ತಲ್ವಾರ್‌ನಿಂದ ಥಳಿಸಿಕೊಂಡು ದೇವಿಗೆ ರಕ್ತ ಸಮರ್ಪಣೆ

ಪರಂಪರೆ, ನಂಬಿಕೆ ಹೆಸರಿನಲ್ಲಿ ಪ್ರಪಂಚದಲ್ಲಿ ಏನೇನೋ ನಡೆಯುತ್ತೆ. ಅದರಲ್ಲೂ ಧಾರ್ಮಿಕ ತಾಣಗಳಲ್ಲಂತೂ ಇದು ಹೆಚ್ಚಾಗಿ ಕಾಣಿಸುತ್ತದೆ. ಜನರು ತಮ್ಮ ಬೇಡಿಕೆ ಈಡೇರಿಸಲು ಕೆಲವೆಡೆ ದೇವರಿಗೆ ಕಾಣಿಕೆ ನೀಡುತ್ತೇನೆ ಎಂದು ಹರಕೆ ಹೊತ್ತರೆ, ಇನ್ನೂ ಕೆಲವೆಡೆ ಜನರು ತಮ್ಮನ್ನು ತಾವು ಹಿಂಸಿಸಿಕೊಂಡು ದೇವರಿಗೆ ಕಾಣಿಕೆ ಅರ್ಪಿಸುತ್ತಾರೆ. ಇದರಲ್ಲಿ ಕೇರಳದ ದೇವಾಲಯದ ಈ ಪರಂಪರೆಯೂ ಒಂದಾಗಿದೆ.

ಕೇರಳದ ತ್ರಿಶೂರಿನಲ್ಲಿ ಒಂದು ಮಂದಿರವಿದೆ. ಅಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದಲ್ಲಿ ಶ್ರದ್ಧೆ, ಪರಂಪರೆಯ ಹೆಸರಿನಲ್ಲಿ ಜನರು ತಮಗೆ ತಾವೆ ಹೊಡೆದುಕೊಂಡು ದೇವಿಗೆ ರಕ್ತವನ್ನು ಅರ್ಪಿಸುತ್ತಾರೆ. ಈ ಉತ್ಸವದಲ್ಲಿ ಭಾಗಿಯಾಗಲು ದೇಶದ ಮೂಲೆ ಮೂಲೆಯಿಂದ ಜನರು ಸಾಗರೋಪಾದಿಯಲ್ಲಿ ಬಂದು ಸೇರುತ್ತಾರೆ.

ಈ ಮಂದಿರದ ಹೆಸರು ಕೊಡುಂಗಲ್ಲೂರು ಭಗವತಿ ಮಂದಿರ. ಇದು ಕೇರಳದ ತ್ರಿಶೂರು ಜಿಲ್ಲೆಯ ಕೊಡುಂಗಲ್ಲೂರಿನಲ್ಲಿ ನೆಲೆಸಿದೆ. ದೇವಿ ಭಗವತಿಯನ್ನು ಇಲ್ಲಿ ಪೂಜೆ ಮಾಡಲಾಗುತ್ತದೆ. ಇಲ್ಲಿ  ನಡೆಯುವ  ಉತ್ಸವವನ್ನು ಭರಣಿ ಉತ್ಸವ ಎಂದು ಕರೆಯಲಾಗುತ್ತದೆ.

ಈ ಉತ್ಸವದ ಆರಂಭವನ್ನು ಕವು ತಿಂಡಲ್ ಎಂದು ಕರೆಯಲಾಗುತ್ತದೆ. ಈ ಉತ್ಸವದಲ್ಲಿ ಭಾಗಿಯಾಗಲು ತಲ್ವಾರ್ ಹಿಡಿದುಕೊಂಡು ಹಲವಾರು ಮಹಿಳೆ ಮತ್ತು ಪುರುಷರು ಬರುತ್ತಾರೆ. ಈ ತಲ್ವಾರುಧಾರಿಗಳನ್ನು ಭಕ್ತರು ದೇವಿಯ ರಾಯಭಾರಿ ಎಂದು ಹೇಳುತ್ತಾರೆ. ಇವರು ತಮ್ಮ ಹಣೆಗೆ ತಲ್ವಾರ್‌ನಿಂದ ಹೊಡೆದು ದೇವಿಗೆ ರಕ್ತವನ್ನು ಅರ್ಪಿಸುತ್ತಾರೆ.

ಮೂಲತಃ ಶಿವ ಮಂದಿರ
ಇಲ್ಲಿ ಭಗವತಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಆದರೆ ಇದು ಮೂಲತಃ ಶಿವ ಮಂದಿರ ಎಂದು ಹೇಳಲಾಗುತ್ತದೆ. ಯಾಕೆಂದರೆ ಇಂದಿಗೂ ಇಲ್ಲಿ ಮೊದಲಿಗೆ ಶಿವನ ಪೂಜೆ ನಡೆದು ನಂತರ ದೇವಿಗೆ ಪೂಜೆ ನಡೆಯುತ್ತದೆ.

ಈ ಉತ್ಸವವನ್ನು ಮಲಯಾಲಂ ತಿಂಗಳಾದ ಮೀನಮ್ ಅಂದರೆ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ಆಚರಣೆ ಮಾಡುತ್ತಾರೆ. ಕವು ತಿಂಡಲ್‌ನ ಮುಖ್ಯ ಸಮಾರಂಭಕ್ಕೆ ಲಕ್ಷಾಂತರ ಜನರು ಬರುತ್ತಾರೆ.  ಅಂದು ದೇವಾಲಯದ ಇಷ್ಟದೈವಕ್ಕೆ ಅಶುಭ ಗಾನ ಹಾಡುತ್ತಾರೆ.  ಈ ರೀತಿ ಮಾಡುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಹಾಗೂ ಸಂಕಷ್ಟ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.

Leave a Comment