ತಲೆ ಮೇಲೆ ಹಲಸು ಬಿತ್ತೆಂದು ಆಸ್ಪತ್ರೆಗೆ ಹೋದವರಿಗೂ ಕೊರೋನಾ!

ಕಾಸರಗೋಡು, ಮೇ ೨೫- ಹಲಸಿನ ಹಣ್ಣು ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರ ಬೆನ್ನುಮೂಳೆಗೆ ಗಾಯಗಳಾಗಿದ್ದು ಅವರಲ್ಲಿ ಕೊರೋನಾ ಪರೀಕ್ಷೆ ಸಂದರ್ಭ ಸೋಂಕು ದೃಢಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಆಟೋ ಚಾಲಕರೊಬ್ಬರ ತಲೆ ಮೇಲೆ ಹಲಸಿನಹಣ್ಣು ಬಿದ್ದಿತ್ತು. ಘಟನೆಯಲ್ಲಿ ಅವರ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಯಲ್ಲಿ ಕೊರೊನಾ ದೃಢಪಟ್ಟಿದೆ. ಇವರಿಗೆ ಯಾವ ರೀತಿ ಸೋಂಕು ತಗುಲಿದೆ ಎಂದು ತಿಳಿದುಬಂದಿಲ್ಲ.

Share

Leave a Comment