ತಾನಿಯಾ ೮ನೇ ವಯಸ್ಸಿನಲ್ಲೇ ಚೆಸ್ ಟೂರ್ನಿಯಲ್ಲಿ ಚಾಂಪಿಯನ್

ತಾನಿಯಾ ಸಚ್‌ದೇವ್ ದೇಶ ಕಂಡ ಅಪ್ರತಿಮ ಚೆಸ್ ಆಟಗಾರ್ತಿ. ಈಕೆ ೮ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ದೇಶದ ೮ನೇ ಮಹಿಳಾ ಗ್ರಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರ್ಜುನಾ ಪ್ರಶಸ್ತಿ ವಿಜೇತಳಾಗಿರುವ ತಾನಿಯಾ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಆಗುವ ಮೂಲಕ ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಂತು ಸುಳ್ಳಲ್ಲ. ಈಕೆ ನಡೆದು ಬಂದ ದಾರಿ ಕುರಿತು ಇಲ್ಲೊಂದು ವರದಿ.

ದೆಹಲಿಯಲ್ಲಿ ಜನಿಸಿದ ತಾನಿಯಾ, ವಸಂತ್ ವಿಹಾರದಲ್ಲಿರುವ ಮಾರ್ಡನ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದರು. ಇದರ ಜೊತೆಗೆ ರಾಜಕೀಯ ಶಾಸ್ತ್ರ ಮತ್ತು ಮನಶಾಸ್ತ್ರವನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.

tania

ಓದಿನ ಜೊತೆ ಜೊತೆಗೆ ಈಕೆಯ ತಂದೆ ಚೆಸ್ ಆಡುವುದನ್ನು ಹೇಳಿಕೊಡಲಾರಂಭಿಸಿದರು. ಚೆಸ್ ಆಟವನ್ನು ಹೇಳಿಕೊಟ್ಟ ಒಂದು ವಾರದಲ್ಲಿ ತಂದೆಯನ್ನೇ ಚೆಕ್‌ಮೆಟ್ ಮಾಡುವಲ್ಲಿ ಯಶಸ್ವಿಯಾದರು.

ಹೇಳಿ ಕೇಳಿ ತಾನಿಯಾ ಕುಟುಂಬದಲ್ಲಿ ಅಧ್ಲೀಟ್‌ಗಳಿಂದ ಬಂದ ಕುಟುಂಬ ಈಕೆಯ ತಂದೆ ಕಾಲೇಜಿನಲ್ಲಿ ಫುಟ್ಬಾಲ್ ಆಡಿದ್ದಾರೆ. ತಾಯಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್‌ನಲ್ಲಿ  ಆಟವಾಡಿದ್ದಾರೆ. ತಾನಿಯಾ ಕೂಡ ಚೆಸ್ ಆಟವನ್ನು ವರದಾನವಾಗಿ ಪಡೆದಿದ್ದಾರೆ.

ಚೆಸ್ ಆಟದಲ್ಲಿ ಆಸಕ್ತಿ ಹೊಂದಿದ್ದ ಈಕೆಯ ಸಹೋದರನ ಬಳಿ ತಾನಿಯಾಳನ್ನು ತಂದೆ ಕರೆದೊಯ್ದರು. ಆಗ ವರ್ಷದವಳಾಗಿದ್ದ ತಾನಿಯಾ ಚೆಸ್‌ನಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆಟವಾಡುತ್ತಾಳೆಂದು ನಿರೀಕ್ಷಿಸಿರಲಿಲ್ಲ. ಇದಾದ ೨-೩ ದಿನಗಳ ನಂತರ ಚೆಸ್ ಆಟದ ನಿಯಮಾವಳಿಗಳನ್ನು ತಿಳಿದುಕೊಂಡು ತನ್ನ ತಂದೆಯವರನ್ನೇ ಚೆಸ್ ಆಟದಲ್ಲಿ ಸೋಲಿಸಿದ್ದೆ. ಅಲ್ಲಿಂದ ತಮ್ಮ ತಂದೆ- ತಾಯಿ ತಮ್ಮ ಬೆಂಬಲಕ್ಕೆ ನಿಂತು ವೃತ್ತಿಪರ ತರಬೇತಿದಾರರ ಬಳಿಗೆ ತರಬೇತಿಗೆ ಸೇರಿಸಿದರು ಎನ್ನುತ್ತಾರೆ ತಾನಿಯಾ.

