ತಾತ್ಕಾಲಿಕ ಬಸ್ ನಿಲ್ದಾಣ ಆರಂಭ

ಕೊಳ್ಳೇಗಾಲ.ಫೆ.13- ಮಹಾಶಿವರಾತ್ರಿ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಸಾರಿಗೆ ಇಲಾಖೆಯು ಒಂಭತ್ತು ದಿನಗಳ ಕಾಲ ಪಟ್ಟಣದ ಹೊರ ವಲಯದಲ್ಲಿ ತಾತ್ಕಾಲಿಕ ಬಸ್‍ನಿಲ್ದಾಣ ಆರಂಭ ಮಾಡಲಾಗಿದೆ.
ಬೆಂಗಳೂರು, ಮಳ್ಳವಳ್ಳಿ, ಕನಕಪುರ, ಮಂಡ್ಯ ಜಿಲ್ಲೆಗಳಿಂದ ಆಗಮಿಸುವ ಭಕ್ತರು ಬಸ್‍ನಿಲ್ದಾಣಕ್ಕೆ ತೆರಳಿ ಗೊಂದಲ ಉಂಟಾಗದ ರೀತಿಯಲ್ಲಿ ಪಟ್ಟಣದ ಹೊರವಲಯದ ಹೊಸಅಣಗಳ್ಳಿ ಸಮೀಪದ ಪೆಟ್ರೋಲ್ ಬಂಕ್‍ನ ಬಳಿ ಕೊಳ್ಳೇಗಾಲ ಸಾರಿಗೆ ಡಿಪೋ ವತಿಯಿಂದ ಬಸ್‍ನಿಲ್ದಾಣ ಆರಂಭ ಮಾಡಲಾಗಿದೆ.
ಇದೇ ವೇಳೆ ಡಿಪೋ ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ಮಹಾಶಿವರಾತ್ರಿಯ ಅಂಗವಾಗಿ ಸುಮಾರು 350 ಕ್ಕೂ ಹೆಚ್ಚು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಬಸ್‍ನಿಲ್ದಾಣ ಮತ್ತು ರಸ್ತೆ ಕಾಮಗಾರಿಯಿಂದಾಗಿ ಬಸ್ ತೆರಳಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ 9 ದಿನಗಳ ಮಟ್ಟಿಗೆ ತಾತ್ಕಾಲಿಕ ಬಸ್‍ನಿಲ್ದಾಣ ಆರಂಭ ಮಾಡಲಾಗಿದೆ. ಇಲ್ಲಿಗೆ ನೀರಿನ ವ್ಯವಸ್ಥೆ ಮತ್ತು ಪ್ರಯಾಣಿಕರ ತಂಗಲು ನೆರಳಿನ ವ್ಯವಸ್ಥೆಯನ್ನು ಸಹಾ ಮಾಡಲಾಗುವುದು ಎಂದು ತಿಳಿಸಿದರು.

Leave a Comment