ತಾಜ್‌ಮಹಲ್ 2’ ಹಾಡಿಗೆ ಧ್ವನಿಯಾದ ವಿಜಯಪ್ರಕಾಶ್

ಬೆಂಗಳೂರು, ಫೆ 7- ಈ ಹಿಂದೆ ‘ಡೇಂಜರ್ ಜೋನ್’ ‘ನಿಶ್ಯಬ್ದ 2’ ‘ಅನುಷ್ಕ’ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4 ನೇ ಚಿತ್ರ ‘ತಾಜ್‌ಮಹಲ್ 2’   ಚಿತ್ರಕ್ಕಾಗಿ ಮನ್ವರ್ಷಿ ನವಲಗುಂದ ಅವರು ಬರೆದಿರುವ ‘ಜೀವಾ ಬಿಡುವೆ ನಿನಗಾಗಿ. ನಾ ಜೀವ ಕೊಡುವೆ ನಿನಗಾಗಿ‘ ಎಂಬ ಹಾಡನ್ನು ಖ್ಯಾತ ಗಾಯಕ ವಿಜಯಪ್ರಕಾಶ್ ಮುಂಬೈನ ಸ್ಟುಡಿಯೋದಲ್ಲಿ ಹಾಡಿದ್ದಾರೆ

ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಸಕಲೇಶಪುರ, ಬೆಂಗಳೂರು ಸುತ್ತಮುತ್ತ, ಮೈಸೂರು, ಗಗನ ಚುಕ್ಕಿ, ಭರ ಚುಕ್ಕಿ ಮುಂತಾದ ಕಡೆ ೫೦ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಶ್ರೀಗಂಗಾಂಬಿಕೆ ಫ಼ಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.

ನಿರ್ದೇಶಕ ದೇವರಾಜ್ ಕುಮಾರ್ ಅವರೇ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಸಮೃದ್ಧಿ, ಶೋಭ್‌ರಾಜ್, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಜಿಮ್ ರವಿ, ವಿಕ್ಚರಿ ವಾಸು ಮುಂತಾದವರಿದ್ದಾರೆ.

ವಿಕ್ರಂ ಸೆಲ್ವ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ, ವೀನಸ್ ಮೂರ್ತ್ ಅವರ ಛಾಯಾಗ್ರಹಣವಿದೆ.  ವಿಜಯ್  ಅವರ ಸಂಕಲನವಿರುವ ಈ ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನುಕುಮಾರ್ ನೃತ್ಯ ನಿರ್ದೇಶನವಿದೆ.

Leave a Comment