ದಿನಕಳೆದಂತೆ ತಾನಿಯಾ ಚೆಸ್ ಆಟದಲ್ಲಿ ಆಳವಾಗಿ ತಲ್ಲೀನರಾಗುತ್ತಿದ್ದರು. ತಮ್ಮ ಮಗಳ ನಡೆಯನ್ನು ಗಮನಿಸಿದ ಕುಟುಂಬ ಸದಸ್ಯರು ಆಕೆಗೆ ತರಬೇತಿ ನೀಡುವಂತೆ ಚೆಸ್ ಗ್ರಾಂಡ್ ಮಾಸ್ಟರ್ ಕೆ.ಸಿ. ಜೋಶಿಗೆ ಮನವಿ ಮಾಡಿದರು.

ತಾನಿಯಾ ಏಳು ವರ್ಷದವಳಾಗಿದ್ದಾಗ ಚೆಸ್ ಆಟವನ್ನು ಸವಾಲಾಗಿ ಸ್ವೀಕರಿಸಿ ಆಟದಲ್ಲಿ ಪರಿಪಕ್ವವಾಗುತ್ತಾ ಹೋದಳು. ೧೯೯೪ರಲ್ಲಿ ಮೊದಲ ಬ್ರಿಟಿಷ್ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿರುವುದೇ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ೮, ೯ ಮತ್ತು ೧೦ನೇ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿದಳು. ಇದು ಲಿಮ್ಕಾ ಪುಸ್ತಕದಲ್ಲಿ ದಾಖಲಾಗಿ ಇತಿಹಾಸ ಸೃಷ್ಟಿಸಿದರು ತಾನಿಯಾ.

ಹಲವು ತಾಸುಗಳ ಕಾಲ ತಮ್ಮ ತರಬೇತಿದಾರರೊಂದಿಗೆ ಚೆಸ್ ಆಟದ ಬಗ್ಗೆ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಹೇಗೆ ಆಟವಾಡಬೇಕೆಂಬ ಕುರಿತು ಇತರ ಗ್ರಾಂಡ್ ಮಾಸ್ಟರ್ ಜತೆ ಚರ್ಚೆ ನಡೆಸುತ್ತಿದ್ದೆ. ನಾನು ಆಟದಲ್ಲಿ ಗೆಲುವು ಸಾಧಿಸಿ ಮನೆಗೆ ಬಂದಾಗ ಪ್ರತಿಯೊಬ್ಬರು ರೋಮಾಂಚನಗೊಳ್ಳುತ್ತಿದ್ದರು. ಇದು ನನಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜನ ದೊರೆಯಿತು ಎಂದು ಹೇಳಿದರು.

ಚೆಸ್ ಟೂರ್ನಮೆಂಟ್ ಆರಂಭಕ್ಕೆ ಮುನ್ನ ಸಾಕಷ್ಟು ಕಸರತ್ತು ನಡೆಸುತ್ತಿದ್ದೆ. ಅಂದರೆ ಒಂದು ವಾರಕ್ಕೆ ಮುನ್ನ ಪ್ರತಿ ದಿನ ಆರು ಗಂಟೆಗಳ ಕಾಲ ಚೆಸ್ ಆಡುತ್ತಿದ್ದೆ. ೧೨ ವರ್ಷದೊಳಗಿನ ಭಾರತದ ಚಾಂಪಿಯನ್ ೨೦೦೦ ಇಸವಿಯಲ್ಲಿ ಏಷ್ಯಾ ೧೪ ವರ್ಷದೊಳಗಿನ ಚಾಂಪಿಯನ್ ಪಟ್ಟ ಅಲಂಕರಿಸಿರುವುದೇ ಇದಕ್ಕೆ ಸಾಕ್ಷಿ. ೧೯೯೮ರಲ್ಲಿ ೧೨ ವರ್ಷದೊಳಗಿನ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು.

