗೌಡ, ಸುಜಾತ ಆಚಾರ್ಯ ಹಾಜರಿದ್ದರು.
ತಾಪಂ ಚುನಾವಣೆಯಲ್ಲಿ ಚಾರ್ವಾಕ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಲಲಿತಾ ಈಶ್ವರ್ ಅವರು ಹಿಂದೆ ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು.
ಚುನಾವಣಾ ಪ್ರಕ್ರಿಯೆ ನಂತರ ತಾಪಂ ಸಭಾಂಗಣದಲ್ಲಿ ನೂತನ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಮಾಜಿ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಮಾಜಿ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಕುಸುಮಾ ಪಿ.ವೈ, ಸಾಜ ರಾಧಾಕೃಷ್ಣ ಆಳ್ವಾ, ಮುಕುಂದ ಗೌಡ, ತೇಜಸ್ವಿನಿ ಗೌಡ, ಹರೀಶ್ ಬಿಜತ್ರೆ ಮಾತನಾಡಿದರು.

Leave a Comment