ತಾತನಾದ ಅನಂತ್

ಹಿರಿಯ ನಟ ಅನಂತ್‌ನಾಗ್ ತಾತನಾಗಿದ್ದಾರೆ.ಅರೆ ಮಗಳಿಗೆ ಮಗುವಾಯಿತಾ? ಎನ್ನುವ ಸಂದೇಹ ಪ್ರಶ್ನಾರ್ಹ.ಆದರೆ ತಾತನಾಗಿರುವುದು ತೆರೆಯ ಮೇಲೆ ’ವೀಕೆಂಡ್ಚಿತ್ರದಲ್ಲಿ ಅನಂತ್ ನಾಗ್ ತಾತನಾಗಿದ್ದಾರೆ.

filmweek-end_156-dirತಾತ ಮೊಮ್ಮಗನ ನಡುವೆ ನಡೆಯುವ ಕತೆಯ ಹಂದರವನ್ನು ಒಳಗೊಂಡಿರುವ ಚಿತ್ರದಲ್ಲಿ ಟೆಕ್ಕಿಗಳು ಕೆಲವಿದ್ದಾಗ ಏನು ಮಾಡುತ್ತಾರೆ.ಕೆಲಸ ಕಳೆದುಕೊಂಡಾಗ ಏನೆಲ್ಲಾ ಮಾಡುತ್ತಾರೆ ಎನ್ನುವ ಕಥೆಯ ಹಿನ್ನೆಲೆಯಲ್ಲಿ ಚಿತ್ರ ಸಾಗಲಿದೆ.

ಒಬ್ಬಂಟಿ ತಾತ ಮೊಮ್ಮೊಗನೊಂದಿಗೆ ಹೇಗೆ ಇರುತ್ತಾರೆ ಎನ್ನುವುದು ತಮ್ಮ ಪಾತ್ರ ಎಂದು ಮಾತಿಗಿಳಿದರು ಹಿರಿಯ ನಟ ಅನಂತ್‌ನಾಗ್.ಇಡೀ ಚಿತ್ರದಲ್ಲಿ ತಮ್ಮ ಪಾತ್ರ ಬರುತ್ತದೆ. ಟೆಕ್ಕಿಗಳ ಜೀವನ ಮತ್ತು ವಯಸ್ಸಾದವರ ನಡುವಿನ ಕತೆಯನ್ನು ಚಿತ್ರ ಒಳಗೊಂಡಿದ್ದು ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿವರ ನೀಡಿದರು.

ವೀಕೆಂಡ್ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳನ್ನು ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತುತ್ತು.ಅಲ್ಲಿ ತಂಡ ಮಾತಿಗಿಳಿಯಿತು. ನಿರ್ದೇಶಕ ಶೃಂಗೇರಿ ಸತೀಶ್, ಟೆಕ್ಕಿಗಳ ಜೀವನ ಕುರಿತ ಚಿತ್ರ ಇದು.ಸೋಮವಾರದಿಮದ ಶುಕ್ರವಾರದವರೆಗೆ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದು ಶುಕ್ರವಾರ ರಾತ್ರಿಯಿಂದ ಭಾನವಾರದ ರಾತ್ರಿವರೆಗಿನ ಮೋಜ ಮಸ್ತಿಯ ಕುರಿತು ಚಿತ್ರ ಮಾಡಲಾಗುತ್ತಿದೆ.ಬೆಂಗಳೂರಿನಲ್ಲಿ ಬಹುತೇಕ ಭಾಗದ ಚಿತ್ರೀಕರಣವಾಗಿದ್ದು ಇನ್ನು ೮ದಿನ ಚಿತ್ರೀಕರಣ ಬಾಕಿ ಇದೆ ಎಂದರು.

filmweek-end_122ananth4

ನಿರ್ಮಾಪಕ ಮಂಜುನಾಥ್,ಟೆಕ್ಕಿಗಳ ಮನಸ್ಥಿಯ ಸುತ್ತ ಚಿತ್ರದ ಕತೆ ಸಾಗಲಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿವಿರ ನೀಡಿದರು.

ನಾಯಕ ಮಿಲನ್ ತಾತ ಮತ್ತು ಮೊಮ್ಮಗನ ನಡುವೆ ನಡುವೆ ನಡೆಯುವ ಘಟನೆ ಎಂದರೆ ನಟಿ,ರಕ್ಷಾ ಗೈರು ಹಾಜರಾಗಿದ್ದರು.

Leave a Comment