ನಾನು ವಿಶ್ವ ಚಾಂಪಿಯನ್ ಆಗಬೇಕಾದರೆ ತರಬೇತಿ ಸಾಲದು ಎಂಬ ಅಂಶವನ್ನು ಅರಿತ ತಾನಿಯಾ. ಕೆ.ಸಿ.ಜೋಶಿ ಜೊತೆ ಮಾತ್ರವಲ್ಲದೆ ಐ.ಎಂ. ವಿಶಾಲ್ ಸರೀನ್ ಮತ್ತು ಜಿ.ಎಂ.ಉಬಿಲಾವ ಬಳಿಯೂ ತರಬೇತಿ ಪಡೆದುಕೊಂಡರು.

೨೦೦೫ರಲ್ಲಿ ತಾನಿಯಾ ಕನಸು ನನಸಾಗುವ ಕಾಲ ಆರಂಭವಾಯಿತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನಿಯಾ ಖ್ಯಾತರಾಗುತ್ತಾ ಹೋದರು. ಅದು ಹೇಗೆಂದರೆ ೨೦೦೬ ಮತ್ತು ೨೦೦೭ರಲ್ಲಿ ರಾಷ್ಟ್ರೀಯ ಮಹಿಳಾ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ೨೦೦೭ರಲ್ಲಿ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಜಯ ಗಳಿಸಿದರು. ಈಕೆಗೆ ೨೦೦೯ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ ತಾನಿಯಾಗೆ ಲಭಿಸಿತು.

೨೦೧೨ ರಲ್ಲಿ ರೆಡ್ ಬುಲ್ ಜೊತೆ ಪಾಲುದಾರರಾದರು. ಇದು ತಾನಿಯಾಗೆ ಪಾಲುದಾರಿಕೆ ಮಾತ್ರ ಆಗಿರಲಿಲ್ಲ. ತನ್ನ ಅಗತ್ಯತೆಗೆ ಬೆಂಬಲವಾಗಿ ನಿಂತರು. ದೇಶದಲ್ಲಿ ವಿನೂತನ ಚೆಸ್ ಆಟಕ್ಕೆ ಮುನ್ನುಡಿ ಬರೆದರು. ಉದಾಹರಣೆಗೆ ತಾಜ್‌ಮಹಲ್ ಮುಂದೆ ಒಂದೇ ಬಾರಿ ೧೦ ಮಂದಿ ಆಟಗಾರರ ಜೊತೆ ಚೆಸ್ ಆಡಿದ್ದೇನೆ. ಇದು ನಿಜಕ್ಕೂ ತಮಗೆ ಸವಾಲಾಗಿ ಪರಿಣಮಿಸಿತ್ತು. ಇದರ ಜೊತೆಗೆ ಮೊಟ್ಟ ಮೊದಲ ಬಾರಿಗೆ ಟ್ವಿಟರ್‌ನಲ್ಲಿ ಚೆಸ್ ಆಡಿದ್ದು ಮತ್ತೊಂದು ವಿಶೇಷ. ಈ ಟ್ವಿಟರ್ ಚೆಸ್‌ನಲ್ಲಿ ಜಗತ್ತಿನಾದ್ಯಂತ ಶ್ರೇಷ್ಠ ಚೆಸ್ ಆಟಗಾರರು ಭಾಗವಹಿಸಿದ್ದರು. ಇದು ಚೆಸ್ ಆಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ತನ್ನ ಅನುಭವವನ್ನು ಹಂಚಿಕೊಂಡರು.

Leave a Comment